ಸುದೀರ್ಘ ನಿರೀಕ್ಷೆಯ ಬಳಿಕ Realme GT Neo 3T ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಅನ್ನು ಕಂಪನಿಯು ಎರಡು ತಿಂಗಳ ಹಿಂದೆ ಜಾಗತಿಕವಾಗಿ ಪರಿಚಯಿಸಿತ್ತು, ಆದರೆ Realme ಈ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಾಕಷ್ಟು ವಿಳಂಬ ಮಾಡಿದೆ. ಕಳೆದ ಹಲವು ದಿನಗಳಿಂದ ಈ ಫೋನ್ ಬಿಡುಗಡೆಯ ಸುದ್ದಿ ಹೊರಬೀಳುತ್ತಿತ್ತು. ರಿಯಲ್ ಮೀ ಕಂಪನಿಯ ಈ ಫೋನ್ GT ನಿಯೋ 3 ನ ಪ್ರಮಾಣಿತ ಆವೃತ್ತಿಯಂತೆಯೇ 80W ವೇಗದ ಚಾರ್ಜಿಂಗ್ ವೈಶಿಷ್ಟ್ಯ ಹೊಂದಿದೆ. ಇದರಲ್ಲಿ ನಿಮಗೆ 150W ಚಾರ್ಜಿಂಗ್ ವೈಶಿಷ್ಟ್ಯ ಸಿಗುವುದಿಲ್ಲ. ಅಲ್ಲದೆ, ಫೋನ್‌ನ ಕೆಲವು ವೈಶಿಷ್ಟ್ಯಗಳು ಸಹ ಭಿನ್ನವಾಗಿವೆ. ಬನ್ನಿ, ರಿಯಲ್ ಮೀ ಕಂಪನಿಯ ಈ ಮಧ್ಯಮ-ಬಜೆಟ್ 5G ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ.
>> Realme GT Neo 3T 5G ವೈಶಿಷ್ಟ್ಯಗಳೇನು?
>> 6.62 ಇಂಚಿನ FHD+ AMOLED ಡಿಸ್ಪ್ಲೇ
>> Qualcomm Snapdragon 870 SoC
>> 64MP ಟ್ರಿಪಲ್ ಕ್ಯಾಮೆರಾ
>> 5000mAh ಬ್ಯಾಟರಿ
>> 80W ವೇಗದ ಚಾರ್ಜಿಂಗ್ ವೈಶಿಷ್ಟ್ಯ #realmeGTNeo3T ಹೊಂದಿದೆ:
>> 80W ಸೂಪರ್‌ಡಾರ್ಟ್ ಚಾರ್ಜ್
>> ಸ್ನಾಪ್‌ಡ್ರಾಗನ್ 870 5G
>> 120Hz E4 AMOLED ಡಿಸ್ಪ್ಲೇ
ಇದನ್ನೂ ಓದಿ-ಚಳಿಗಾಲದಲ್ಲಿ ಹೀಟರ್, ಬೇಸಿಗೆಯಲ್ಲಿ ಎಸಿ ಆಗಿ ಕಾರ್ಯನಿರ್ವಹಿಸುತ್ತೆ ಈ ಸಾಧನ, ಬೆಲೆಯೂ ಕಡಿಮೆ
ಯಾವ ಆವೃತ್ತಿಯ ಬೆಲೆ ಎಷ್ಟು?
>> 6GB+128GB, ₹29,999
>> 8GB+128GB, ₹31,999
>> 8GB+256GB, ₹33,999
ಇದನ್ನೂ ಓದಿ-ಚಿಟಿಕೆಯಲ್ಲಿ ಖಾತೆಯನ್ನು ಖಾಲಿ ಮಾಡುವ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಪತ್ತೆ! ಈ ಬಗ್ಗೆ ಇರಲಿ ಎಚ್ಚರ
ರಿಯಲ್ ಮೀ ಕಂಪನಿಯ ಈ ಮಿಡ್-ಬಜೆಟ್ 5G ಸ್ಮಾರ್ಟ್‌ಫೋನ್ 6.62-ಇಂಚಿನ FHD + E4 AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದರ ಡಿಸ್ಪ್ಲೇ 1300 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ ಮತ್ತು ಇದು HDR10+ ಹೈ ಡೈನಾಮಿಕ್ ರೇಂಜ್ ಅನ್ನು ಬೆಂಬಲಿಸುತ್ತದೆ. Realme GT Neo 3T ಡಿಸ್ಪ್ಲೇ ಶೇ. 92.6 ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಬೆಂಬಲಿಸುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.