NRI News: ಆಸ್ತಿ ಖರೀದಿಸಲು ಬಯಸುವ NRI ಗಳ ಚಿಂತೆಗೆ ಕಾರಣವಾದ ಬೆಂಗಳೂರು ಡೆಮಾಲಿಶನ್ ಡ್ರೈವ್

Bengaluru Demolition Drive: ಹಲವು ಅನಿವಾಸಿ ಭಾರತೀಯರು ಬೆಂಗಳೂರು ನಗರದಲ್ಲಿ ಆಸ್ತಿ ಖರೀದಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  

Written by - Nitin Tabib | Last Updated : Sep 20, 2022, 03:23 PM IST
  • ಬೆಂಗಳೂರಿನಲ್ಲಿ ಇತ್ತೀಚಿಗೆ ಕುಸಿದ ಭಾರಿ ಮಳೆಗೆ ನಗರದ ಹಲವು ಭಾಗಗಳು ಜಲಾವೃತ್ತಗೊಂಡಿದ್ದವು.
  • ಬಳಿಕ ಇದಕ್ಕೆ ಕಾರಣವಾದ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣಗಳ ಕುರಿತು ಅಧಿಕಾರಿಗಳು ಡೆಮಾಲಿಶನ್ ಡ್ರೈವ್ ನಡೆಸಿದ್ದರು.
  • ಈ ಕಾರ್ಯಾಚರಣೆ ಇದೀಗ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಲು ಬಯಸುವ ಅನಿವಾಸಿ ಭಾರತೀಯರನ್ನು ಚಿಂತೆಗೀಡು ಮಾಡಿದೆ.
NRI News: ಆಸ್ತಿ ಖರೀದಿಸಲು ಬಯಸುವ NRI ಗಳ ಚಿಂತೆಗೆ ಕಾರಣವಾದ ಬೆಂಗಳೂರು ಡೆಮಾಲಿಶನ್ ಡ್ರೈವ್ title=
NRI News

NRI Update: ಬೆಂಗಳೂರಿನಲ್ಲಿ ಇತ್ತೀಚಿಗೆ ಕುಸಿದ ಭಾರಿ ಮಳೆಗೆ ನಗರದ ಹಲವು ಭಾಗಗಳು ಜಲಾವೃತ್ತಗೊಂಡಿದ್ದವು. ಬಳಿಕ ಇದಕ್ಕೆ ಕಾರಣವಾದ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣಗಳ ಕುರಿತು ಅಧಿಕಾರಿಗಳು ಡೆಮಾಲಿಶನ್ ಡ್ರೈವ್ ನಡೆಸಿದ್ದರು. ಈ ಕಾರ್ಯಾಚರಣೆ ಇದೀಗ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಲು ಬಯಸುವ ಅನಿವಾಸಿ ಭಾರತೀಯರನ್ನು ಚಿಂತೆಗೀಡು ಮಾಡಿದೆ.

ಹೌದು, ಹಲವರು ಅನಿವಾಸಿ ಭಾರತೀಯರು ನಗರದಲ್ಲಿ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅನಿವಾಸಿ ಭಾರತೀಯರೋಬ್ಬರು, 'ನಗರದಲ್ಲಿ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಅನುಗುಣವಾಗಿ ನಡೆಸಲಾಗಿರುವ ಆಸ್ತಿಗಳ ಡೆಮಾಲಿಶನ್ ಕಾರ್ಯಾಚರಣೆ ಇದೀಗ ನಮ್ಮ ದೊಡ್ಡ ಚಿಂತೆಗೆ ಕಾರಣವಾಗಿದೆ. ನೆಲದ ಖಚಿತ ಮತ್ತು ನಿರ್ಧಿಷ್ಟ ಮಾಹಿತಿ ನಮಗೆ ನೇರವಾಗಿ ಸಿಗದಿರುವುದೇ ಇದಕ್ಕೆ ಕಾರಣ' ಎಂದು ಹೇಳಿದ್ದಾರೆ.

