ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಯು ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾಗಿದೆ.
ನವದೆಹಲಿ : ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿಗಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ದೆಹಲಿಯ 4 ಸ್ಥಳಗಳು ಸೇರಿದಂತೆ ಎಲ್ಲಾ ಸ್ಮಾರಕಗಳಿಗೆ ಆಗಸ್ಟ್ 15 ರವರೆಗೆ ಉಚಿತ ಪ್ರವೇಶ ಕಲ್ಪಿಸಿದೆ. ಈ ಪ್ರದೇಶಗಳಿಗೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಸಮಯ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಯು ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾಗಿದೆ. ಇದು ಹುಮಾಯೂನ್ ಸಮಾಧಿಯಂತೆ ಕಾಣುತ್ತದೆ. ಸುತ್ತಲೂ ಹಚ್ಚ ಹಸಿರಿನ ಉದ್ಯಾನವನಗಳಿಂದ ಸುತ್ತುವರೆದಿರುವ ಈ ಸ್ಥಳದಲ್ಲಿ ಮುಕ್ತವಾಗಿ ತಿರುಗಾಡಬಹುದು.
ಜಂತರ್ ಮಂತರ್ ಖಗೋಳ ವೀಕ್ಷಣಾಲಯವಾಗಿದ್ದು, ಇದನ್ನು ರಾಜಾ ಜೈ ಸಿಂಗ್ ನಿರ್ಮಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಇದ್ದವರು ಇಲ್ಲಿ ವೀಕ್ಷಣಾಲಯಕ್ಕೆ ಭೇಟಿ ನೀಡಬಹುದು
ಯಮುನಾ ನದಿಯ ದಡದಲ್ಲಿರುವ ಹಳೆಯ ಕೋಟೆಯನ್ನು ಶೇರ್ ಶಾ ಸೂರಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದ. ವಾಸ್ತುಶಿಲ್ಪಡ ಬಗ್ಗೆ ಆಸಕ್ತಿ ಇದ್ದವರಾಗಿದ್ದರೆ, ಈ ಸ್ಥಳಕ್ಕೆ ಭೇಟಿ ನೀಡಬಹುದು.
ಸಲೀಂಘಡ್ ಕೋಟೆಯನ್ನು ಶೇರ್ ಷಾ ಸೂರಿಯ ಮಗ ಸಲೀಂ ನಿರ್ಮಿಸಿದ್ದ. ಇದು ಮೊಘಲರ ಕಾಲದ ವಿಶಿಷ್ಟ ಪರಂಪರೆಯಾಗಿದೆ.