Health Tips : ಆರೋಗ್ಯಕರ, ಬಲವಾದ ಸ್ನಾಯುಗಳಿಗೆ ವೈದ್ಯರ ಸಲಹೆ ಇಲ್ಲಿದೆ

ಆರೋಗ್ಯಕರ ಸ್ನಾಯುಗಳನ್ನು ಹೊಂದಿದ್ದರೆ, ಅದನ್ನು ಸಾಮಾನ್ಯವಾಗಿ ಹೊರನೋಟಕ್ಕೆ ಗೋಚರವಾಗುವಂತೆ, ಉದಾ: ಬಲವಾದ ಸ್ನಾಯುಗಳು ಅಥವಾ ವಾಶ್‍ಬೋರ್ಡ್ ಆಬ್ಸ್‍ನಂತಹ ಸೌಂದರ್ಯವರ್ಧಕ ನೋಟಗಳಿಗೆ ಹೋಲಿಸಲಾಗುತ್ತದೆ. 

Written by - Chetana Devarmani | Last Updated : Sep 12, 2022, 05:48 PM IST
  • ಆರೋಗ್ಯಕರ ಸ್ನಾಯುಗಳನ್ನು ಪಡೆಯುವುದು ಹೇಗೆ
  • ಬಲವಾದ ಸ್ನಾಯುಗಳಿಗೆ ವೈದ್ಯರ ಸಲಹೆ ಇಲ್ಲಿದೆ
Health Tips : ಆರೋಗ್ಯಕರ, ಬಲವಾದ ಸ್ನಾಯುಗಳಿಗೆ ವೈದ್ಯರ ಸಲಹೆ ಇಲ್ಲಿದೆ  title=
ಸ್ನಾಯು

Muscles health : ಆರೋಗ್ಯಕರ ಸ್ನಾಯುಗಳನ್ನು ಹೊಂದಿದ್ದರೆ, ಅದನ್ನು ಸಾಮಾನ್ಯವಾಗಿ ಹೊರನೋಟಕ್ಕೆ ಗೋಚರವಾಗುವಂತೆ, ಉದಾ: ಬಲವಾದ ಸ್ನಾಯುಗಳು ಅಥವಾ ವಾಶ್‍ಬೋರ್ಡ್ ಆಬ್ಸ್‍ನಂತಹ ಸೌಂದರ್ಯವರ್ಧಕ ನೋಟಗಳಿಗೆ ಹೋಲಿಸಲಾಗುತ್ತದೆ. ಆದರೆ ಇದು ಸಂಪೂರ್ಣ ನಿಜವಲ್ಲ. ಆರೋಗ್ಯಕರ ಸ್ನಾಯುಗಳನ್ನು ಹೊಂದಿರುವುದು ಚರ್ಮದ ಆಳಕ್ಕಿಂತ ಹೆಚ್ಚು ಮತ್ತು ಅವುಗಳ ಮಹತ್ವವು ಇನ್ನೂ ಆಳವಾಗಿದೆ. ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಜೀವನವನ್ನು ಅರ್ಥಪೂರ್ಣ ಮತ್ತು ದೈನಂದಿನ ಚಟುವಟಿಕೆಗಳನ್ನು ಸಂತೃಪ್ತವಾಗಿ ಮಾಡುವ ಸಾಮಥ್ರ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಸ್ನಾಯುಗಳು ಅವಶ್ಯಕವಾಗಿವೆ. ಸ್ನಾಯುಗಳ ಕಳಪೆ ಆರೋಗ್ಯವು ವ್ಯಕ್ತಿಯ ನಡೆಯುವಿಕೆ ಅಥವಾ ಉಸಿರಾಟದಂತಹ ಸಣ್ಣ ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ಮುಂದುವರಿಸುವ ಸಾಮಥ್ರ್ಯದ ಮೇಲೆ ಸಹಾ ನಿಧಾನವಾಗಿ ಪರಿಣಾಮ ಬೀರುತ್ತದೆ.  

