ಪ್ರವಾಹ-ಮಳೆಯಲ್ಲಿ ಕಾರು ಹಾನಿಗೊಳಗಾಗಿದ್ದರೆ, ಸಿಗಲಿದೆ ಅತ್ಯುತ್ತಮ ಕಾರು ನಿರ್ವಹಣೆ ಪ್ಯಾಕೇಜ್‌ಗಳು ಮತ್ತು ವಿಮೆ

Car Policy Natural Calamities: ಕಾರು ತಯಾರಕರು ಹಾನಿಗೊಳಗಾದ ವಾಹನಗಳನ್ನು ಮತ್ತೆ ರಿಪೇರಿ ಮಾಡುವ ಸಲುವಾಗಿ ವಿಶೇಷ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಹಾನಿಯನ್ನು ಒಳಗೊಂಡಿರುವ ಕಾರು ವಿಮೆಯನ್ನು ಆರಂಭಿಸಿದೆ.  

Written by - Ranjitha R K | Last Updated : Sep 9, 2022, 01:19 PM IST
  • ಮಳೆಯಿಂದಾಗಿ ರಾಜ್ಯ ರಾಜಧಾನಿ ತತ್ತರಿಸಿ ಹೋಗಿದೆ.
  • ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ನೀರು ನುಗ್ಗಿದೆ.
  • ವಾಹನಗಳನ್ನು ಹಾನಿಗೊಳಗಾಗಿಸಿದ ನೀರು
ಪ್ರವಾಹ-ಮಳೆಯಲ್ಲಿ ಕಾರು ಹಾನಿಗೊಳಗಾಗಿದ್ದರೆ, ಸಿಗಲಿದೆ ಅತ್ಯುತ್ತಮ ಕಾರು ನಿರ್ವಹಣೆ ಪ್ಯಾಕೇಜ್‌ಗಳು ಮತ್ತು ವಿಮೆ title=
Car Policy Natural Calamities (file photo)

Car Policy Natural Calamities : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯ ಕಾರಣ, ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ನೀರು ನುಗ್ಗಿದೆ. ಹಿಂದೆಂದೂ ಕಾಣದ ಪ್ರವಾಹ ಸ್ಥಿತಿ ರಾಜ್ಯ ರಾಜಧಾನಿಯಲ್ಲಿ ಎದುರಾಗಿದೆ. ಪ್ರವಾಹದಲ್ಲಿ ಹಲವರ ಬೆಲೆಬಾಳುವ ಕಾರುಗಳಿಗೂ ಹಾನಿಯಾಗಿದೆ.  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅನೇಕ ಕಾರುಗಳು ನೀರಿನಲ್ಲಿ  ತೇಲುತ್ತಿರುವ ದೃಶ್ಯ ಕಂಡು ಬಂದಿತ್ತು. ಪ್ರವಾಹದಿಂದಾಗಿ ಹಲವಾರು ವಾಹನಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ, ಕಾರು ತಯಾರಕರು ಹಾನಿಗೊಳಗಾದ ವಾಹನಗಳನ್ನು ಮತ್ತೆ ರಿಪೇರಿ ಮಾಡುವ ಸಲುವಾಗಿ ವಿಶೇಷ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಹಾನಿಯನ್ನು ಒಳಗೊಂಡಿರುವ ಕಾರು ವಿಮೆಯನ್ನು ಆರಂಭಿಸಿದೆ.  

ಗ್ರಾಹಕರಿಗೆ ಕಾರು ನಿರ್ವಹಣೆ ಪ್ಯಾಕೇಜ್ : 
ಬೆಂಗಳೂರಿನಲ್ಲಿ ಪ್ರವಾಹ ಪೀಡಿತ ಗ್ರಾಹಕರಿಗಾಗಿ ವಾಹನ ನಿರ್ವಹಣೆ ಪ್ಯಾಕೇಜ್ ಅನ್ನು ಐಷಾರಾಮಿ ಕಾರು ತಯಾರಕ ಲೆಕ್ಸಸ್ ಇಂಡಿಯಾ ಪ್ರಾರಂಭಿಸಿದೆ.  'ಲೆಕ್ಸಸ್ ಕೇರ್ಸ್ ಪ್ಯಾಕೇಜ್' ಅಡಿಯಲ್ಲಿ, ಬೆಂಗಳೂರಿನಲ್ಲಿ ಮಳೆ, ಪ್ರವಾಹ ಅಥವಾ ಪ್ರವಾಹದಿಂದ ಹಾನಿಗೊಳಗಾದ ಕಾರುಗಳ ದುರಸ್ತಿಗಾಗಿ ಕಂಪನಿಯು ವಿಶೇಷ ನೆರವು ಮತ್ತು ದರಗಳನ್ನು ವಿಸ್ತರಿಸುತ್ತಿದೆ. 

ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ ನೋಡಿ

 ಕಾಂಪ್ರಹೆನ್ಸಿವ್  ಕವರೇಜ್ :   
ನೈಸರ್ಗಿಕ ವಿಕೋಪಗಳಿಂದಾಗಿ ಕಾರುಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸಲು ಕಾರು ಮಾಲೀಕರಿಗೆ ಸಹಾಯ ಮಾಡುವ ಪಾಲಿಸಿಗಳನ್ನು ಕಾರು ವಿಮೆ ಮಾಡಿಸುವವರು ನೀಡುತ್ತಾರೆ. ಕಳೆದ ತಿಂಗಳು, ಅಕೋ ತನ್ನ ಬ್ಲಾಗ್‌ನಲ್ಲಿ, ಸಮಗ್ರ ಕವರೇಜ್ ಹೊಂದಿದ್ದರೆ ಮಾತ್ರ ಪ್ರವಾಹ ಹಾನಿಯನ್ನು ಕವರ್ ಮಾಡಲಾಗುವುದು. ಇದು ಒಪ್ಶನಲ್ ಆಗಿದ್ದು, ಥರ್ಡ್ ಪಾರ್ಟಿ ವಿಮೆಯಂತೆ ಕಡ್ಡಾಯವಲ್ಲ  ಎಂದು ಹೇಳಿತ್ತು. 

ಕಾಂಪ್ರಹೆನ್ಸಿವ್  ಕವರೇಜ್ಎಂದರೇನು? :
ಪ್ರವಾಹಗಳು, ಭೂಕಂಪಗಳು, ಚಂಡಮಾರುತಗಳು ಮುಂತಾದ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಹಾನಿಗಳನ್ನು ಮರುಪಡೆಯಲು ಕಾಂಪ್ರಹೆನ್ಸಿವ್  ಕವರೇಜ್  ಪಾಲಿಸಿಯು ಕಾರು ಮಾಲೀಕರಿಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ, ಆಕಸ್ಮಿಕ ಹಾನಿ, ಬೆಂಕಿ ಅಥವಾ ಸ್ಫೋಟ, ಕಳ್ಳತನ ಮುಂತಾದ ಮಾನವ ನಿರ್ಮಿತ ವಿಪತ್ತುಗಳನ್ನು ಸಹ ಪಾಲಿಸಿ ಒಳಗೊಂಡಿದೆ. ಪ್ರವಾಹವು ಭಾರೀ ಹಾನಿಯನ್ನುಂಟುಮಾಡುತ್ತದೆ ಮತ್ತು ಕಾರಿನ ಮೌಲ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಕೋ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಇದನ್ನು ರಿಪೇರಿ ಮಾಡಲು ಹೋದರೆ, ಭಾರೀ ಖರ್ಚು ಎದುರಾಗುತ್ತದೆ.  ಕಾಂಪ್ರಹೆನ್ಸಿವ್  ಕವರೇಜ್  ವಿಮೆ ಸ್ವಲ್ಪ ದುಬಾರಿ ಎನಿಸಬಹುದು. ಆದರೆ, ಅನಿರೀಕ್ಷಿತ ನಷ್ಟದ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು.

ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಬಿಗ್‌ ನ್ಯೂಸ್‌.! ಸೇರ್ಪಡೆಯಾಗುತ್ತಿದೆ ಹೊಸ ಸೌಲಭ್ಯ, ಪ್ರತಿಯೊಬ್ಬ ಫಲಾನುಭವಿಗೂ ಈ ಭಾಗ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News