ಬಿಕ್ಕಳಿಗೆ ಬರುವುದಕ್ಕೆ ಅನೇಕ ಕಾರಣಗಳಿರುತ್ತವೆ. ಬಿಕ್ಕಳಿಕೆ ದೊಡ್ಡ ಸಮಸ್ಯೆ ಅಲ್ಲದಿದ್ದರೂ ಕೆಲವರಿಗೆ ಬಿಕ್ಕಳಿಕೆ ಜಾಸ್ತಿ ಇರುತ್ತದೆ. ಸಾಮಾನ್ಯವಾಗಿ ಈ ಜನರು ನೀರು ಕುಡಿಯುವ ಮೂಲಕ, ಪರಿಹಾರ ಕಂಡುಕೊಳ್ಳುತ್ತಾರೆ.
ಬೆಂಗಳೂರು : ಯಾರಾದರೂ ನಮ್ಮನ್ನು ನೆನಪಿಸಿಕೊಂಡರೆ ಬಿಕ್ಕಳಿಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬಿಕ್ಕಳಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಬಿಕ್ಕಳಿಗೆ ಬರುವುದಕ್ಕೆ ಅನೇಕ ಕಾರಣಗಳಿರುತ್ತವೆ. ಬಿಕ್ಕಳಿಕೆ ದೊಡ್ಡ ಸಮಸ್ಯೆ ಅಲ್ಲದಿದ್ದರೂ ಕೆಲವರಿಗೆ ಬಿಕ್ಕಳಿಕೆ ಜಾಸ್ತಿ ಇರುತ್ತದೆ. ಸಾಮಾನ್ಯವಾಗಿ ಈ ಜನರು ನೀರು ಕುಡಿಯುವ ಮೂಲಕ, ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನೀರು ಕುಡಿಯುವುದರಿಂದ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ವೈದ್ಯಕೀಯ ವಿಜ್ಞಾನದ ಪ್ರಕಾರ, ಡಯಾಫ್ರಾಮ್ ಮತ್ತು ಪಕ್ಕೆಲುಬುಗಳ ನಡುವೆ ಇರುವ ಇಂಟರ್ಕೊಸ್ಟಲ್ ಸ್ನಾಯುಗಳು ಹಠಾತ್ ಸಂಕುಚಿತಗೊಳ್ಳುವುದರಿಂದ ಬಿಕ್ಕಳಿಕೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಯುರ್ವೇದ ವೈದ್ಯರ ಪ್ರಕಾರ, ಬೆಚ್ಚಗಿನ ನೀರಿನಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ, ಬಿಕ್ಕಳಿಕೆಯನ್ನು ನಿವಾರಿಸಬಹುದು. ಇದಕ್ಕಾಗಿ ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. 15 ನಿಮಿಷಗಳ ನಂತರ ಸೋಸಿಕೊಂಡು ಕುಡಿಯಬೇಕು.
ಬಿಕ್ಕಳಿಕೆಯನ್ನು ನಿಲ್ಲಿಸುವಲ್ಲಿ ಸಕ್ಕರೆ ಸಹ ಪರಿಣಾಮಕಾರಿಯಾಗಿದೆ. ಬಿಕ್ಕಳಿಕೆ ನಿಲ್ಲದಿದ್ದರೆ, ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ನಿಧಾನವಾಗಿ ಅಗಿಯಿರಿ. ಸಕ್ಕರೆಯ ಮಾಧುರ್ಯದಿಂದ ಸ್ವಲ್ಪ ಸಮಯದಲ್ಲಿ ಬಿಕ್ಕಳಿಕೆಯಿಂದ ಪರಿಹಾರ ಸಿಗುತ್ತದೆ.
ಏನನ್ನೂ ತಿನ್ನದೆ ಅಥವಾ ಕುಡಿಯದೆ ಬಿಕ್ಕಳಿಕೆಯನ್ನು ನಿಲ್ಲಿಸಬೇಕಾದರೆ, ಒಂದು ಚಮಚ ಕರಿಮೆಣಸಿನ ಪುಡಿಯನ್ನು ತೆಗೆದುಕೊಳ್ಳಿ. ನಿಧಾನವಾಗಿ ಈ ಕರಿಮೆಣಸಿನ ವಾಸನೆ ತೆಗೆದುಕೊಳ್ಳಿ. ಸೀನುವವರೆಗೂ ಹೀಗೆ ಮಾಡುತ್ತಿರಿ. ಸೀನುವಿಕೆಯ ನಂತರ ಬಿಕ್ಕಳಿಕೆ ನಿಂತು ಬಿಡುತ್ತದೆ.
ಮೊಸರು ಬಿಕ್ಕಳಿಕೆ ನಿಲ್ಲಿಸಲು ಮತ್ತೊಂದು ಉತ್ತಮ ಪರಿಹಾರವಾಗಿದೆ. ಬಿಕ್ಕಳಿಕೆ ಬಂದಾಗ ಒಂದು ಚಮಚ ಮೊಸರನ್ನು ಸೇವಿಸಿ. ಮೊಸರು ಆರೋಗ್ಯಕ್ಕೂ ಒಳ್ಳೆಯದು.
ಆಯುರ್ವೇದದ ಪ್ರಕಾರ, ಬಿಕ್ಕಳಿಕೆಯಿಂದ ತ್ವರಿತ ಪರಿಹಾರವನ್ನು ಪಡೆಯಲು ಶುಂಠಿಯ ಸಹಾಯವನ್ನು ತೆಗೆದುಕೊಳ್ಳಬಹುದು. ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ನಿಧಾನವಾಗಿ ಜಗಿದು ತಿನ್ನಿರಿ. ಇದರಿಂದ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ. ಬಿಕ್ಕಳಿಕೆಯನ್ನು ಹೊರತುಪಡಿಸಿ, ಶುಂಠಿಯು ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಬಿಕ್ಕಳಿಕೆಯನ್ನು ನಿಲ್ಲಿಸಲು ಸುಲಭವಾದ ಮಾರ್ಗವೆಂದರೆ ನೀರು ಕುಡಿಯುವುದು. ಬಿಕ್ಕಳಿಕೆ ಬಂದಾಗಲೆಲ್ಲಾ ಒಂದು ಲೋಟ ನೀರು ಕುಡಿಯಿರಿ. ಇದರಿಂದ ಬಿಕ್ಕಳಿಕೆ ಶಮನವಾಗುತ್ತದೆ. ನೀರು ಕುಡಿದ ನಂತರವೂ ಬಿಕ್ಕಳಿಕೆ ಬರುತ್ತಿದ್ದರೆ, ಗಾರ್ಗಲ್ ಮಾಡಿ ನೋಡಿ.