ನಿಮ್ಮ ಸ್ನಾಯುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ವಿಷಯಕ್ಕೆ ಬಂದರೆ, ಪೋಷಣೆ ಮತ್ತು ವ್ಯಾಯಾಮಗಳು ತಳಹದಿಯ ಎರಡು ಸ್ತಂಭಗಳಾಗಿವೆ. ಅಬಾಟ್‍ನ ನ್ಯೂಟ್ರಿಷನ್ ವ್ಯವಹಾರಗಳ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ. ಇರ್ಫಾನ್ ಶೇಖ್, ಸ್ನಾಯುಗಳ ಆರೋಗ್ಯ ಮತ್ತು ಪೋಷಣೆಯ ನಡುವಿನ ಸಂಬಂಧದ ಕುರಿತು ಮತ್ತು ಸರಿಯಾದ ಪೌಷ್ಟಿಕಾಂಶದ ಸೇವನೆಯೊಂದಿಗೆ ಬೆಂಬಲಿಸದಿದ್ದಲ್ಲಿ ಅತ್ಯಂತ ದೃಢವಾದ ವ್ಯಾಯಾಮದ ನಿಯಮಗಳು ಏಕೆ ನಿಷ್ಪರಿಣಾಮಕಾರಿಯಾಗುತ್ತವೆ ಎಂಬುದರ ಕುರಿತು ಹೆಚ್ಚಿನದನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: Health Tips : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿಂದ್ರೆ ಎಷ್ಟೆಲ್ಲಾ ಲಾಭ ಗೊತ್ತಾ?

ಸ್ನಾಯುಗಳು ಎಂದಿಗೂ ವಿಶ್ರಮಿಸುವುದಿಲ್ಲ : 

ಸ್ನಾಯುಗಳು ಚಲನಶೀಲತೆ, ಸಮತೋಲನ, ಭಂಗಿ ಮತ್ತು ಶಕ್ತಿ ಮತ್ತು ಚೈತನ್ಯದ ವಿಷಯದಲ್ಲಿ ನಮ್ಮ ದೇಹವನ್ನು ಸದಾ ಬೆಂಬಲಿಸುತ್ತವೆ. ಈ ಚಟುವಟಿಕೆಗಳ ಮೂಲಕ ಪುನರುತ್ಪಾದನೆಯ ನೈಸರ್ಗಿಕ ಪ್ರಕ್ರಿಯೆಯು ಸಂಭವಿಸುತ್ತದೆ - ಸ್ನಾಯು ಪ್ರೋಟೀನ್‍ಗಳ ವಿಘಟನೆ ಮತ್ತು ಸ್ನಾಯು ಪ್ರೋಟೀನ್ ನಿರ್ಮಾಣ ಎರಡೂ, ದಿನವಿಡೀ ದೇಹದಲ್ಲಿ ನಡೆಯುತ್ತಿರುತ್ತದೆ. ವಿಘಟನೆಯು  ನಿರ್ಮಾಣಕ್ಕಿಂತ ವೇಗವಾಗಿ ಆಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದೇ ಇದರ ಗುರಿಯಾಗಿದೆ.

ಕಿರಿಯ ವಯಸ್ಕರು ಸಾಮಾನ್ಯವಾಗಿ ನೈಸರ್ಗಿಕ ವಿಘಟನೆಯನ್ನು ಸರಿದೂಗಿಸಲು ಸಮರ್ಥರಾಗಿರುತ್ತಾರೆ, ಸಮತೋಲನವು ವಯಸ್ಸಿನೊಂದಿಗೆ ಬದಲಾಗಬಹುದು. 40 ವರ್ಷಗಳ ವಯಸ್ಸಿನಿಂದಲೇ ಒಂದು ದಶಕದಲ್ಲಿ ನಾವು ನಮ್ಮ ಸುಮಾರು 8% ರಷ್ಟು ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತೇವೆ.   ಆಯಾಸ, ಶಕ್ತಿ ಮತ್ತು ಚೈತನ್ಯದ ಕೊರತೆ, ದುರ್ಬಲ ಚಲನಶೀಲತೆ ಮತ್ತು ದುರ್ಬಲವಾದ ಪ್ರತಿರಕ್ಷಣಾ ಕವಚಗಳುಸ್ನಾಯುವಿನ ಆರೋಗ್ಯದ ಕುಸಿತದ ವಿಶಿಷ್ಟ ಲಕ್ಷಣಗಳಾಗಿವೆ.

