ಬೆಂಗಳೂರು: ರಾಜ್ಯದ 541 ಅನುದಾನ ರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಮೂರು ವರ್ಷಗಳಿಂದ ಯಾವೊಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ನಿಯಮ ಪ್ರಕಾರ ಇಂತಹ ಕಾಲೇಜುಗಳಲ್ಲಿ ದಾಖಲಾತಿಗೆ ನಿರ್ಬಂಧ ಬೀಳುತ್ತದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಬಂಧ ಬೆಸೆಯುವ ಹಬ್ಬ ರಕ್ಷಾಬಂಧನ: ದಿನಾಂಕ, ಶುಭ ಮುಹೂರ್ತ, ಭದ್ರಾ ಕಾಲದ ಬಗ್ಗೆ ತಿಳಿಯಿರಿ
ಸದ್ಯ ಷರತ್ತು ಬದ್ದ ವಿನಾಯಿತಿ ನೀಡಿ ಸರ್ಕಾರ ಅನುಮೋದನೆ ನೀಡಿದೆ. ಷರತ್ತಿನ ಪ್ರಕಾರ ಈ ವರ್ಷ ಕನಿಷ್ಠ 40 ವಿದ್ಯಾರ್ಥಿಗಳು ಅನುದಾನಿತ ಕಾಲೇಜುಗಳಲ್ಲಿ ದಾಖಲಾತಿ ಪಡೆದಿರಬೇಕು. ಇನ್ನು ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಲೇಜಿನವರು ನೀಡಿದ ಮಾಹಿತಿ ಆಧರಿಸಿ ಇಲಾಖೆ ಪರಿಶೀಲನೆ ನಡೆಸುತ್ತದೆ.
ಕಳೆದ ಮೂರು ವರ್ಷಗಳಿಂದ ಶೂನ್ಯ ದಾಖಲಾತಿ ಪಡೆದ ಪಿಯು ಕಾಲೇಜುಗಳ ಪಟ್ಟಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಶೂನ್ಯ ದಾಖಲಾತಿಯ ಕಾಲೇಜುಗಳು ಎಲ್ಲೆಲ್ಲಿ...?
ಬೆಂಗಳೂರು ದಕ್ಷಿಣ 93
ಬೆಂಗಳೂರು ಉತ್ತರ 61
ಬಿಜಾಪುರ 26 ,
ತುಮಕೂರು 24
ಮೈಸೂರು 24
ಕಲಬುರಗಿ 23
ಚಿತ್ರದುರ್ಗ 21
ದಾವಣಗೆರೆ 19
ಧಾರವಾಡ 18
ಬೀದರ್ 18
ಚಿಕ್ಕಬಳ್ಳಾಪುರ 16
ಚಿಕ್ಕೋಡಿ 17
ಬೆಳಗಾವಿ 15
ಹಾಸನ 15
ಮಂಡ್ಯ 15
ರಾಯಚೂರು 14
ಬಳ್ಳಾರಿ 13
ಬಾಗಲಕೋಟೆ 11
ಕೋಲಾರ 10
ಮಂಗಳೂರು 10
ಹಾವೇರಿ 8
ಯಾದಗಿರಿ 8
ಉಡುಪಿ 7
ಚಾಮರಾಜನಗರ 6
ಚಿಕ್ಕಮಗಳೂರು 6
ರಾಮನಗರ 6
ಗದಗ 6
ಕೊಡಗು 6
ಕೊಪ್ಪಳ 5
ಶಿವಮೊಗ್ಗ 5
ಉತ್ತರ ಕನ್ನಡ 3
ಇದನ್ನೂ ಓದಿ: ಮುಂದಿನ 48 ಗಂಟೆಗಳಲ್ಲಿ ಬದಲಾಗಲಿದೆ 3 ರಾಶಿಗಳ ಜನರ ಭಾಗ್ಯ, ಈ ಗ್ರಹದ ಗೋಚರ ಹಣದ ಹೊಳೆಯೇ ಹರಿಸಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