ಭಗವಾನ್ ವಿಷ್ಣು- ತಾಯಿ ಲಕ್ಷ್ಮಿ ಆಶೀರ್ವಾದಕ್ಕಾಗಿ ಬಾಳೆ ಗಿಡದೊಂದಿಗೆ ಈ ಸಸ್ಯಗಳನ್ನು ನೆಡಿ

Rules for planting Banana Tree: ಯಾವುದೇ ಕೆಲಸಕ್ಕೂ ಹಣ ಬಹಳ ಮುಖ್ಯ. ಹಾಗಾಗಿಯೇ ಪ್ರತಿಯೊಬ್ಬರೂ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಬಯಸುತ್ತಾರೆ. ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮೆಚ್ಚಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುವುದರ ಜೊತೆಗೆ ಧನ ವೃದ್ಧಿ ಆಗಲಿದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಇಲ್ಲಿವೆ ಸುಲಭ ಪರಿಹಾರಗಳು.

Written by - Yashaswini V | Last Updated : Jul 20, 2022, 07:48 AM IST
  • ಬಾಳೆ ಗಿಡದಲ್ಲಿ ದೇವಗುರು ಬೃಹಸ್ಪತಿ ಮತ್ತು ವಿಷ್ಣುವು ನೆಲೆಸಿದ್ದಾರೆ ಎಂದು ನಂಬಲಾಗಿದೆ.
  • ಆದರೆ, ಮನೆಯ ಬಳಿ ಕೆಲವು ದಿಕ್ಕಿನಲ್ಲಿ ಬಾಳೆ ಗಿಡವನ್ನು ನೆಡುವುದನ್ನು ಅಶುಭ ಎಂದು ಪರಿಗಣಿಸಲಾಗಿದೆ.
  • ಬಾಳೆ ಗಿಡವನ್ನು ಈಶಾನ್ಯ ಮೂಲೆಯಲ್ಲಿ ನೆಡುವುದನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.
ಭಗವಾನ್ ವಿಷ್ಣು- ತಾಯಿ ಲಕ್ಷ್ಮಿ ಆಶೀರ್ವಾದಕ್ಕಾಗಿ  ಬಾಳೆ ಗಿಡದೊಂದಿಗೆ ಈ ಸಸ್ಯಗಳನ್ನು ನೆಡಿ title=
Banana plant remedies

ಮನೆಯಲ್ಲಿ ಬಾಳೆ ಸಸಿ ನೆಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಹಿಂದೂ ಧರ್ಮದಲ್ಲಿ ಯಾವುದೇ ಪೂಜೆಯಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಸನಾತನ ಧರ್ಮದಲ್ಲಿ ಬಾಳೆಯನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಬಾಳೆ ಗಿಡದಲ್ಲಿ ದೇವಗುರು ಬೃಹಸ್ಪತಿ ಮತ್ತು ವಿಷ್ಣುವು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಾಗಾಗಿಯೇ, ಮನೆಯ ಮುಂದೆ ಬಾಳೆ ಸಸ್ಯವನ್ನು ನೆಡುತ್ತಾರೆ. ಶಾಸ್ತ್ರಗಳ ಪ್ರಕಾರ ಮನೆಯ ಮುಂದೆ ಶಾಸ್ತ್ರಬದ್ಧವಾಗಿ ಬಾಳೆ ಗಿಡ ನೆಟ್ಟು, ಮನಸಾರೆ ಪೂಜಿಸಿದರೆ ಅಂತಹ ಮನೆಯಲ್ಲಿ ಭಗವಾನ್ ವಿಷ್ಟು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. ಅಂತೆಯೇ, ಬಾಳೆ ಸಸ್ಯ ನೆಡುವಾಗ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದಾಗಿ ಕುಟುಂಬದಲ್ಲಿ ಬಿಕ್ಕಟ್ಟಿನ ಕಾರ್ಮೋಡ ಕವಿಯಲಿದೆ ಎಂದು ಸಹ ಹೇಳಲಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಬಾಳೆ ಗಿಡ ನೆಡುವಾಗ ಅನುಸರಿಸಬೇಕಾದ ನಿಯಮಗಳು ಯಾವುವು? ಬಾಳೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು? ಬಾಳೆ ಗಿಡದೊಂದಿಗೆ ಬೇರೆ ಯಾವ ಸಸ್ಯಗಳನ್ನು ನೆಡುವುದು ಶುಭ ಎಂದು ತಿಳಿಯೋಣ.

ಈ ದಿಕ್ಕಿನಲ್ಲಿ ಬಾಳೆಗಿಡವನ್ನು ಎಂದಿಗೂ ನೆಡಬೇಡಿ:
ಮೊದಲನೆಯದಾಗಿ, ಬಾಳೆ ಮರವನ್ನು ಎಂದಿಗೂ ಪಶ್ಚಿಮ, ದಕ್ಷಿಣ ದಿಕ್ಕಿನಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಬಾಳೆ ಗಿಡವನ್ನು ಈಶಾನ್ಯ ಮೂಲೆಯಲ್ಲಿ ನೆಡುವುದನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಅಂತಹ ಕೋನವು ಮನೆಯ ಸುತ್ತಲೂ ಲಭ್ಯವಿಲ್ಲದಿದ್ದರೆ, ನೀವು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಯೂ ಬಾಳೆ ಮರವನ್ನು ನೆಡಬಹುದು. 