ನಿಮ್ಮ ಸ್ನಾಯುಗಳನ್ನು ಪೋಷಿಸುವ ಪೋಷಕಾಂಶಗಳು ;

ಸ್ನಾಯುಗಳನ್ನು ಕಳೆದುಕೊಳ್ಳುವುದು ಸಹಜ, ಆದರೆ ಅದರ ಪ್ರಗತಿಯ ದರ ಮತ್ತು ಋಣಾತ್ಮಕ ಪರಿಣಾಮಗಳನ್ನಲ್ಲ. ಪೌಷ್ಠಿಕಾಂಶ ಮತ್ತು ಸ್ನಾಯುಗಳ ಆರೋಗ್ಯಗಳು ಜೊತೆಜೊತೆಗೇ ಹೋಗುತ್ತವೆ. ಎಲ್ಲದರ ಹೊರತಾಗಿಯೂ, ಇದು ನಿಮ್ಮ ದೇಹದಲ್ಲಿನ ಪ್ರತಿಯೊಂದು ಕೋಶಕ್ಕೆ ಇಂಧನವಾಗುವುದು  ಆಹಾರವೇ ಮತ್ತು ಅದು ಶಕ್ತಿಗಾಗಿ ನಿಮ್ಮ ಸ್ನಾಯುಗಳಿಗೆ ಬೆಂಬನ ಕೊಡುತ್ತದೆ. ನಿಮ್ಮ ಸ್ನಾಯುವಿನ ಆರೋಗ್ಯವನ್ನು ಬೆಂಬಲಿಸಲು ಸಾಕಷ್ಟು ಪೋಷಣೆ ಮತ್ತು ಸಮತೋಲಿತ ಆಹಾರವನ್ನು ಪಾಲಿಸುವುದು ಉತ್ತಮ ಮಾರ್ಗವಾಗಿದೆ. ಆದರೆ ಯಾವುದೇ ಒಂದು ಆಹಾರವು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ಆದ್ದರಿಂದ ವಿವಿಧ ಪ್ರಕಾರದ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ. ನಿಮ್ಮ ಪೌಷ್ಠಿಕಾಂಶದ ಸೇವನೆಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರುವ ಮತ್ತು ಸ್ನಾಯುಗಳನ್ನು ಬೆಳೆಸುವ ಮತ್ತು ರಕ್ಷಿಸುವ ಕೆಲವು ವಿಧಾನಗಳು ಇಲ್ಲಿವೆ:

ಬೆಳಗಿನ ಉಪಾಹಾರಕ್ಕೆ ಆದ್ಯತೆ ನೀಡಿ : ಸಮಯದ ಕೊರತೆಯಿಂದ ತಪ್ಪಿಸಿಕೊಳ್ಳುವ ಸಾಮಾನ್ಯ ಊಟವೆಂದರೆ ಅದು ಬೆಳಗಿನ ಉಪಾಹಾರವೇ ಆಗಿದೆ, ಆದರೆ ಇದು ನಿಮ್ಮ ದೇಹಕ್ಕೆ ಇಡೀ ದಿನಕ್ಕೆ ಬೇಕಾದ ಪೋಷಣೆಯ ಶಕ್ತಿಯ ಕೇಂದ್ರವಾಗಿದೆ. ಮೊಟ್ಟೆ, ಡೈರಿ ಪದಾರ್ಥಗಳು, ಧಾನ್ಯಗಳು ಮತ್ತು ಹಣ್ಣುಗಳಂತಹ ಪೋಷಕಾಂಶ-ಭರಿತ ಆಹಾರಗಳೊಂದಿಗೆ ಬೆಳಿಗ್ಗೆ ಚೆನ್ನಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ನಿಮ್ಮ ಹೊಟ್ಟೆಯನ್ನು ತುಂಬಿಸುವುದಲ್ಲದೆ ಶಕ್ತಿಯ ಮಟ್ಟವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಕಾಟೇಜ್ ಚೀಸ್, ಟ್ಯೂನ, ಮಸೂರ ಧಾನ್ಯಗಳು ಮತ್ತು ಬಾದಾಮಿಗಳಂತಹ ಆಹಾರದ ಆಯ್ಕೆಗಳು ಪರಿಗಣಿಸಬಹುದಾದ ಇತರ ಉತ್ತಮ ಪರ್ಯಾಯಗಳಾಗಿವೆ.

