Canada Travel Advisory: ಕೆನಡಾಕ್ಕೆ ಹೋಗುವ ಪ್ರಯಾಣಿಕರು ಮತ್ತು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಎಚ್ಚರಿಕೆ ನೀಡಿದೆ. ಈ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಮುಂಜಾಗ್ರತೆಯನ್ನು ವಹಿಸಬೇಕು ಎಂದು ಸೂಚಿಸಲಾಗಿದೆ. ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ "ತೀಕ್ಷ್ಣ ಹೆಚ್ಚಳ" ಕಂಡುಬಂದಿದೆ ಎಂದು ಭಾರತ ಟ್ರಾವಲ್ ಅಡ್ವೈಸರಿ ನೀಡಿದೆ.
ಕೆನಡಾದಲ್ಲಿ ದ್ವೇಷದ ಅಪರಾಧ ಪ್ರಕರಣಗಳು ಮತ್ತು ಭಾರತ ವಿರೋಧಿ ಚಟುವಟಿಕೆಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ಅಧಿಕಾರಿಗಳೊಂದಿಗೆ ಮಾತನಾಡಿದೆ ಎಂದು ಸರ್ಕಾರ ಹೇಳಿದೆ. ಕೆನಡಾದ ಅಧಿಕಾರಿಗಳು ಈ ಅಪರಾಧಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. "ಈ ಅಪರಾಧಗಳಿಗೆ ಕಾರಣರಾದವರಿಗೆ ಕೆನಡಾದಲ್ಲಿ ಇದುವರೆಗೆ ಯಾವುದೇ ಶಿಕ್ಷೆಯನ್ನು ನೀಡಲಾಗಿಲ್ಲ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತ ಹೊರಡಿಸಿದ ಪ್ರಕಟಣೆಯಲ್ಲಿ, ಮೇಲಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಕೆನಡಾದಲ್ಲಿ ಪ್ರಯಾಣಿಸುವಾಗ ಮತ್ತು ಅಧ್ಯಯನ ನಡೆಸುವಾಗ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವಂತೆ ಮನವಿ ಮಾಡಲಾಗಿದೆ.
There has been a sharp increase in incidents of hate crimes, sectarian violence & anti-India activities in Canada. MEA & our High Commission/Consulates General in Canada have taken up these incidents with Canadian authorities & requested probe & appropriate action: MEA pic.twitter.com/UatussXqH3
— ANI (@ANI) September 23, 2022
ಇದನ್ನೂ ಓದಿ-NRI News: ಜರ್ಮನಿಗೆ ವ್ಯಾಸಂಗಕ್ಕಾಗಿ ತೆರಳಲು ಬಯಸುವ ವಿದ್ಯಾರ್ಥಿಗಳಿಗೆ ಇನ್ಮುಂದೆ APS ಸರ್ಟಿಫಿಕೇಟ್ ಅನಿವಾರ್ಯ
ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತವಾಗಿದೆ
ಕೆನಡಾದಲ್ಲಿ "ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹಣೆ" ಎಂದು ಕರೆಯಲ್ಪಡುವ ಬಗ್ಗೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ, ಸ್ನೇಹಪರ ರಾಷ್ಟ್ರದಲ್ಲಿ ಮೂಲಭೂತ ಮತ್ತು ಉಗ್ರಗಾಮಿ ಅಂಶಗಳಿಗೆ ಇಂತಹ ರಾಜಕೀಯ ಪ್ರೇರಿತ ಚಟುವಟಿಕೆಗಳಿಗೆ ಅವಕಾಶ ನೀಡಿರುವುದು "ಅತ್ಯಂತ ಆಕ್ಷೇಪಾರ್ಹ" ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಕೆನಡಾದ ಆಡಳಿತದೊಂದಿಗೆ ಈ ವಿಷಯವನ್ನು ಚರ್ಚಿಸಿದೆ ಮತ್ತು ಕೆನಡಾದೊಂದಿಗೆ ಸಮಸ್ಯೆ ಪರಿಹಾರಕ್ಕೆ ಚರ್ಚೆಯನ್ನು ಕೂಡ ಮುಂದುವರೆಸಲಿದೆ.
ಇದನ್ನೂ ಓದಿ-NRI News: ಆಸ್ತಿ ಖರೀದಿಸಲು ಬಯಸುವ NRI ಗಳ ಚಿಂತೆಗೆ ಕಾರಣವಾದ ಬೆಂಗಳೂರು ಡೆಮಾಲಿಶನ್ ಡ್ರೈವ್
ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ
ಕೆಲವು ದಿನಗಳ ಹಿಂದೆ, ಕೆನಡಾದ ಒಂಟಾರಿಯೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ ಶನಿವಾರ ಮೃತಪಟ್ಟಿದ್ದಾನೆ. ಇದಲ್ಲದೇ ಈ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಸೋಮವಾರ ಮಿಲ್ಟನ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ ಎಂದು ಹಿಲ್ಟನ್ ಟೆರಿಟೋರಿಯಲ್ ಪೊಲೀಸ್ ಸೇವೆ (ಎಚ್‌ಆರ್‌ಪಿಎಸ್) ಹೊರಡಿಸಿದ ಹೇಳಿಕೆ ಮಾಹಿತಿ ನೀಡಲಾಗಿದೆ. ಅವರನ್ನು ಸತ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಹ್ಯಾಮಿಲ್ಟನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.