Arjun Tendulkar : ಮುಂಬೈ ತಂಡಕ್ಕೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ ಅರ್ಜುನ್ ತೆಂಡೂಲ್ಕರ್!

ಅರ್ಜುನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಮತ್ತು ಪುದುಚೇರಿ ವಿರುದ್ಧ 2020-21ರಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದ್ದರು.

Written by - Channabasava A Kashinakunti | Last Updated : Aug 11, 2022, 07:17 PM IST
  • ಸಂಚಲನ ಮೂಡಿಸಿದೆ ಅರ್ಜುನ್ ತೆಂಡೂಲ್ಕರ್ ನಿರ್ಧಾರ
  • ಮುಂಬೈ ತಂಡವನ್ನು ತೊರೆಯಲು ಸಿದ್ಧತೆ
  • ಇದೀಗ ಈ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಅರ್ಜುನ್
Arjun Tendulkar : ಮುಂಬೈ ತಂಡಕ್ಕೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ ಅರ್ಜುನ್ ತೆಂಡೂಲ್ಕರ್! title=

Arjun Tendulkar : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡವನ್ನು ತೊರೆಯಲು ಸಿದ್ಧರಿದ್ದರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮುಂದಿನ ದೇಶೀಯ ಋತುವಿನಲ್ಲಿ ಅರ್ಜುನ್ ಗೋವಾ ಪರ ಆಡುವ ಎಲ್ಲಾ ಸಾಧ್ಯತೆಗಳಿವೆ. ಈ ಎಡಗೈ ವೇಗದ ಬೌಲರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಟೀಂನಲ್ಲಿ ಆಡುತ್ತಿದ್ದರು. ಅರ್ಜುನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಮತ್ತು ಪುದುಚೇರಿ ವಿರುದ್ಧ 2020-21ರಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದ್ದರು.

ಸಂಚಲನ ಮೂಡಿಸಿದೆ ಅರ್ಜುನ್ ತೆಂಡೂಲ್ಕರ್ ನಿರ್ಧಾರ 

ಜೂನಿಯರ್ ತೆಂಡೂಲ್ಕರ್ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ (ಎನ್‌ಒಸಿ) ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಹೇಳಿರುವ ಪ್ರಕಾರ, ಅರ್ಜುನ್ ತಮ್ಮ ವೃತ್ತಿಜೀವನದ ಈ ಹಂತದಲ್ಲಿ ಸಾಧ್ಯವಾದಷ್ಟು ಸಮಯವನ್ನು ಮೈದಾನದಲ್ಲಿ ಕಳೆಯುವುದು ಮುಖ್ಯವಾಗಿದೆ. ಎರಡನೇ ಸ್ಥಾನದಿಂದ ಆಡುವುದರಿಂದ ಅರ್ಜುನ್ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡುತ್ತದೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಹೊಸ ಹಂತವನ್ನು ಪ್ರಾರಂಭಿಸುತ್ತಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ : Asia Cup : ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಈ 5 ಬ್ಯಾಟ್ಸ್‌ಮನ್‌, ಇದ್ರಲ್ಲಿ 2 ಭಾರತೀಯರು!

ಮುಂಬೈ ತಂಡವನ್ನು ತೊರೆಯಲು ಸಿದ್ಧತೆ

ಅರ್ಜುನ್ ತೆಂಡೂಲ್ಕರ್ ಮೂರು ಋತುಗಳ ಹಿಂದೆ ಶ್ರೀಲಂಕಾ ವಿರುದ್ಧ ಭಾರತ ಅಂಡರ್-19 ಪರ ಎರಡು ಪಂದ್ಯಗಳನ್ನು ಆಡಿದ್ದರು. ಆ ಸಮಯದಲ್ಲಿ ಅವರನ್ನು ಮುಂಬೈನ ಸಂಭಾವ್ಯ ಸೀಮಿತ ಓವರ್‌ಗಳ ತಂಡದಲ್ಲಿಯೂ ಸೇರಿಸಲಾಯಿತು. ಈ ಋತುವಿನಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಅವಕಾಶ ಸಿಗದೆ ಮುಂಬೈ ತಂಡದಿಂದ ಕೈಬಿಡಲ್ಪಟ್ಟಿರುವುದು ಅರ್ಜುನ್‌ಗೆ ದೊಡ್ಡ ನಿರಾಸೆಯಾಗಿದೆ.

ಇದೀಗ ಈ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಅರ್ಜುನ್

ರಾಜ್ಯದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ಗೋವಾ ಕ್ರಿಕೆಟ್ ಸಂಸ್ಥೆಯ (ಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಸಿಎ ಅಧ್ಯಕ್ಷ ಸೂರಜ್ ಲೊಟ್ಲಿಕರ್ ಹೇಳಿರುವ ಪ್ರಕಾರ, 'ನಾವು ಎಡಗೈ ವೇಗದ ಬೌಲರ್‌ಗಾಗಿ ಹುಡುಕುತ್ತಿದ್ದೇವೆ. ಅದಕ್ಕಾಗಿಯೇ ನಾವು ಅರ್ಜುನ್ ತೆಂಡೂಲ್ಕರ್ ಅವರನ್ನು ಗೋವಾ ತಂಡಕ್ಕೆ ಸೇರಲು ಆಹ್ವಾನಿಸಿದ್ದೇವೆ. ಸೀಸನ್‌ಗೆ ಮುನ್ನ ನಾವು ಸೀಮಿತ ಓವರ್‌ಗಳ ಅಭ್ಯಾಸ ಪಂದ್ಯಗಳನ್ನು ಆಡುತ್ತೇವೆ ಮತ್ತು ಅವರು ಈ ಪಂದ್ಯಗಳಲ್ಲಿ ಆಡುತ್ತಾರೆ. ಈ ಪಂದ್ಯಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆಯ್ಕೆಗಾರರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Team India : ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ಗೆ ಟೀಂ ಇಂಡಿಯಾದಿಂದ ಗೆಟ್ ಪಾಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News