Vastu Tips: ಶ್ರಾವಣ ಮಾಸದಲ್ಲಿ ತುಳಸಿ ಜೊತೆ ಈ ಗಿಡ ನೆಟ್ಟರೆ ಮನೆಯಲ್ಲಿ ಹಣದ ಮಳೆಯಾಗಲಿದೆ..!

ವಾಸ್ತುದಲ್ಲಿ ಶಮಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶಮಿ ಗಿಡ ನೆಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ. 

ನವದೆಹಲಿ: ಮನೆಯಲ್ಲಿ ತುಳಸಿ ಗಿಡವಿದ್ದರೆ ತುಂಬಾ ಶುಭ. ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ತುಂಬಾ ಶ್ರೇಯಸ್ಕರ. ಇದು ಮನೆಯಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮತ್ತೊಂದೆಡೆ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಜೊತೆಗೆ ಕೆಲವು ವಿಶೇಷ ಸಸ್ಯಗಳನ್ನು ನೆಟ್ಟರೆ ಮನೆಯಲ್ಲಿ ಹಣದ ಮಳೆಯಾಗಲಿದೆ. ಶ್ರಾವಣ ಮಾಸದಲ್ಲಿ ತುಳಸಿಯೊಂದಿಗೆ ಯಾವ ಗಿಡಗಳನ್ನು ನೆಟ್ಟರೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಿಲ್ವಪತ್ರೆ ಎಲೆಗಳನ್ನು ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷವಾಗಿ ಅರ್ಪಿಸಲಾಗುತ್ತದೆ. ಬಿಲ್ವಪತ್ರೆ ಶಿವನಿಗೆ ತುಂಬಾ ಪ್ರಿಯ. ಅಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿಲ್ವಪತ್ರೆ ಮರವಿದ್ದರೆ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶ್ರಾವಣ ಮಾಸದಲ್ಲಿ ಬಿಲ್ವಪತ್ರೆಯ ಗಿಡವನ್ನು ಮನೆಯಲ್ಲಿ ನೆಟ್ಟರೆ ಅಪಾರ ಧನಲಾಭದ ಜೊತೆಗೆ ಸುಖ-ಸಂತೋಷ ಮನೆ ಮಾಡುತ್ತದೆ.

2 /5

ವಾಸ್ತುದಲ್ಲಿ ಶಮಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶಮಿ ಗಿಡ ನೆಡುವುದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ. ತುಳಸಿಯ ಜೊತೆಗೆ ಶಮಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಶುಭ ಫಲಗಳು ಬಹುಮಟ್ಟಿಗೆ ಹೆಚ್ಚಾಗುತ್ತವೆ. 

3 /5

ದತುರಾ ಶಿವನಿಗೆ ತುಂಬಾ ಪ್ರಿಯವಾದುದಾಗಿದೆ, ಆದ್ದರಿಂದ ಶಿವನ ಪೂಜೆಯಲ್ಲಿ ದತುರಾವನ್ನು ಅರ್ಪಿಸಲಾಗುತ್ತದೆ.  ಶ್ರಾವಣ ಮಾಸದಲ್ಲಿ ಭಾನುವಾರ ಅಥವಾ ಮಂಗಳವಾರ ಮನೆಯಲ್ಲಿ ಧಾತುರ ಗಿಡವನ್ನು ನೆಡಿ. ಇದರಿಂದ ಭೋಲೇನಾಥನ ಅಪಾರ ಆಶೀರ್ವಾದ ನಿಮಗೆ ದೊರೆಯುತ್ತದೆ.  

4 /5

ಬಾಳೆ ಗಿಡವನ್ನು ನೆಡುವುದರಿಂದ ವಿಷ್ಣು ಮತ್ತು ಗುರು ಗ್ರಹದ ಅನುಗ್ರಹ ದೊರೆಯುತ್ತದೆ. ತುಳಸಿ ಗಿಡದ ಜೊತೆಗೆ ಬಾಳೆಗಿಡವನ್ನು ಮನೆಯಲ್ಲಿ ನೆಟ್ಟರೆ ಆರ್ಥಿಕ ಸಮಸ್ಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ಆದರೆ ಈ ೨ ಗಿಡಗಳನ್ನು ಅಕ್ಕಪಕ್ಕದಲ್ಲಿ ನೆಡಬೇಡಿ. ಮನೆಯ ಮುಖ್ಯ ಬಾಗಿಲಿನ ಎಡಭಾಗದಲ್ಲಿ ತುಳಸಿ ಗಿಡ ಮತ್ತು ಬಲಭಾಗದಲ್ಲಿ ಬಾಳೆ ಗಿಡ ನೆಟ್ಟರೆ ಉತ್ತಮ.   

5 /5

ಶ್ರಾವಣ ಮಾಸದಲ್ಲಿ ಚಂಪಾ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ತುಂಬಾ ಶುಭಕರ. ಈ ಸಸ್ಯವು ಅದೃಷ್ಟದ ಸಂಕೇತವಾಗಿದೆ ಮತ್ತು ಅದನ್ನು ನೆಡುವುದರಿಂದ ಮನೆಗೆ ಬಹಳಷ್ಟು ಸಂಪತ್ತು ಬರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯವನ್ನು ವಾಯುವ್ಯ ದಿಕ್ಕಿನಲ್ಲಿ ನೆಡುವುದು ಉತ್ತಮ.