ಇದನ್ನೂ ಓದಿ: Health Care: ಕಾಫಿ ಪ್ರಿಯರೇ ಎಚ್ಚರ! ಅತಿಯಾಗಿ ಸೇವಿಸದ್ರೆ ಬುದ್ಧಿಮಾಂದ್ಯತೆ, ಪಾರ್ಶ್ವವಾಯು

ದೈಹಿಕ ಚಟುವಟಿಕೆಗಾಗಿ ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಸಮಯವನ್ನು ಮೀಸಲಿಡಿ : ನಿಯಮಿತ ದೈಹಿಕ ಚಟುವಟಿಕೆಯು ಸ್ನಾಯುಗಳನ್ನು ಬಲಪಡಿಸುವಲ್ಲಿ ಬಹಳ ಯಶಸ್ವಿಯಾಗಬಹುದು. ನಿಮ್ಮ ದೈನಂದಿನ ದಿನಚರಿಯಲ್ಲಿ ವಾಕಿಂಗ್, ಈಜು, ಸೈಕ್ಲಿಂಗ್, ಜಾಗಿಂಗ್, ವೇಟ್‍ಲಿಫ್ಟಿಂಗ್, ಮನರಂಜನಾ ಕ್ರೀಡೆಗಳು ಅಥವಾ ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಸರಳ ಚಟುವಟಿಕೆಗಳನ್ನು ಸೇರಿಸಿಕೊಳ್ಳುವ ಮೂಲಕ ನೀವು ದಿನವನ್ನು ಪ್ರಾರಂಭಿಸಬಹುದು. ಪ್ರತಿದಿನ ಕೇವಲ ಒಂದು ಗಂಟೆಯ ದೈಹಿಕ ಚಟುವಟಿಕೆಯು ಸ್ನಾಯುವಿನ ಶಕ್ತಿ ಮತ್ತು ಆರೋಗ್ಯಕ್ಕೆ ಮಹತ್ತರವಾದ ಕೊಡುಗೆ ನೀಡುತ್ತದೆ.

ನಿಮ್ಮ ದೈನಂದಿನ ಪ್ರೋಟೀನ್ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ : ಪ್ರತಿ ಊಟದಲ್ಲಿ 25 ರಿಂದ 30 ಗ್ರಾಂ ಪ್ರೋಟೀನ್ ಅನ್ನು ಸೇವಿಸುವುದರಿಂದ (ದೈಹಿಕ ಚಟುವಟಿಕೆಯೊಂದಿಗೆ) ನಿಮ್ಮ ದೇಹವು ದಿನವಿಡೀ ಸ್ನಾಯುಗಳ ನಿರ್ಮಾಣ ಮತ್ತು ದುರಸ್ತಿಗಾಗಿ ಪ್ರೋಟೀನಿನ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಶಿಫಾರಸು ಮಾಡಲಾದ ಪ್ರಮಾಣದ ದೈನಂದಿನ ಪ್ರೋಟೀನ್ ಸೇವನೆಯನ್ನು ಮಾಂಸ, ಕೋಳಿ, ಮೀನು, ಮೊಟ್ಟೆ, ಡೈರಿ ಪದಾರ್ಥಗಳು, ತೋಫು ಮತ್ತು ಬೀನ್ಸ್ ಸೇರಿದಂತೆ ವಿವಿಧ ಆಹಾರಗಳನ್ನು ತಿನ್ನುವ ಮೂಲಕ ಪಡೆಯಬಹುದು.

