ಮಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ನಿನ್ನೆ ತೆರೆ ಕಂಡಿದೆ. ಇದರ ಪ್ರೀಮಿಯರ್ ಶೋ ವೀಕ್ಷಿಸಿದ ಮಂಗಳೂರು ಕಮಿಷನರೇಟ್ ಪೊಲೀಸರು ಇದೀಗ ಶ್ವಾನದಳಕ್ಕೆ ನಾಯಿಗೆ ‘ಚಾರ್ಲಿ’ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ನಯನತಾರಾ ಹಿಂದೆ ಸುತ್ತಿದ್ದರು ಆ ಇಬ್ಬರು ನಟರು! ವಿಘ್ನೇಶ್ ಅವರನ್ನೇ ನಟಿ ವರಿಸಲು ಕಾರಣವೇನು?
ಒಂದು ತಿಂಗಳ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಿಎಆರ್ (ನಗರ ಸಶಸ್ತ್ರ ಮೀಸಲು ಪಡೆ) ವಿಭಾಗಕ್ಕೆ ಲ್ಯಾಬ್ರೊಡಾರ್ ರಿಟ್ರೀವರ್ ಜಾತಿಯ ಶ್ವಾನವನ್ನುಖರೀದಿಸಲಾಗಿತ್ತು. ಪ್ರಸ್ತುತ ಮೂರು ತಿಂಗಳ ಶ್ವಾನಕ್ಕೆ ಶುಕ್ರವಾರ ಸಿಎಎಆರ್ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಚಾರ್ಲಿ ಎಂದು ನಾಮಕರಣ ಮಾಡಿದ್ದಾರೆ.
ಪೊಲೀಸ್ ಶ್ವಾನ ದಳಕ್ಕೆ ಒಂದು ತಿಂಗಳ ಹಿಂದೆ ಸೇರ್ಪಡೆಯಾಗಿರುವ ಸದಸ್ಯೆಗೆ ಚಾರ್ಲಿ ನಾಮಕರಣ ಮಾಡುವಂತೆ ವಿಭಾಗದ ಸಿಬ್ಬಂದಿ ಕೋರಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದು, ಈಗ ನಾಮಕರಣ ಮಾಡಿದ್ದಾರೆ.
ಪುಟಾಣಿ ಚಾರ್ಲಿಗೆ ಹೂವಿನ ಹಾರ ಹಾಕಿ ಕೇಕ್ ಕತ್ತರಿಸಿ ನಾಮಕರಣ ಮಾಡಿದ್ದಾರೆ. ಮಂಗಳೂರು ಸಿಎಆರ್ ವಿಭಾಗದ ಶ್ವಾನದಳದಲ್ಲಿ ಈಗಾಗಲೇ ರಾಣಿ, ಗೀತಾ, ಬಬ್ಲಿ ಹಾಗೂ ರೂಬಿ ಹೆಸರಿನ ನಾಲ್ಕು ಶ್ವಾನಗಳಿವೆ. ಇದೀಗ ಚಾರ್ಲಿ ಹೊಸ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಆನೆದಂತ ಸ್ವಾಧೀನ ಪ್ರಕರಣ: ಖ್ಯಾತ ನಟ ಮೋಹನ್ ಲಾಲ್ ಗೆ ಸಂಕಷ್ಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.