ಸ್ಟಾರ್‌ಗಳೇ ರಿಜೆಕ್ಟ್‌ ಮಾಡಿದ್ದ ಸೂಪರ್‌ಹಿಟ್‌ ಸಿನಿಮಾ ಯಾವುದು ಗೊತ್ತಾ!

ಭಾರತದಲ್ಲಿ ಚಲನಚಿತ್ರಗಳು ಮತ್ತು ಚಲನಚಿತ್ರ ತಾರೆಯರಿಗೆ ಸಾಕಷ್ಟು ಕ್ರೇಜ್ ಇದೆ. ಬಿಡುಗಡೆಯಾದ ಚಿತ್ರ ನಮಗೆ ಇಷ್ಟವಾದರೆ ಆ ಚಿತ್ರದ ಪ್ರಮುಖ ಪಾತ್ರದಲ್ಲಿ ಬೇರೆ ಯಾವುದೇ ನಟರನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ. 

ಬೇರೆ ಬೇರೆ ಕಾರಣಗಳಿಂದ ಬಾಲಿವುಡ್‌ನ ದೊಡ್ಡ ಹಿಟ್‌ ಸಿನಿಮಾಗಳನ್ನು ತಿರಸ್ಕರಿಸಿದ ಅಂತಹ ಐದು ಸ್ಟಾರ್‌ಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಸ್ಟಾರ್‌ಗಳು ಯಾರು ಮತ್ತು ಅವರು ಯಾವ ಚಿತ್ರಗಳನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಈ ಸುದ್ದಿಯಲ್ಲಿ ವಿವರವಾಗಿ ನೀಡಲಾಗಿದೆ. 

1 /5

ಯೇ ಜವಾನಿ ಹೈ ದಿವಾನಿ: ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಜೊತೆಗೆ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದೀ ಸಿನಿಮಾದಲ್ಲಿ ದೀಪಿಕಾ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದ ನೈನಾ ಪಾತ್ರವನ್ನು ಮೊದಲು ಕತ್ರಿನಾ ಕೈಫ್‌ಗೆ ನೀಡಲಾಗಿತ್ತು. ಆದರೆ  ಅವರ ಮತ್ತು ರಣಬೀರ್ ನಡುವಿನ ಸಂಬಂಧ ಹದಗೆಟ್ಟಿದ್ದಕ್ಕೆ ಮತ್ತು ಬಿಡುವಿಲ್ಲದ ಕಾರಣದಿಂದ ಆ ಪಾತ್ರ ದೀಪಿಕಾ ಪಾಲಾಗಿತ್ತಂತೆ. 

2 /5

ರಾಮ್ ಲೀಲಾ: ಸಂಜಯ್ ಲೀಲಾ ಬನ್ಸಾಲಿಯವರ ಅತ್ಯುತ್ತಮ ಚಿತ್ರ ರಾಮ್ ಲೀಲಾದಲ್ಲಿ ಮೊದಲು ರಣಬೀರ್ ಕಪೂರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ನಂತರ ರಣವೀರ್ ಸಿಂಗ್ ಅಭಿನಯಿಸಿದ್ದು, ದೊಡ್ಡ ಹಿಟ್ ಸಾಧಿಸಿತ್ತು. 

3 /5

ಮುನ್ನಾಭಾಯ್ ಎಂಬಿಬಿಎಸ್: ಮುನ್ನಾಭಾಯ್ ಎಂಬಿಬಿಎಸ್ ಚಿತ್ರಕ್ಕೆ ಮೊದಲು ವಿವೇಕ್ ಒಬೆರಾಯ್ ಅವರ ಹೆಸರನ್ನು ನಿಗದಿ ಪಡಿಸಲಾಗಿತ್ತಂತೆ. ಆದರೆ ಆ ಬಳಿಕ ಸಂಜಯ್‌ ದತ್ತ್‌ಗೆ ಅವಕಾಶ ಒದಗಿ ಬಂದಿದ್ದು, ಬಾಲಿವುಡ್‌ನಲ್ಲಿ ಭಾರೀ ಸಕ್ಸಸ್‌ ಪಡೆದ ಪಟ್ಟಿಗೆ ಈ ಸಿನಿಮಾ ಸೇರಿದೆ. 

4 /5

ಪೀಕು: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಪೀಕು ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರವನ್ನು ಮೊದಲು ಪರಿಣಿತಿ ಚೋಪ್ರಾಗೆ ನೀಡಲಾಗಿತ್ತು. ಕೆಲವು ಕಾರಣಗಳಿಂದ ಈ ಚಿತ್ರ ಮಾಡಲು ಸಾಧ್ಯವಾಗದೆ, ಇದರ ಅವಕಾಶ ದೀಪಿಕಾ ಪಾಲಾಗಿತ್ತು. 

5 /5

ಅಂಧಾಧುನ್: ಆಯುಷ್ಮಾನ್ ಖುರಾನಾ ಅವರ ಅತ್ಯಂತ ಅದ್ಭುತವಾದ ಚಿತ್ರಗಳಲ್ಲಿ ಒಂದಾದ ಅಂಧಾಧುನ್, ಮೊದಲು ಅನಿಲ್ ಕಪೂರ್ ಅವರ ಮಗ ಹರ್ಷವರ್ಧನ್ ಕಪೂರ್ ಅವರಿಗೆ ನೀಡಲಾಗಿತ್ತು. ಆದರೆ ಬೇರೆ ಯೋಜನೆಗಳಿಂದಾಗಿ ಅವರು ಈ ಚಿತ್ರವನ್ನು ತಿರಸ್ಕರಿಸಿದರು.