ಕಡಿಮೆ-ಗೊತ್ತಿರುವ ಘಟಕಾಂಶ - HMB  ಯ ಬಗ್ಗೆ ಹೆಚ್ಚೆಚ್ಚು ತಿಳಿಯಿರಿ : ಹಲವಾರು ಅಧ್ಯಯನಗಳು ವಯಸ್ಕರಲ್ಲಿ ತೆಳ್ಳಗಿನ ದೇಹದ ದ್ರವ್ಯರಾಶಿ, ಸ್ನಾಯುವಿನ ಶಕ್ತಿ ಮತ್ತು ಕಾರ್ಯವನ್ನು ನಿರ್ವಹಿಸಲು ಮತ್ತು ಪುನಃಸ್ಥಾಪಿಸಲು ಕೇವಲ ಬೀಟಾ-ಹೈಡ್ರಾಕ್ಸಿ-ಬೀಟಾ-ಮೀಥೈಲ್ ಬ್ಯುಟೈರೇಟ್ (HMB) ಪೂರಕ ಅಥವಾ ವ್ಯಾಯಾಮದ ಸಂಯೋಜನೆಯೊಂದಿಗೆ ಅದರ  ಪ್ರಯೋಜನಗಳನ್ನು ನಿದರ್ಶಿಸಿವೆ. ಸ್ನಾಯುವಿನ ವಿಘಟನೆ ಅಥವಾ ನಷ್ಟವನ್ನು ನಿಧಾನಗೊಳಿಸುವ ಮೂಲಕ ನಿಮ್ಮ ಸ್ನಾಯುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುವ ಗೇಟ್‍ವೇ ಆಗಿ HMB  ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ದೇಹವು ಪ್ರೋಟೀನ್ ಆಹಾರವನ್ನು ಸೇವಿಸುವ ಮೂಲಕ ನೀವು ನೈಸರ್ಗಿಕವಾಗಿ ಪಡೆಯಬಹುದಾದ ಅತ್ಯಗತ್ಯವಾದ ಅಮೈನೋ ಆಮ್ಲವಾದ ಲ್ಯೂಸಿನ್ ಅನ್ನು ವಿಘಟಿಸಿದಾಗ ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಆವಕಾಡೊ, ಚಕ್ಕೋತ ಮತ್ತು ಹೂಕೋಸುಗಳಂತಹ ಆಹಾರಗಳಲ್ಲಿ ನಿಮಗೆ ತಿಳಿಯದೆಯೇ HMB ದೀರ್ಘಕಾಲದವರೆಗೆ ನಿಮ್ಮ ಆಹಾರದ ಭಾಗವಾಗಿದೆ ಎಂದು ವೈಜ್ಞಾನಿಕವಾಗಿ ಧ್ವನಿಸುತ್ತದೆ.  ಸ್ನಾಯುಗಳ ಆರೋಗ್ಯವನ್ನು ಪಡೆಯಲು ನೀವು ಸಾಕಷ್ಟು ಪ್ರಮಾಣದ HMB  ಅನ್ನು ಪಡೆಯುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು HMB  ಹೊಂದಿರುವ ವಿಶೇಷ ಪೌಷ್ಟಿಕಾಂಶದ ಪೂರಕಗಳು ಪೋಷಣೆಯ  ಉತ್ತಮ ಆಡ್-ಆನ್‍ಗಳಾಗಿವೆ.

ವಯಸ್ಕರಿಗೆ ವಯಸ್ಸು ಹೆಚ್ಚಿದಂತೆ, ಸ್ನಾಯುಗಳ ನಷ್ಟ ಮತ್ತು ಮಂದಗತಿಯ ಚೇತರಿಕೆಯ ಸಮಯಗಳು ಬೆದರಿಕೆಗಳಂತೆ ಕಂಡುಬರುತ್ತವೆ. ಅವರ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶದ ಪೂರಕಗಳನ್ನು ಸೇರಿಸುವುದರಿಂದ ವಯಸ್ಸಾಗುವುದರ ವೈಫಲ್ಯಗಳು ಎನ್ನಬಹುದಾದ ತೊಂದರೆಗಳನ್ನು ತಪ್ಪಿಸಲು ಮತ್ತು ನಾವು ವಯಸ್ಸಾದಂತೆ ಚಲನಶೀಲತೆ, ಶಕ್ತಿ ಮತ್ತು ಚೈತನ್ಯದ ಮಟ್ಟವನ್ನು ಉಳಿಸಿಕೊಳ್ಳಲು ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News