Swiss Bank: ಸ್ವಿಸ್ ಬ್ಯಾಂಕಿನಲ್ಲಿದೆ ಭಾರತೀಯರ 30,600 ಕೋಟಿ ರೂ. ಹಣ

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣವು ಶೇ.50%ರಷ್ಟು ಏರಿಕೆಯಾಗಿದ್ದು, ಇದು 14 ವರ್ಷಗಳಲ್ಲಿಯೇ ಗರಿಷ್ಠಮಟ್ಟ ಮುಟ್ಟಿದೆ ಎಂದು ಸ್ವಿಟ್ಜರ್ಲೆಂಡ್ ಸೆಂಟ್ರಲ್ ಬ್ಯಾಂಕ್‌ನ ಇತ್ತೀಚಿನ ವರದಿ ತಿಳಿಸಿದೆ.

Written by - Puttaraj K Alur | Last Updated : Jun 17, 2022, 11:56 AM IST
  • ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿನ ಭಾರತೀಯರು ಮತ್ತು ಸಂಸ್ಥೆಗಳು ವಿವಿಧ ರೂಪದಲ್ಲಿ ಹಣ ಇರಿಸಿದ್ದಾರೆ
  • 2021ರಲ್ಲಿ 3.83 ಶತಕೋಟಿ ಸ್ವಿಸ್ ಫ್ರಾಂಕ್‌ ಅಥವಾ 30,626 ಕೋಟಿ ರೂ.ಗೆ ತಲುಪಿದೆ
  • ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣವು ಶೇ.50%ರಷ್ಟು ಏರಿಕೆ, 14 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ
Swiss Bank: ಸ್ವಿಸ್ ಬ್ಯಾಂಕಿನಲ್ಲಿದೆ ಭಾರತೀಯರ 30,600 ಕೋಟಿ ರೂ. ಹಣ title=
ಭಾರತೀಯರ ಹಣವು ಶೇ.50%ರಷ್ಟು ಏರಿಕೆ

ನವದೆಹಲಿ: ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿನ ಭಾರತೀಯರು ಮತ್ತು ಸಂಸ್ಥೆಗಳು ವಿವಿಧ ರೂಪದಲ್ಲಿ ಇರಿಸಿರುವ ಮೊತ್ತವು 2021ರಲ್ಲಿ 3.83 ಶತಕೋಟಿ ಸ್ವಿಸ್ ಫ್ರಾಂಕ್‌ಗಳಿಗೆ ಅಥವಾ 30,626 ಕೋಟಿ ರೂ.ಗೆ ತಲುಪಿದೆ ಎಂದು ವರದಿಯಾಗಿದೆ.  

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣವು ಶೇ.50%ರಷ್ಟು ಏರಿಕೆಯಾಗಿದ್ದು, ಇದು 14 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ಮುಟ್ಟಿದೆ ಎಂದು ಸ್ವಿಟ್ಜರ್ಲೆಂಡ್ ಸೆಂಟ್ರಲ್ ಬ್ಯಾಂಕ್‌ನ ಇತ್ತೀಚಿನ ವರದಿ ತಿಳಿಸಿದೆ. ಭಾರತೀಯರು 2020ರವರೆಗೆ ಸ್ವಿಸ್ ಬ್ಯಾಂಕ್‌ಗಳಲ್ಲಿ 2.5 ಬಿಲಿಯನ್ ಸ್ವಿಸ್ ಫ್ರಾಂಕ್ ಅನ್ನು ಇರಿಸಿದ್ದರು. 2007ರಲ್ಲಿ ಈ ಅಂಕಿ ಅಂಶವು 2.92 ಬಿಲಿಯನ್ ಸ್ವಿಸ್ ಫ್ರಾಂಕ್ ಆಗಿತ್ತು.

ಇದನ್ನೂ ಓದಿ: ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು..! ಆಲ್ಟೋ ಕಾರಿನಷ್ಟೇ ಇದರ ಬೆಲೆ..!

2020ರ ಕೊನೆಯಲ್ಲಿ ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಇರಿಸಿದ ಮೊತ್ತವು 20,700 ಕೋಟಿ ರೂ.ನಷ್ಟಿತ್ತು. ಭಾರತೀಯರು ಜಮಾ ಮಾಡಿರುವ ಹಣದ ಮೊತ್ತದಲ್ಲಿ ಸತತ 2 ವರ್ಷಗಳಿಂದ ಹೆಚ್ಚತ್ತಲೇ ಇದೆ. ಭಾರತೀಯರ ಉಳಿತಾಯ ಅಥವಾ ಠೇವಣಿ ಖಾತೆಗಳಲ್ಲಿರುವ ಹಣವು 7 ವರ್ಷಗಳ ಗರಿಷ್ಠ ಮೊತ್ತವಾದ 4,800 ಕೋಟಿ ರೂ. ತಲುಪಿದೆ.

ಇವು ಸ್ವಿಟ್ಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್ ನೀಡಿರುವ ಅಧಿಕೃತ ಅಂಕಿ ಅಂಶಗಳಾಗಿವೆ. ಭಾರತೀಯರು ಸ್ವಿಟ್ಜರ್ಲೆಂಡ್‌ನ ಬ್ಯಾಂಕುಗಳಲ್ಲಿ ಇರಿಸಿದ್ದಾರೆ ಎನ್ನಲಾಗಿರುವ ಕಪ್ಪು ಹಣವು ಇದರಲ್ಲಿ ಸೇರಿಲ್ಲ. ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಮೂಲಕ ಸ್ವಿಟ್ಜರ್ಲೆಂಡ್‌ನ ಬ್ಯಾಂಕುಗಳಲ್ಲಿ ಇರಿಸಿರುವ ಮೊತ್ತವು ಸಹ ಇದರಲ್ಲಿ ಸೇರಿಲ್ಲ.

ಇದನ್ನೂ ಓದಿ: LPG Gas Connection: ಎಲ್‌ಪಿಜಿ ಗ್ಯಾಸ್‌ ಕನೆಕ್ಷನ್ ಇನ್ನು ಬಲು ದುಬಾರಿ

ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಈ ಹಣವು ಯಾವಾಗಲೂ ಭಾರತದ ಹೊರಗಿರುವ ಕಪ್ಪು ಹಣಕ್ಕೆ ಸಂಬಂಧಿಸಿರುತ್ತದೆ. ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಅಮ್ನೆಸ್ಟಿ ಯೋಜನೆ ಸೇರಿದಂತೆ ಕಪ್ಪುಹಣ ವಿರೋಧಿ ಕ್ರಮಗಳ ನಂತರ ಪ್ರಧಾನಿ ಮೋದಿ ಸರ್ಕಾರವು ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೋದಿ ಸರ್ಕಾರ ಘೋಷಿಸಿತ್ತು. ಅದರೂ ಕೂಡ ಕಪ್ಪು ಹಣದ ವ್ಯವಹಾರ ಇಂದಿಗೂ ನಿಂತಿಲ್ಲ. ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಡುತ್ತಿರುವ ಕಪ್ಪುಹಣ ನಿರಂತರವಾಗಿ ಏರುತ್ತಲೇ ಇದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News