ಸರಕಾರಿ ಪ್ರಾಥಮಿಕ ಶಾಲೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ 'ಶಿಶು ತಾನ್ ಸೇನ್'!

   

Last Updated : Jul 26, 2018, 12:46 PM IST
ಸರಕಾರಿ ಪ್ರಾಥಮಿಕ ಶಾಲೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ 'ಶಿಶು ತಾನ್ ಸೇನ್'!  title=
Photo courtesy:youtube

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುತ್ತಿದ್ದ  ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ  ಹಿಂದೂಸ್ತಾನಿ ಸಂಗೀತ ಶೈಲಿ ಮೂಲಕ ಎಲ್ಲರ ಗಮನ ಸೆಳೆದಿದ್ದ  ಜ್ಞಾನೇಶ್ವರ್,  ಈಗ  ಕನ್ನಡದ ಚಂದನವನಕ್ಕೆ  ಹಿನ್ನಲೆ ಗಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ. ರಿಯಾಲಿಟಿ ಶೋದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಜ್ಞಾನೇಶ್ ನ ಕಂಠಕ್ಕೆ  ಮನಸೋತುಹೊಗಿ ಇತನನ್ನು ಶಿಶು ತಾನ್ ಸೆನ್ ಎಂದು ಕರೆಯುತ್ತಿದಿದ್ದರು.

ಈಗ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ 'ಕ್ರಾಪು ಕೂದಲು ಕೂಲಿಂಗ್  ಗ್ಲಾಸ್ ಹಳೆಯ ನಿಕ್ಕರು' ಎನ್ನುವ ಹಾಡಿಗೆ ಹಿನ್ನಲೆ ಗಾಯಕರಾಗಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ವೀರೇಶ್ ಶಿವಮೂರ್ತಿ ತ್ರಿಲೋಕ್ ತ್ರಿವಿಕ್ರಮ ಗೋಕುಲ್ ಅಭಿಷೇಕ ಅವರು ಈ ಚಿತ್ರಕ್ಕಾಗಿ ಸಾಹಿತ್ಯ ರಚಿಸಿದ್ದಾರೆ.

ಈ ಚಿತ್ರದ ತಾರಾಗಣದಲ್ಲಿ  ಪ್ರಮುಖವಾಗಿ ಅನಂತ್ ನಾಗ್,  ಸಂಪತ್ ಪ್ರಮೋದ್ ಶೆಟ್ಟಿ, ಸಪ್ತಾ ಪವೂರ್, ಮಹೇಂದ್ರಾ ಸೋಹನ್ ಶೆಟ್ಟಿಯವರು ನಟಿಸಿದ್ದಾರೆ.ಈ ಚಿತ್ರವನ್ನು ರಿಶಬ್ ಶೆಟ್ಟಿ ಯವರು ನಿರ್ಮಿಸಿ ನಿರ್ದೇಶಿಸಿದ್ದು, ಇದು ಎಷ್ಟರ ಮಟ್ಟಿಗೆ ಈ ಚಿತ್ರ ಯಶಸ್ಸಾಗಲಿದೆ ಎನ್ನುವುದನ್ನು  ತಿಳಿಯಲು ನೀವು ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕು. ನಿರ್ದೇಶಕರು ಈಗ  ಉತ್ತರ ಕರ್ನಾಟಕದ ಪ್ರತಿಭೆ ಜ್ಞಾನೇಶ್ ನನ್ನು ಈ ಚಿತ್ರದ ಮೂಲಕ ಹಿನ್ನಲೆ ಗಾಯಕನಾಗಿ ಪರಿಚಯಸಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ.

Trending News