PIB Fact Check: ಕರೋನಾ ಮಹಾಮಾರಿಯನ್ನು ಎದುರಿಸಲು, ಇದುವರೆಗೆ ಕೋಟ್ಯಾಂತರ ಜನರು ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡಿದ್ದಾರೆ. ನೀವೂ ಕೂಡ ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ನೀವು ಎರಡೂ ಡೋಸ್ ಕರೋನಾ ಲಸಿಕೆ ಪಡೆದಿದ್ದರೆ, ಕೇಂದ್ರ ಸರ್ಕಾರವು ನಿಮಗೆ 5,000 ರೂ ನೀಡುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. ಸರ್ಕಾರವೇ ಈ ಸುದ್ದಿಯ ಕುರಿತು ಮಾಹಿತಿಯನ್ನು ನೀಡಿದೆ. ಏನಿದು ಹೊಸ ಮಾಹಿತಿ ಅಂತೀರಾ? ತಿಳಿದುಕೊಳ್ಳೋಣ ಬನ್ನಿ.
ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸರ್ಕಾರ ರೂ.5000
ಪಿಐಬಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೊವಿಡ್ 19 ಲಸಿಯ ಎರಡೂ ಪ್ರಮಾಣಗಳನ್ನು ಹಾಕಿಸಿಕೊಂಡವರು, ಫಾರ್ಮ್ ವೊಂದನ್ನು ಭರ್ತಿ ಮಾಡಿದರೆ, ಪ್ರಧಾನ ಮಂತ್ರಿ ಜನ ಕಲ್ಯಾಣ ವಿಭಾಗ ಅವರಿಗೆ ರೂ 5000 ನೀಡಲಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಿದೆ. ಈ ಸಿದ್ದಿ ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಇಂತಹ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ ಎಂದು ಪಿಐಬಿ ಹೇಳಿದೆ.
ಇದನ್ನೂ ಓದಿ-Viral Video : ಗೆಳೆಯರ ಈ ಕೆಲಸದಿಂದ ನೆತ್ತಿಗೇರಿತು ವರನ ಕೋಪ .! ಮುಂದೆ ..?
ಫೇಕ್ ಸಂದೇಶಗಳ ಬಗ್ಗೆ ಜಾಗ್ರತರಾಗಿ
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ರೀತಿಯ ಸಂದೇಶದ ಬಗ್ಗೆ ಜನರು ಜಾಗ್ರತರಾಗಿರಬೇಕು ಎಂದು ಪಿಐಬಿ ಹೇಳಿದೆ. ಈ ರೀತಿಯ ಸಂದೇಶಗಳನ್ನು ಮುಂದಕ್ಕೆ ಸಾಗಿಸಬೇಡಿ ಎಂದು ಹೇಳಿದೆ. ಈ ರೀತಿಯ ಸಂದೇಶಗಳ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣ ಅಪಾಯಕ್ಕೆ ಸಿಲುಕಿಕೊಳ್ಳಲಿದೆ ಎಂದು ಅದು ಹೇಳಿದೆ.
एक वायरल मैसेज में दावा किया जा रहा है कि जिन लोगों ने कोविड वैक्सीन लगवा ली है उन्हें एक ऑनलाइन फॉर्म भरने के बाद प्रधानमंत्री जन कल्याण विभाग द्वारा ₹5,000 प्रदान किए जा रहे हैं #PIBFactcheck:
▶️ इस मैसेज का दावा फर्जी है
▶️ कृपया इस फर्जी मैसेज को फॉरवर्ड न करें pic.twitter.com/AV8asQzexu— PIB Fact Check (@PIBFactCheck) July 12, 2022
ಇದನ್ನೂ ಓದಿ-ಭಾರತೀಯ ಸೇನೆ, ನೌಕಾಪಡೆ ಸೇರಲು ಇಚ್ಚಿಸುವವರು ಗಮನಿಸಿ: ಇಲ್ಲಿದೆ 5000ಕ್ಕೂ ಹೆಚ್ಚು ಉದ್ಯೋಗಾವಕಾಶ
ವೈರಲ್ ಆಗುತ್ತಿರುವ ಸಂದೇಶಗಳ ಫ್ಯಾಕ್ಟ್ ಚೆಕ್ ಈ ರೀತಿ ಮಾಡಿಸಿ
ಸಾಮಾಜಿಕ ಮಾಧ್ಯಮಗಳಲ್ಲಿ ದಿನನಿತ್ಯ ವೈರಲ್ ಆಗುತ್ತಿರುವ ಸಂದೇಶಗಳ ಕುರಿತು ನಿಮಗೂ ಕೂಡ ಸಂದೇಹವಿದ್ದರೆ, ಅಂತಹ ಸಂದೇಶಗಳ ಫ್ಯಾಕ್ಟ್ ಚೆಕ್ ಅನ್ನು ನೀವು ಮಾಡಿಸಬಹುದು. ಇದಕ್ಕಾಗಿ ನೀವು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಅಧಿಕೃತ ವೆಬ್ ಸೈಟ್ ಆಗಿರುವ https://factcheck.pib.gov.in/ ಗೆ ಭೇಟಿ ನೀಡಬಹುದು. ಇದಲ್ಲದೆ, ನೀವು ವಾಟ್ಸ್ ಆಪ್ ನಂಬರ್ ಆಗಿರುವ +918799711259ಗೆ ಸಂದೇಶ ಕಳುಹಿಸಬಹುದು. ಇದಲ್ಲದೆ, pibfactcheck@gmail.com ಗೆ ವಿಡಿಯೋ ಅನ್ನು ಇ-ಮೇಲ್ ಮಾಡುವ ಮೂಲಕ ಕೂಡ ಫ್ಯಾಕ್ಟ್ ಚೆಕ್ ನಡೆಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.