ಬ್ರಿಟನ್‌ನ ಮಾಜಿ ಸಚಿವ, ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರ ಪತ್ನಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ-ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಸಚಿವ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದ ಬಳಿಕ, ಮಾಧ್ಯಮದ ಬಳಿಕ ಪ್ರತಿಕ್ರಿಯೆ ನೀಡಲೆಂದು ಪತ್ರಕರ್ತರು ಅವರ ಮನೆ ಮುಂದೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಕಪ್‌ನಲ್ಲಿ ಟೀ ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ: ಈ ಮೂರು ಕಾರಣಗಳಿಂದ ಮಳೆಗಾಲದಲ್ಲಿ ಸಲಾಡ್ ಸೇವಿಸಬಾರದು
ಈ ಬೆಳವಣಿಗೆ ಎರಡು ರೀತಿಯಲ್ಲಿ ಸ್ವರೂಪ ಪಡೆದುಕೊಂಡಿದೆ. ಹೌದು, ಒಂದೆಡೆ ಪ್ರಧಾನಿ ಅಭ್ಯರ್ಥಿ ಪತ್ನಿ ಅಕ್ಷತಾ ಅವರ ಔದಾರ್ಯತೆಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಅವರು ಟೀ ತಂದಿರುವ ಕಪ್ ಬೆಲೆಯ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಪತ್ರಕರ್ತರಿಗೆ ಟೀ ತಂದುಕೊಡುವ ಮೂಲಕ ಸರಳತೆ ಮೆರೆದಿದ್ದರು. ಈ ನಡೆಯನ್ನು ಅಕ್ಷತಾ ನಕಲು ಮಾಡಿದ್ದಾರೆ ಎಂದು ಅಲ್ಲಿನ ಕೆಲ ಜನರು ವ್ಯಂಗ್ಯ ಮಾಡಿದ್ದಾರೆ.
ಇನ್ನು ಅಕ್ಷತಾ ಮೂರ್ತಿ ಟೀ ತಂದ ಕಪ್ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ. ಹಾಕ್-ಐಡ್ ಎಂಬ ಟ್ವಿಟರ್ ಬಳಕೆದಾರರು ಕಪ್‌ಗಳ ಬಗ್ಗೆ ಮಾತನಾಡಿದ್ದು, "ಈ ಕಪ್‌ಗಳು ಎಮ್ಮಾ ಲ್ಯಾಸಿ ಬ್ರಾಂಡ್‌ನದ್ದಾಗಿವೆ. ಇದರ ಬೆಲೆ 38 ಪೌಂಡ್‌ಗಳು" ಎಂದು ಹೇಳಿದ್ದಾರೆ.
"ರಿಷಿ ಸುನಕ್ ಅವರು ಮಗ್‌ಗಳಿಗಾಗಿ 38 ಪೌಂಡ್ ಖರ್ಚು ಮಾಡುತ್ತಾರೆಂದರೆ ನಂಬಲಾಗುತ್ತಿಲ್ಲ. ಅಕ್ಷತಾ ಮೂರ್ತಿ ಮಿಲಿಯನೇರ್ ಬೋರಿಸ್ ಜೋನ್ಸನ್ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆಯೇ?" ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
"ಈ ಟೀ ಕಪ್ ಮತ್ತು ಮಗ್‌ನ ವೆಚ್ಚದಿಂದ 2 ದಿನಗಳವರೆಗೆ ಕುಟುಂಬವನ್ನು ಪೋಷಿಸಬಹುದು" ಎಂದು ಮತ್ತೋರ್ವರು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಈ ಸ್ಟಾರ್ ಆಟಗಾರನೇ ಕಾರಣ! ಅಭಿಮಾನಿಗಳ ಆಕ್ರೋಶ
ಒಂದೆಡೆ ಸಕಾರಾತ್ಮಕ ಕಮೆಂಟ್‌ಗಳು ಬಂದಿದ್ದರೆ, ಇನ್ನೊಂದೆಡೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ, ಪತ್ರಕರ್ತರು ಅಕ್ಷತಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ತುಂಬಾ ಪ್ರೀತಿಯಿಂದ ಮನೆಯ ಹೊರಗೆ ಕಾಯುತ್ತಿದ್ದ ನಮಗೆ ಚಹಾ ಮತ್ತು ಬಿಸ್ಕತ್ತುಗಳನ್ನು ತಂದಿಕೊಟ್ಟಿದ್ದಾರೆ. ಧನ್ಯವಾದಗಳು" ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