ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ? ರಾಜಕೀಯಕ್ಕೆ ಎಂಟ್ರಿ ಸಾಧ್ಯತೆ..!

ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಈಗ ಬಿಸಿಸಿಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಈ ಕುರಿತಾಗಿ ಈಗ ಟ್ವೀಟ್ ಮಾಡಿರುವ ಅವರು ಶೀಘ್ರದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆ ಮೂಲಕ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುವ ಸುಳಿವನ್ನು ನೀಡಿದ್ದಾರೆ.

Written by - Zee Kannada News Desk | Last Updated : Jun 1, 2022, 06:32 PM IST
  • ಈ ಕುರಿತಾಗಿ ಈಗ ಟ್ವೀಟ್ ಮಾಡಿರುವ ಅವರು ಶೀಘ್ರದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
  • ಆ ಮೂಲಕ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುವ ಸುಳಿವನ್ನು ನೀಡಿದ್ದಾರೆ.
 ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ? ರಾಜಕೀಯಕ್ಕೆ ಎಂಟ್ರಿ ಸಾಧ್ಯತೆ..! title=
file photo

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಈಗ ಬಿಸಿಸಿಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಈ ಕುರಿತಾಗಿ ಈಗ ಟ್ವೀಟ್ ಮಾಡಿರುವ ಅವರು ಶೀಘ್ರದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆ ಮೂಲಕ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುವ ಸುಳಿವನ್ನು ನೀಡಿದ್ದಾರೆ.

"1992 ರಲ್ಲಿ ಕ್ರಿಕೆಟ್‌ನೊಂದಿಗೆ ನನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ 2022 ಕ್ಕೆ 30 ವರ್ಷ ತುಂಬಲಿದೆ, ಅಂದಿನಿಂದ ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ಈ ಸಂದರ್ಭದಲ್ಲಿ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಬೆಂಬಲವೇ ನನ್ನನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಆದ್ದರಿಂದ ನಾನು ಈಗ ಏನನ್ನಾದರೂ ಹೊಸದಾಗಿ ಮಾಡಲು ಯೋಜಿಸುತ್ತಿದ್ದೇನೆ, ಇದು ಬಹಳಷ್ಟು ಜನರನ್ನು ತಲುಪಲು ಸಹಾಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.ಈ ಜೀವನದ ಹೊಸ ಅಧ್ಯಾಯಕ್ಕೆ ನೀವು ಎಂದಿನಂತೆ ಬೆಂಬಲ ನೀಡುತ್ತಿರಿ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಚ್ಚರಿ ಎಂದರೆ ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದ ಪ್ರವಾಸದಲ್ಲಿ ಅಮಿತ್ ಶಾ ಅವರು ಸೌರವ್ ಗಂಗೂಲಿ ಮನೆಗೆ ಔತಣಕೂಟಕ್ಕೆ ಹೋಗಿದ್ದರು, ಬಹುಶಃ ಅಂದೇ ಸೌರವ್ ಗಂಗೂಲಿ ಅವರು ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರವನ್ನು ಕೈಗೊಂಡಿದ್ದರು ಎನ್ನಲಾಗಿದೆ.ಅಷ್ಟಕ್ಕೂ ಸೌರವ್ ಗಂಗೂಲಿ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎನ್ನುವ ಊಹಾಪೋಹ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಚಾಲ್ತಿಯಲ್ಲಿತ್ತು, ಆದರೆ ಕೊನೆಯ ಸಂದರ್ಭದಲ್ಲಿ ಸೌರವ್ ಗಂಗೂಲಿ ರಾಜಕೀಯಕ್ಕೆ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದರೆ ಇತ್ತೀಚಿಗೆ ಅಮಿತ್ ಷಾ ಅವರನ್ನು ತಮ್ಮ ಮನೆಗೆ ಔತಣಕೂಟಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ಸೌರವ್ ಗಂಗೂಲಿ ರಾಜಕೀಯಕ್ಕೆ ಬರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹತ್ತಿರದ ಮೂಲಗಳು ಹೇಳಿವೆ.

ವಿಶೇಷವೆಂದರೆ 2021 ರಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ ರಾಜಕೀಯವು ಕೆಟ್ಟದ್ದಲ್ಲ ಎಂದು ಹೇಳಿದ್ದರು."ನಾನು ಯಾವಾಗಲೂ ಗೌರವವನ್ನು ನೀಡುತ್ತೇನೆ, ಏಕೆಂದರೆ ನನಗೂ ಕೂಡ ಗೌರವ ಸಿಗಬೇಕು. ರಾಜಕೀಯ ಕೆಟ್ಟದ್ದಲ್ಲ. ನಮ್ಮ ದೇಶದಲ್ಲಿ ದೇಶವನ್ನು ನಡೆಸುವ, ನಮ್ಮ ಜನಸಂಖ್ಯೆಯ ಮೇಲೆ ಪ್ರಭಾವ ಬೀರುವ ಮಹಾನ್ ನಾಯಕರನ್ನು ನಾವು ಹೊಂದಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಹೇಗೆ ಕೆಟ್ಟದ್ದಾಗುತ್ತದೆ ಹೇಳಿ? ಒಳ್ಳೆಯ ಜನರು ರಾಜಕೀಯದಲ್ಲಿರಬೇಕು, ಏಕೆಂದರೆ ಅವರು ನಿಮ್ಮ ಜೀವನವನ್ನು ನಿಜವಾಗಿಯೂ ನಿರ್ಧರಿಸುತ್ತಾರೆ. ನಾನು ಈ ವಿಚಾರದಲ್ಲಿ ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಈ ಕುರಿತಾಗಿ ನಾನು ಯೋಚಿಸುತ್ತೇನೆ." ಎಂದು ಹೇಳುವ ಮೂಲಕ ರಾಜಕೀಯದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News