ಅಜ್ಮೇರ್: Momo challengeಗೆ 15ರ ಹರೆಯದ ಬಾಲಕಿ ಬಲಿ

10 ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಮೋಮೋ ಚಾಲೆಂಜ್ ಗೆ ಬಲಿಯಾಗಿದ್ದಾಳೆ. ಆಕೆಯ ಹುಟ್ಟುಹಬ್ಬದ ಮೂರು ದಿನಗಳ ನಂತರ ಜುಲೈ 31 ರಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. Momo challenge ಕಾರಣದಿಂದಾಗಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

Last Updated : Aug 22, 2018, 12:33 PM IST
ಅಜ್ಮೇರ್: Momo challengeಗೆ 15ರ ಹರೆಯದ ಬಾಲಕಿ ಬಲಿ title=

ಅಜ್ಮೇರ್: ಬ್ಲೂ ವೇಲ್ ನಂತರ ಹೊಸ ಮಾರಣಾಂತಿಕ ಆಟ ಮೊಮೊ WhatsApp ಚಾಲೆಂಜ್ ಸಹ ವೈರಲ್ ಆಗುತ್ತಿದೆ. ಜಪಾನ್ ಮೂಲದ ಈ ಗೇಮ್ ಈಗಾಗಲೇ ಅರ್ಜೆಂಟೈನಾದಲ್ಲಿ 12ರ ಹರೆಯದ ಬಾಲಕಿಯನ್ನು ಬಲಿ ಪಡೆದಿತ್ತು. ಇದೀಗ ಈ ಗೇಮ್ ಭಾರತಕ್ಕೂ ಲಗ್ಗೆ ಇಟ್ಟಿದ್ದು, ಈ ಅಪಾಯಕಾರಿ ಆಟಕ್ಕೆ ಬಲಿಯಾದ ಸುದ್ದಿ ರಾಜಸ್ತಾನದ ಅಜ್ಮೀರ್ನಿಂದ ಹೊರಬಂದಿದೆ. ಇಲ್ಲಿ ಮೊಮೊ ಆಟದಲ್ಲಿ, 10 ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಮೋಮೋ ಚಾಲೆಂಜ್ ಗೆ ಬಲಿಯಾಗಿದ್ದಾಳೆ. 

ಆಕೆಯ ಹುಟ್ಟುಹಬ್ಬದ ಮೂರು ದಿನಗಳ ನಂತರ ಜುಲೈ 31 ರಂದು ಬಾಲಕಿ ಮೊದಲಿಗೆ ತನ್ನ ಕೈ ಕೊಯ್ದುಕೊಂಡು ನಂತರ ನೇಣಿಗೆ ಶರಣಾಗಿದ್ದಾಳೆ. ವಿದ್ಯಾರ್ಥಿಯ ಮೊಬೈಲ್ನಲ್ಲಿ ಬ್ರೋಸೆರ್ ಹಿಸ್ಟರಿಯಲ್ಲಿ ಕಂಡು ಬಂದ ಮೊಮೊ ಚಾಲೆಂಜ್ ಆಟದ ನಿಯಮಗಳು ಮತ್ತು ಆಕೆಯ ದೇಹದಲ್ಲಿನ ಗುರುತುಗಳಿಂದ ವಿದ್ಯಾರ್ಥಿನಿಯ ಸಾವಿಗೆ Momo challenge ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿನಿಯ ಸಾವಿಗೆ ಕಾರಣ ಏನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. 

ಆಕೆಯ ಕೋಣೆಯಲ್ಲಿ ದೊರೆತ ಡೆತ್ ನೋಟ್ ನಲ್ಲಿ ಆಕೆ ತನ್ನ ಜನ್ಮದಿನದಂದೇ ಸಾಯಬೇಕಿತ್ತು ಎಂದು ಬರೆದಿದ್ದಾಳೆ.

ಏನಿದು ಮೋಮೋ ಚಾಲೆಂಜ್?
ವಾಸ್ತವವಾಗಿ, ಮೋಮೋ ಚಾಲೆಂಜ್ ಎಂಬುದು WhatsApp ನಲ್ಲಿ ಹರಡುತ್ತಿರುವ ಆತ್ಮಹತ್ಯಾ-ಪ್ರಚೋದಕ ಆಟವಾಗಿದೆ. ಮೋಮೋ ಚಾಲೆಂಜ್ ನಲ್ಲಿ, ಹದಿಹರೆಯದವರಿಗೆ ಸವಾಲುಗಳನ್ನು ಕಳುಹಿಸಲು ಕಲಾಕೃತಿಯ ಚಿತ್ರವನ್ನು ಬಳಸಲಾಗುತ್ತದೆ. ಈ ಗೇಮ್ ಹದಿಹರೆಯದವರಿಗೆ ಸಾಯುವ ಟಾಸ್ಕ್ ನೀಡುತ್ತಿದೆ. ಅಗಲ ಕಣ್ಣುಗಳಿರುವ ಭಯಾನಕ  ಬಾಲಕಿಯೋರ್ವಳ ಮುಖಚರ್ಯೆ ಹೊಂದಿರುವ ಈ ಗೇಮ್ ಟಾರ್ಗೆಟ್ ಹದಿಹರೆಯದ ಮಕ್ಕಳೇ ಆಗಿದ್ದಾರೆ. ಬ್ಲೂ ವೇಲ್ ಗೇಮ್ ನಂತೆಯೇ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವಂತಹ ಈ ಗೇಮ್ ಭಾರತಕ್ಕೂ ಕಾಲಿಡುವ ಮುನ್ನ ಎಚ್ಚರಿಕೆ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ.

WhatsApp ನಲ್ಲಿ ವಿದೇಶಿಯರಿಂದ ಸಂದೇಶವಿರುತ್ತದೆ. ನೀವು WhatsApp ನಲ್ಲಿ ಆ ಸಂಖ್ಯೆಯನ್ನು ಸೇವ್ ಮಾಡಿದರೆ, ನೀವು ಅಪಾಯಕಾರಿ ಚಿತ್ರದ ಪ್ರೊಫೈಲ್ ಅನ್ನು ನೋಡುತ್ತೀರಿ. ಮಾಧ್ಯಮ ವರದಿಗಳ ಪ್ರಕಾರ, ಮೊಮೊ ಅವರ ಪ್ರೊಫೈಲ್ ಮೊದಲು ಫೇಸ್ಬುಕ್ನಲ್ಲಿ ಕಾಣಿಸಿಕೊಂಡಿತು. 2016 ರಲ್ಲಿ ಜಪಾನ್ನ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ವಿಗ್ರಹದ ಮುಖವು ಪ್ರೊಫೈಲ್ ನ ಚಿತ್ರವಾಗಿ ತೋರಿಸುತ್ತದೆ.

ಈ ಅಪಾಯಕಾರಿ ಆಟದ ಸಾಮಾಜಿಕ ಮಾಧ್ಯಮದ ಮೂಲಕ ಸಾಕಷ್ಟು ಫಾಸ್ಟ್ ಆಗಿ ವೈರಲ್ ಆಗುತ್ತಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಈ ಆಟದ ಕಾರಣ ಗಾಬರಿ ಉಂಟಾಗಿರುವುದನ್ನು ಕಾಣಬಹುದು.
 

Trending News