ಇದನ್ನೂ ಓದಿ- Money Plant Tips : ಮನೆಯಲ್ಲಿ 'ಮನಿ ಪ್ಲಾಂಟ್' ಹೀಗೆ ಬೆಳೆಸಿದರೆ ಹಣದ ಮಳೆ ಸುರಿಯುತ್ತದೆ!

ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ:
ಬಾಳೆಗಿಡವನ್ನು ನೆಡುವಾಗ ಅದನ್ನು ಮನೆಯ ಮುಖ್ಯ ದ್ವಾರದ ಮುಂದೆ ನೆಡಬಾರದು ಎಂಬ ಅಂಶದ ಬಗ್ಗೆಯೂ ಗಮನ ಕೊಡಿ. ಬದಲಾಗಿ ಮುಖ್ಯ ದ್ವಾರದ ಬಲ-ಎಡ ಭಾಗದಲ್ಲಿ ಅಥವಾ ಬೇರೆಲ್ಲಿಯಾದರೂ ನೆಡಬಹುದು. ಬಾಳೆ ಗಿಡವು ಪವಿತ್ರವಾದುದಾಗಿದೆ, ಆದ್ದರಿಂದ ಅದರ ಸುತ್ತಲೂ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಯಾವುದೇ ಎಲೆಗಳು ಒಣಗಿದರೆ, ತಕ್ಷಣ ಅದನ್ನು ತೆಗೆದು ಎಸೆಯಿರಿ. 

ಬಾಳೆ ಗಿಡದ ಸನಿಹದಲ್ಲಿ ತುಳಸಿ ಗಿಡ ನೆಡುವುದು ತುಂಬಾ ಶುಭ:
ಬಾಳೆ ಮರದಲ್ಲಿ ವಿಷ್ಣು ಮತ್ತು ತುಳಸಿ ಗಿಡದಲ್ಲಿ ಮಾತಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಆದ್ದರಿಂದ, ನೀವು ಪೂಜೆಗಾಗಿ ಬಾಳೆ ಮರವನ್ನು ನೆಟ್ಟಾಗ, ಅದರ ಬಳಿ ಖಂಡಿತವಾಗಿಯೂ ತುಳಸಿ ಗಿಡವನ್ನು ನೆಡಬೇಕು. ಹೀಗೆ ಮಾಡುವುದರಿಂದ ನೀವು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದವನ್ನು ಪಡೆಯುತ್ತೀರಿ. ನೆನಪಿಡಿ, ಬಾಳೆ ಗಿಡದ ಸುತ್ತ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡ, ಮರಗಳನ್ನು ನೆಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲೂ ಮುಳ್ಳುಗಳು ಅಂದರೆ ಅಡೆತಡೆಗಳು ಬರಲಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Home Temple Tips : ಮನೆಯ ದೇವರಮನೆಯಲ್ಲಿ ಈ 5 ವಸ್ತುಗಳನ್ನು ಯಾವತ್ತೂ ಇಡಬೇಡಿ!

ಬಾಳೆಗಿಡಕ್ಕೆ ಯಾವಾಗಲೂ ಶುದ್ಧ ನೀರನ್ನೇ ಹಾಕಿ:
ಬಾಳೆಗಿಡಕ್ಕೆ ಯಾವಾಗಲೂ ಶುದ್ಧವಾದ ನೀರನ್ನು ಮಾತ್ರ ಅರ್ಪಿಸಿ.  ಜೊತೆಗೆ ಪ್ರತಿ ದಿನ ಬಾಳೆ ಗಿಡದ ಕೆಳಗೆ ತುಪ್ಪದ ದೀಪ ಬೆಳಗಿಸುವುದನ್ನು ಶುಭ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದವು ಸದಾ ಇರುತ್ತದೆ. 

ನೀವು ಬಾಳೆ ಮರವನ್ನು ನೆಟ್ಟಾಗ, ಅದರ ಸುತ್ತಲೂ ಹಳದಿ ಅಥವಾ ಕೆಂಪು ದಾರವನ್ನು ಕಟ್ಟಿಕೊಳ್ಳಿ. ಇದು ವಿಷ್ಣುವಿನ ಮೇಲಿನ ನಿಮ್ಮ ನಂಬಿಕೆಯ ಸಂಕೇತವಾಗಿದೆ. ಹೀಗೆ ಮಾಡುವುದರಿಂದ ದೇವರು ಪ್ರಸನ್ನನಾಗುತ್ತಾನೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತುಂಬುತ್ತಾನೆ ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News