ಪತ್ನಿ ಐಂದ್ರಿತಾ ಜೊತೆ ಗೋವಾ ಪ್ರವಾಸದಲ್ಲಿದ್ದ ದಿಗಂತ್ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಅಪಘಾತ ಸಂಭವಿಸಿದ್ದು, ಕುತ್ತಿಗೆಗೆ ಭಾರೀ ಪೆಟ್ಟಾಗಿದೆ. ಗೋವಾದ ಸಮುದ್ರ ದಡದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವಾಗ ಬಿದ್ದು ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡೊಸಿ ಅವರನ್ನು ಗೋವಾದಿಂದ ಬೆಂಗಳೂರಿಗೆಏರ್ ಲಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೆ?: ವಿವಾದಕ್ಕೆ ಕಾರಣವಾದ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ
ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಿಗಂತ್ ಚಿಕಿತ್ಸೆ ಮುಂದುವರೆದಿದೆ. ಬಿದ್ದ ವೇಳೆ ಜೋರಾಗಿ ಪೆಟ್ಟು ಬಿದ್ದ ಕಾರಣ ನಟ ದಿಗಂತ್ ಅವರ ಸ್ಪೈನಲ್ ಕಾರ್ಡ್ ಇಂಜುರಿಯಾಗಿದೆ ಎಂದು ತಿಳಿದುಬಂದಿದೆ.
ಸ್ಪೈನಲ್ ಇಂಜುರಿ ಎಂದರೇನು?
ಸ್ಪೈನಲ್ ಕಾರ್ಡ್ ಎಂದರೆ ಬೆನ್ನುಹುರಿ. ಇದು ದೇಹದ ಪ್ರಮುಖ ಅಂಗಗಳಲ್ಲಿ ಒಂದು. ನಮ್ಮ ಇಡೀ ಶರೀರ ನೇರವಾಗಿ ನಿಲ್ಲಲು, ಚಲಿಸಲು ಈ ಬೆನ್ನುಹರಿಯೇ ಮುಖ್ಯ ಕಾರಣ. ಇದಕ್ಕೆ ಯಾವುದೇ ಹಾನಿಯಾದರೂ ದೇಹದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿಯಬೇಕಾಗಿದೆ. ಪ್ರತಿ ವರ್ಷ ಸುಮಾರು 5 ಲಕ್ಷ ವಯಸ್ಕರು ವಿವಿಧ ರೀತಿಯ ಬೆನ್ನುಹುರಿ ಗಾಯಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಗಾಯಗೊಂಡ ಐವರಲ್ಲಿ ಇಬ್ಬರು ಮರಣ ಹೊಂದುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ರಸ್ತೆ ಅಪಘಾತ, ಮುನ್ನೆಚ್ಚರಿಕೆ ಇಲ್ಲದ ಕ್ರೀಡಾ ಚಟುವಟಿಕೆಗಳು, ವಿದ್ಯುತ್ ಶಾಕ್ ಹೊಡೆಯುವುದು, ಕುತ್ತಿಗೆ ಮೇಲೆ ಅತಿಯಾದ ಭಾರ ಹೊರುತ್ತಿರುವುದು, ಬೆನ್ನುಹರಿಯಲ್ಲಿ ಸೋಂಕು ಅಥವಾ ಗಡ್ಡೆ, ಉರಿಯೂತ, ಮೂಳೆ ಸವೆತ ಸಂಭವಿಸಿದಾಗ ಬೆನ್ನುಹುರಿ ಸಮಸ್ಯೆ ಉಂಟಾಗಬಹುದು. ಸ್ಪೈನಲ್ ಕಾರ್ಡ್ ಇಂಜುರಿ ಎಂದರೆ ವೈದ್ಯರು ಸಹ ಅರೆಕ್ಷಣ ಗಾಬರಿಯಾಗುತ್ತಾರೆ. ಇದೀಗ ದಿಗಂತ್ ಅವರಿಗೂ ಸಹ ಸ್ಪೈನಲ್ ಕಾರ್ಡ್ ಇಂಜುರಿ ಆಗಿದೆ ಎಂದು ಹೇಳಲಾಗುತ್ತಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ.
ಇದನ್ನೂ ಓದಿ: Actor Diganth: ಗೋವಾ ಟ್ರಿಪ್‌ಲ್ಲಿದ್ದ ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು
ದಿಗಂತ್ ಅವರಿಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಬೇಕಿದೆ. ಸ್ಪೈನಲ್ ಕಾರ್ಡ್ ಆಪರೇಷನ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಸ್ಪೈನಲ್ ಕಾರ್ಡ್ ಇಂಜುರಿಯ ಮೊದಲ ಹಂತವಾದರೆ ಆಪರೇಷನ್‌ನಿಂದ ಸರಿ ಮಾಡಬಹುದಾಗಿದೆ. ಹೆಚ್ಚಾಗಿ ಸ್ಪೈನಲ್ ಕಾರ್ಡ್ ಇಂಜುರಿಯಾದರೆ ಮತ್ತೆ ಆ ವ್ಯಕ್ತಿ ಓಡಾಡಲು ಕಷ್ಟವಾಗುತ್ತೆ ಎಂದು ಸಹ ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.