Knowledge Story : ಬೆಳಗ್ಗೆ ಹಾಸಿಗೆಯಲ್ಲಿ ಕಣ್ಣು ತೆರೆದ ಬಳಿಕ ಮತ್ತು ರಾತ್ರಿ ಹಾಸಿಗೆಯಲ್ಲಿ ಕಣ್ಣು ಮುಚ್ಚುವವರೆಗೆ ಮನುಷ್ಯ ಏನನ್ನಾದರೂ ಮಾತನಾಡುತ್ತಲೇ ಇರುತ್ತಾನೆ. ಕೆಲ ಜನರು ಎಷ್ಟೊಂದು ಮಾತಿನ ಮಲ್ಲರಾಗಿರುತ್ತಾರೆ ಎಂದರೆ, ಅವರು ಒಮ್ಮೆ ಮಾತನಾಡಲು ಆರಂಭಿಸಿದರೆ, ನಿಲ್ಲುವ ಮಾತೆ ಎತ್ತುವುದಿಲ್ಲ. ಅಷ್ಟೇ ಅಲ್ಲ ಅವರ ಮನಸ್ಸಿನಲ್ಲಿ ಯಾವುದಾದರೊಂದು ವಿಚಾರ ನಡೆದೇ ಇರುತ್ತದೆ ಮತ್ತು ಅದನ್ನು ಸಮಯ ಸಿಕ್ಕಾಗಲೆಲ್ಲಾ ಅವರು ಅದನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಒಂದು ದಿನದಲ್ಲಿ ನೀವು ಎಷ್ಟು ಮಾತನಾಡುತ್ತೀರಿ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಬಹುಶಃ ಅತ್ತ ನೀವು ಗಮನವನ್ನು ಕೂಡ ಹರಿಸಿರಲಿಕ್ಕಿಲ್ಲ ಮತ್ತು ವ್ಯಕ್ತಿ ದಿನವೊಂದರಲ್ಲಿ ಎಷ್ಟು ಮಾತನಾಡುತ್ತಾನೆ ಎಂಬುದನ್ನು ಯೋಚಿಸಿರಲಿಕ್ಕಿಲ್ಲ. ಇಂದು ನಾವು ನಿಮಗೆ ಈ ಕುರಿತು ಮಾಹಿತಿಯನ್ನು ನೀಡಲಿದ್ದೇವೆ ಮತ್ತು ಈ ಮಾಹಿತಿ ತುಂಬಾ ರೋಚಕವಾಗಿದೆ. ಲಿಂಕ್ದಇನ್ ಲರ್ನಿಂಗ್ ಇನ್ಸ್ಟ್ರಕ್ಟರ್ ಜೇಫ್ ಆನ್ಸೆಲ್ ರಿಸರ್ಚ್ ಪ್ರಕಾರ, ಒಂದು ದಿನದಲ್ಲಿ ವ್ಯಕ್ತಿಯೊಬ್ಬ ಕನಿಷ್ಠ ಅಂದರೆ 70000 ಶಬ್ದಗಳನ್ನು ಮಾತನಾಡುತ್ತಾನೆ. ಆದರೆ, ಕೆಲವರು ಇದಕ್ಕಿಂತಲೂ ಹೆಚ್ಚಿನ ಶಬ್ದಗಳನ್ನು ಕೂಡ ಮಾತನಾಡುತ್ತಾರೆ.
ಇದನ್ನೂ ಓದಿ-ಭಾರತದ ಭೂಪಟದೊಂದಿಗೆ ಸದಾ ಅಂಟಿಕೊಂಡಿರುವ ಶ್ರೀಲಂಕಾ ನಕ್ಷೆ.. ಇದಕ್ಕಿದೆ ಒಂದು ಮುಖ್ಯ ಕಾರಣ
ತಮ್ಮ ಇಡೀ ಜೀವನದಲ್ಲಿ ಮನುಷ್ಯ ಎಷ್ಟು ಮಾತನಾಡುತ್ತಾನೆ?
ಮನುಷ್ಯ ಒಂದು ದಿನದಲ್ಲಿ ಎಷ್ಟು ಮಾತನಾಡುತ್ತಾನೆ ಎಂಬ ಸಂಗತಿ ಗೊತ್ತಾಯ್ತು. ಆದರೆ, ತನ್ನ ಇಡೀ ಜೀವನದಲ್ಲಿ ಮನುಷ್ಯ ಎಷ್ಟು ಮಾತನಾಡುತ್ತಾನೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಮನುಷ್ಯ ತನ್ನ ಇಡೀ ಜೀವನದಲ್ಲಿ 860,341,500 ಅಂದರೆ, 86 ಕೋಟಿ ಶಬ್ದಗಳನ್ನು ಮಾತನಾಡುತ್ತಾನೆ. ಬ್ರಿಟಿಷ್ ಬರಹಗಾರ ಹಾಗೂ ಬ್ರಾಡ್ ಕಾಸ್ಟರ್ ಆಗಿರುವ ಗೇಲ್ಸ್ ಬ್ರಾಂಡ್ರೇಥ್ ಅವರ The Joy of Lex: How to Have Fun with 860,341,500 Words ಪುಸ್ತಕದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಇದನ್ನೂ ಓದಿ-Knowledge Story: OK ಎಂಬುದರ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಆಸಕ್ತಿಕರ ಮಾಹಿತಿ ಇಲ್ಲಿದೆ
ನಿಘಂಟುವಿನ ಜೊತೆಗೆ ಹೋಲಿಕೆ
ಈ ಶಬ್ದಗಳನ್ನು ಒಂದು ವೇಳೆ ನೀವು ಇತರ ಸಂಗತಿಗಳ ಜೊತೆಗೆ ಹೋಲಿಸಿದರೆ, ಸಣ್ಣ ಸಂಪೂರ್ಣ ಜೀವನದಲ್ಲಿ ಓರ್ವ ಸಾಮಾನ್ಯ ವ್ಯಕ್ತಿ Oxford English Dictionaryಯ 20 ಸಂಚಿಕೆಗಳನ್ನು 14.5 ಬಾರಿ ಓದುತ್ತಾನೆ. ವ್ಯಕ್ತಿಯೊಬ್ಬ ಮಾತನಾಡುವ ಶಬ್ದಗಳ ಬೈಬಲ್ ನೊಂದಿಗೆ ಹೋಲಿಸಿದರೆ, King James Bibleನಲ್ಲಿ ಬರುವ ಒಟ್ಟು ಶಬ್ದಗಳ 1110 ಪಟ್ಟು ಹೆಚ್ಚು ಶಬ್ದಗಳನ್ನು ಮನುಷ್ಯ ತನ್ನ ಜೀವನದಲ್ಲಿ ಮಾತನಾಡುತ್ತಾನೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.