ಮಧ್ಯಪ್ರದೇಶ: ಗರ್ಭಿಣಿಗೆ ಅಂಬುಲನ್ಸ್ ನಿರಾಕರಣೆ ಬಸ್ಸಿನಲ್ಲೇ ಹೆರಿಗೆ

    

Last Updated : Jul 17, 2018, 01:53 PM IST
ಮಧ್ಯಪ್ರದೇಶ: ಗರ್ಭಿಣಿಗೆ ಅಂಬುಲನ್ಸ್ ನಿರಾಕರಣೆ ಬಸ್ಸಿನಲ್ಲೇ ಹೆರಿಗೆ  title=

ನವದೆಹಲಿ: ದೇಶದ ವೈದ್ಯಕೀಯ ವ್ಯವಸ್ಥೆ ರೋಗಗ್ರಸ್ಥಗೊಂಡಿದೆ ಎನ್ನುವುದಕ್ಕೆ ಮಧ್ಯಪ್ರದೇಶದಲ್ಲಿನ ಈ ಘಟನೆಯ ಸಾಕ್ಷಿ.

ಗರ್ಭಿಣಿ ಹೆಂಗಸಿಗೆ ಅಂಬುಲನ್ಸ್ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರಯಾಣಿಸುತ್ತಿರುವ ಬಸ್ಸಿನಲ್ಲೇ ಅಕೆಗೆ ಹೆರಿಗೆಯಾಗಿರುವ ಘಟನೆ ಮದ್ಯಪ್ರದೇಶದ ಚತ್ತರಪುರ್ ನಲ್ಲಿ ನಡೆದಿದೆ.ಕಮ್ಯುನಿಟಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಗರ್ಭಿಣಿಗೆ ಚಿಕಿತ್ಸೆಗೆ ನಿರಾಕರಿಸಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಆ ಮಹಿಳೆಯನ್ನು ಸಾಗಿಸಲು ಆಸ್ಪತ್ರೆಯು ಯಾವುದೇ ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಬಸ್ ವೇಳೆ ಪ್ರಯಾಣಿಸುತ್ತಿದ್ದಾಗ ಈ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನಲ್ಲೇ ಜನ್ಮ ನೀಡಿರುವ ಸಂಗತಿ ನಡೆದಿದೆ.

ಈ ಘಟನೆಯನ್ನು ವಿವರಿಸಿರುವ ಪತಿ" ನಾನು ಅವಳನ್ನು ಕಮ್ಯುನಿಟಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಜಿಲ್ಲಾ ಆಸ್ಪತ್ರೆಗೆ ಶಿಪಾರಸು ಮಾಡಿದರು. ಅವರು ಯಾವುದೇ ವಾಹನ ನೀಡದಿರುವುದರಿಂದಾಗಿ ನಾನು ಬಸ್ ಅಲ್ಲೇ ಅವಳನ್ನು  ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಗುವಿಗೆ ಜನ್ಮ ನೀಡಿದ್ದಾಳೆ "ಎಂದು ವಿವರಿಸಿದ್ದಾರೆ. ಈ ಹಿಂದೆ  ಇದೆ ಮಾದರಿಯ ಘಟನೆ ಚತ್ತರಪುರ್ ನ ಜಸ್ಪುರ್ ಪ್ರದೇಶದಲ್ಲಿ ಮಂಗಳವಾರಂದು ನಡೆದಿತ್ತು. ಅಲ್ಲಿ ಗರ್ಭಿಣಿ ಮಹಿಳೆಯು ಯಾವುದೇ ರಸ್ತೆ ಮಾರ್ಗ ವೈದ್ಯಕೀಯ ಸೌಲಭ್ಯವಿರದಿದ್ದರಿಂದಾಗಿ ಅವಳು ಮಗುವಿಗೆ ಜನ್ಮ ನೀಡಿದ ತಕ್ಷಣ ಮಗು ಮೃತಪಟ್ಟಿತ್ತು.

Trending News