Why Bihar is burning reveals Prashant Kishor : ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಹೊಸ ಅಗ್ನಿಪಥ್ ಯೋಜನೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿವೆ. ಈ ಮಧ್ಯ ಸರ್ಕಾರವು ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಹಾಗಾಗಿ ಸೇನೆ ಮತ್ತು ವಾಯುಪಡೆಯ ಅಧಿಕಾರಿಗಳು ನೇಮಕಾತಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಈ ಬಗ್ಗೆ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದು ಹೀಗೆ
ಈ ಅಗ್ನಿವೀರ್ಗಳಿಗೆ, ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಚಿವಾಲಯಗಳ ನೇಮಕಾತಿಗಳಲ್ಲಿ ಸರ್ಕಾರವು 10% ಮೀಸಲಾತಿಯನ್ನು ಘೋಷಿಸಿದೆ ಮತ್ತು ಇತರ ಇಲಾಖೆಗಳಲ್ಲಿ ಹಲವಾರು ಪ್ರೋತ್ಸಾಹ ಮತ್ತು ನೇಮಕಾತಿಗೆ ಭರವಸೆ ನೀಡಿದ. ಆದ್ರೆ, ಈ ಯೋಜನೆ ವಿರೋಧಿಸಿ ಕಳೆದ 4 ದಿನಗಳಿಂದ ಬಿಹಾರದಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದು ಅದು ಹಿಂಸಾತ್ಮಕ ಘಟನೆಗಳಿಗೆ ತಿರುಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಬೆಂಕಿ ಅವಘಡಗಳು, ವಿಧ್ವಂಸಕ ಕೃತ್ಯಗಳ ಜತೆಗೆ ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಬಿಹಾರದಲ್ಲಿ ಈ ಘಟನೆಗಳು ನಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ : Viral Video: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಭರ್ಜರಿ ಡ್ಯಾನ್ಸ್..!
'ಜೆಡಿಯು-ಬಿಜೆಪಿ ಜಟಾಪಟಿಯಲ್ಲಿ ಬಿಹಾರ ಹೊತ್ತಿ ಉರಿದಿದೆ'
ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಈ ಯೋಜನೆಯನ್ನು ವಿರೋಧಿಸುವವರು, ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಯುವಜನರಲ್ಲಿ ಮನವಿ ಮಾಡಿದ್ದಾರೆ.
#Agnipath पर आंदोलन होना चाहिए, हिंसा और तोड़फोड़ नहीं।
बिहार की जनता #JDU और #BJP के आपसी तनातनी का ख़ामियाज़ा भुगत रही है। बिहार जल रहा है और दोनों दल के नेता मामले को सुलझाने के बजाए एक दूसरे पर छींटाकशी और आरोप प्रत्यारोप में व्यस्थ हैं।
— Prashant Kishor (@PrashantKishor) June 19, 2022
'ಅಗ್ನಿಪಥ್ ವಿರುದ್ದದ ಶಾಂತಿಯುತವಾಗಿ ಪ್ರತಿಭಟನೆ ನಡೆಯಬೇಕೇ ಹೊರತು ಹಿಂಸೆ ಮತ್ತು ವಿಧ್ವಂಸಕ ಕೃತ್ಯವಲ್ಲ. ಜೆಡಿಯು ಮತ್ತು ಬಿಜೆಪಿ ನಡುವಿನ ಪರಸ್ಪರ ಕಚ್ಚಾಟದ ಪರಿಣಾಮ ಬಿಹಾರದ ಜನರ ಮೇಲಾಗುತ್ತಿದೆ. ಇಡೀ ಬಿಹಾರ ಹೊತ್ತಿ ಉರಿಯುತ್ತಿದ್ದು, ಎರಡೂ ಪಕ್ಷಗಳ ನಾಯಕರು ವಿಷಯವನ್ನು ಬಗೆಹರಿಸುವ ಬದಲು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : Father’s Day 2022: ಅಪ್ಪನೆಂಬ ಅಪ್ಪುಗೆ ಸಾಕು ಈ ಜೀವಕೆ.. ಮಕ್ಕಳ ಮೊದಲ ಹೀರೋ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.