ಯಾವುದೇ ಓರ್ವ ವ್ಯಕ್ತಿ ಬೇರೆ ದೇಶಗಳಲ್ಲಿ ಆಸ್ತಿ ಖರೀದಿಸಲು ಬಯಸುತ್ತಿರುವಾಗ, ಆಸ್ತಿ ಆ ದೇಶದ ನಿಯಮಗಳಿಗೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದರ ಮಾಹಿತಿ ನೀಡುವ ನೇರ ಸಂಪರ್ಕದ ಕೊರತೆಯ ಕಾರಣ ವ್ಯಕ್ತಿ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿರುವ ಮತ್ತೋರ್ವ ಅನಿವಾಸಿ ಭಾರತೀಯ, ಅಕ್ರಮ ಆಸ್ತಿಗಳ ಧ್ವಂಸ ಪ್ರಕ್ರಿಯೆ ಕಳವಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ನಂತರ ಇಂತಹ ತೊಂದರೆಗಳನ್ನು ತಪ್ಪಿಸಲು ಯಾವುದೇ ಆಸ್ತಿಯ ಅನುಸರಣೆಯನ್ನು ಪರಿಶೀಲಿಸುವ ಬಗ್ಗೆ ತಾವು ಜಾಗರೂಕರಾಗಿರುವುದಾಗಿ ಹೇಳಿದ್ದಾರೆ. 

ಇದಕ್ಕಾಗಿ ತಾವು ಹೂಡಿಕೆ ಮಾಡಿರುವ ಎಲ್ಲಾ ಯೋಜನೆಗಳಲ್ಲಿ ರೆರಾ ಅನುಮೋದನೆಗಳನ್ನು ಪಡೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸುತ್ತಮುತ್ತಲಿನ ಜನರನ್ನು ಅವರು ಸಂಪರ್ಕಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-NRI News: ಬ್ರಿಟನ್ ನಲ್ಲಿ ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರ, ಹೈಕಮಿಷನ್ ಕಠಿಣ ಕ್ರಮಕ್ಕೆ ಆಗ್ರಹ

ಈ ಕುರಿತು ಮಾತನಾಡಿರುವ ಹೊಮ್ಲಿ ಯುವರ್ಸ್ ಸಂಸ್ಥಾಪಕ ಅಲೋಕ್ ಪ್ರಿಯದರ್ಶಿ, ಕೊವಿಡ್-19 ಮಹಾಮಾರಿಗೂ ಮುನ್ನ ಭಾರತದಲ್ಲಿ ಎನ್.ಆರ್.ಐಗಳು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಅಷ್ಟೊಂದು ಉತ್ಸುಕರಾಗಿರಲಿಲ್ಲ. ಆದರೆ, ಇದೀಗ ಸನ್ನಿವೇಶವು ಬದಲಾಗಿದೆ. ಭಾರತದ ಪ್ರಮುಖ ರಿಯಾಲಿಟಿ ಕೇಂದ್ರವಾಗಿ ಮಾರ್ಪಟ್ಟು ಇದೀಗ ಆಗ್ರಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಆಸ್ತಿಗಳನ್ನು ಖರೀದಿಸಲು ಎನ್ಆರ್ಐಗಳು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಹೀಗಾಗಿ ಎನ್‌ಆರ್‌ಐ ಹೂಡಿಕೆಯಲ್ಲಿ ಶೇ.150 ರಷ್ಟು ಏರಿಕೆ ಕಂಡುಬಂದಿದೆ. ಈ ಮೊದಲು 500 ಆಸ್ತಿಗಳನ್ನು ಖರೀದಿಸುತ್ತಿದ್ದ ಎನ್‌ಆರ್‌ಐಗಳು ಇಂದು  ಸುಮಾರು 1,500 ಆಸ್ತಿಗಳನ್ನು ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-NRI News: ಅಧ್ಯಯನದ ದೃಷ್ಟಿಯಿಂದ ಆಸ್ಟ್ರೇಲಿಯಾ ವಿದ್ಯಾರ್ಥಿಗಳ ಜನಪ್ರೀಯ ತಾಣವಾಗುತ್ತಿರುವುದೇಕೆ?

ಒಟ್ಟಾರೆಯಾಗಿ ಬೆಂಗಳೂರಿನ ಡೆಮಾಲಿಷನ್ ಡ್ರೈವ್ ರಿಯಾಲಿಟಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಸಾಮಾನ್ಯ ಖರೀದಿದಾರರು ಭಯಪದುತ್ತಿದ್ದು, ಆಸ್ತಿಯ ತುಣುಕು ಖರೀದಿಸಿದ ನಂತರ ಯಾವುದೇ ತೊಡಕುಗಳನ್ನು ತಪ್ಪಿಸಲು NRI ಗಳು ಎಲ್ಲಾ ಅಂಶಗಳ ಬಗ್ಗೆ ಹೆಚ್ಚು ಜಾಗರೂಕತೆಯನ್ನು ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News