PM Kisan 12th Installment Alert : ದೇಶದ ಕೋಟಿಗಟ್ಟಲೆ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿಗಾಗಿ ಕಾಯುತ್ತಿದ್ದಾರೆ.. ನೀವು ಕೂಡ 2000 ರೂ. ಕಾಯುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಿದೆ. ಇತ್ತೀಚಿನ ಅಪ್ಡೇಟ್ ಪ್ರಕಾರ, ಮುಂದಿನ 2 ವಾರಗಳಲ್ಲಿ ರೈತರ ಖಾತೆಗೆ 2000 ರೂ. ಸರ್ಕಾರ ಜಮಾ ಮಾಡಲಿದೆ.
ಇದುವರೆಗೆ 11 ಕಂತಿನ ಹಣ ಜಮಾ ಮಾಡಲಾಗಿದೆ
ಕೇಂದ್ರ ಸರ್ಕಾರದ ಪರವಾಗಿ ರೈತರ ಖಾತೆಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಇದುವರೆಗೆ 10 ಕೋಟಿ ರೈತರ ಖಾತೆಗಳಿಗೆ 11 ಕಂತಿನ ಹಣ ರವಾನೆಯಾಗಿದೆ.
ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಅಥವಾ PPF ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ..!
ನಿಮ್ಮ ಕಂತು ಸ್ಟೇಟಸ್ ಹೀಗೆ ಪರಿಶೀಲಿಸಿ-
- ನೀವು ಮೊದಲು ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಹೋಗಬೇಕು.
- ಇದರ ನಂತರ ನೀವು ಬಲಭಾಗದಲ್ಲಿ 'Farmers Corner' ಆಯ್ಕೆಯನ್ನು ನೋಡುತ್ತೀರಿ.
- ನೀವು 'Beneficiary Status' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ.
- ಈಗ ನೀವು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯಿಂದ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಬೇಕಾಗುತ್ತದೆ.
- ನಿಮ್ಮ ಖಾತೆಗೆ ಹಣ ಬರುತ್ತದೋ ಇಲ್ಲವೋ ಎಂಬುದನ್ನು ಈ 2 ಸಂಖ್ಯೆಗಳ ಮೂಲಕ ಪರಿಶೀಲಿಸಬಹುದು.
- ಈ ಎರಡರ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು 'Get Data' ಅನ್ನು ಕ್ಲಿಕ್ ಮಾಡಬೇಕು.
- ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಎಲ್ಲಾ ವ್ಯವಹಾರಗಳ ವಿವರಗಳನ್ನು ಪಡೆಯುತ್ತೀರಿ.
ನೀವು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು
ಇದಲ್ಲದೇ ಟೋಲ್ ಫ್ರೀ ಸಂಖ್ಯೆ 155261ಗೆ ಕರೆ ಮಾಡಿ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇಲ್ಲಿ ನೀವು ನಿಮ್ಮ ಕಂತುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ.
ಇದನ್ನೂ ಓದಿ : LPG Gas Cylinder : ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿದ್ರೆ, ಹೊಸ ಸಿಲಿಂಡರ್ ಸಂಪರ್ಕ ಮತ್ತೆ ಬುಕಿಂಗ್ ಆಗುತ್ತೆ!
ಇವರಿಗೆ 12ನೇ ಕಂತಿನ ಹಣವೂ ಸಿಗುವುದಿಲ್ಲ
ಇದಲ್ಲದೇ ಬೇಸಾಯ ಮಾಡುವ ಯಾವುದೇ ರೈತ, ಆದರೆ ಆ ಹೊಲ ತನ್ನ ಹೆಸರಲ್ಲದೇ ಬೇರೆಯವರ ಹೆಸರಿನಲ್ಲಿದ್ದರೆ ಆತನಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಒಬ್ಬ ರೈತ ಬೇರೊಬ್ಬ ರೈತನಿಂದ ಜಮೀನು ಪಡೆದು ಬಾಡಿಗೆಗೆ ಕೃಷಿ ಮಾಡಿದರೆ ಅವನಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.