ಈ ಕಳ್ಳ ದರೋಡೆ ಮಾಡಲು ಹಾಕಿಕೊಂಡಿದ್ದ ಮುಸುಕು ಯಾವುದು ಗೊತ್ತಾ? ಈ ವೀಡಿಯೋ ನೋಡಿ!

ಬಟ್ಟೆಯಲ್ಲ, ಟೋಪಿಯಲ್ಲ, ಈ ಕಳ್ಳ ದರೋಡೆ ಮಾಡುವಾಗ ಯಾವುದರಿಂದ ತನ್ನ ಮುಖ ಮುಚ್ಚಿಕೊಂಡಿದ್ದ ಅಂತ ಕೇಳಿದ್ರೆ ನೀವು ಶಾಕ್ ಆಗೋದಷ್ಟೇ ಅಲ್ಲ, ನಗುವುದಂತೂ ಖಂಡಿತ. 

Last Updated : Jul 13, 2018, 10:51 AM IST
ಈ ಕಳ್ಳ ದರೋಡೆ ಮಾಡಲು ಹಾಕಿಕೊಂಡಿದ್ದ ಮುಸುಕು ಯಾವುದು ಗೊತ್ತಾ? ಈ ವೀಡಿಯೋ ನೋಡಿ! title=
ಪೋಟೋ ಕೃಪೆ: Facebook/ Leander Police Department

ನವದೆಹಲಿ: ಬಟ್ಟೆಯಲ್ಲ, ಟೋಪಿಯಲ್ಲ, ಈ ಕಳ್ಳ ದರೋಡೆ ಮಾಡುವಾಗ ಯಾವುದರಿಂದ ತನ್ನ ಮುಖ ಮುಚ್ಚಿಕೊಂಡಿದ್ದ ಅಂತ ಕೇಳಿದ್ರೆ ನೀವು ಶಾಕ್ ಆಗೋದಷ್ಟೇ ಅಲ್ಲ, ನಗುವುದಂತೂ ಖಂಡಿತ. 

ಟೆಕ್ಸಾಸ್'ನ ಪೊಲೀಸರು ಕಚೇರಿಯೊಳಗೆ ದರೋಡೆಗೆ ನುಗ್ಗಿದ್ದ ಕಳ್ಳನೊಬ್ಬನನ್ನು ಹುಡುಕುತ್ತಿದ್ದು, ಕಚೇರಿಯೊಳಗೆ ದರೋಡೆ ಮಾಡಲು ಬಂದ ಕಳ್ಳನ ಸಿಸಿಟಿವಿ ವೀಡಿಯೋ ತುಣುಕನ್ನು ಲಿಯಾಂಡರ್ ಪೋಲಿಸ್ ಡಿಪಾರ್ಟ್ಮೆಂಟ್ ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೋದಲ್ಲಿ ಕಳ್ಳನೊಬ್ಬ ಕಿಟಕಿಯ ಮೂಲಕ ಕಚೇರಿ ಒಳಗೆ ನುಗ್ಗಿದ್ದು ಅತ್ತಿತ್ತ ನೋಡುತ್ತಿದ್ದಾನೆ. ಆದರೆ ಈಲಿ ಅಚ್ಚರಿ ಮೂಡಿಸುವ ವಿಷಯ ಎಂದರೆ, ಈ ಕಳ್ಳ ತನ್ನ ಗುರುತನ್ನು ಮರೆಮಾಚಲು ಮುಖವನ್ನು ಮುಚ್ಚಿಕೊಂಡಿದ್ದೆ, ಬಟ್ಟೆಯಿಂದಲ್ಲ ಅಥವಾ ಟೋಪಿಯಿಂದಲ್ಲ, ಆತ ಮುಖ ಮುಚ್ಚಿಕೊಂಡಿದ್ದು ನೀಲಿ ಬಣ್ಣದ ಒಳಉಡುಪಿನಿಂದ! 

ಆ ನಗೆಯುಕ್ಕಿಸುವ ವೀಡಿಯೋ ನೋಡಿ...

ಈ ವೀಡಿಯೋವನ್ನು ಪೊಲೀಸರು ಫೇಸ್ಬುಕ್'ನಲ್ಲಿ ಬುಧವಾರ ಪೋಸ್ಟ್ ಮಾಡಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ವಿನೂತನ ರೀತಿಯಲ್ಲಿ ತನ್ನ ಮುಖ ಮರೆಮಾಚುವ ಈ ಕಳ್ಳನ ಬುದ್ಧಿವಂತಿಕೆ ಹಾಗೂ ಆಲೋಚನಾ ರೀತಿ ಕಂಡು ಜನ ಸಿಕ್ಕಾಪಟ್ಟೆ ನಗುತ್ತಿದ್ದಾರೆ. ಬಹುಶಃ ಇದೇ ಮೊದಲ ಬಾರಿಗೆ ಒಬ್ಬ ಕಳ್ಳನನ್ನು ನೋಡಿ ಜನ ನಗುತ್ತಿದ್ದಾರೆ!

Trending News