ನವದೆಹಲಿ: ಇತ್ತೀಚಿಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ಘಟಕ 'ಶಿವಭಕ್ತ' ಎಂದು ಕರೆದು ಭಾರಿ ಸುದ್ದಿ ಮಾಡಿತ್ತು. ಈಗ ವಿಶೇಷವೆಂದರೆ ಸೋಮವಾರದಂದು ತಮ್ಮ ಕ್ಷೇತ್ರ ಅಮೇಥಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕನ್ವಾರಿಯಾ ಸಂಘವು ರಾಹುಲ್ ಗೆ ಬಂ ಬಂ ಭೋಲೆ ಎನ್ನುವ ಘೋಷಣೆಗಳ ಮಧ್ಯ ಸ್ವಾಗತಕೋರಿತು.
#WATCH Rahul Gandhi offers prayers to Lord Shiva in Amethi. He was also felicitated by 'Kawariyas' pic.twitter.com/XTpP9YEfqq
— ANI UP (@ANINewsUP) September 24, 2018
ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವ ರಾಹುಲ್ ಗಾಂಧಿಗೆ ಈ ಚುನಾವಣೆ ನಿಜಕ್ಕೂ ನಿರ್ಣಾಯಕವಾಗಿದೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಸ್ಮೃತಿ ಇರಾನಿ ತೀವ್ರ ಸ್ಪರ್ಧೆಯನ್ನು ಒಡ್ಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಅವರು ಇತ್ತೀಚಿಗೆ ಪದೆಪದೆ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದೆ ಸಾಕ್ಷಿ. ಈ ಹಿನ್ನಲೆಯಲ್ಲಿ ಈಗ ರಾಹುಲ್ ಕೂಡ ಪ್ರತಿ ತಂತ್ರ ರೂಪಿಸುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಸ್ವಕ್ಷೇತ್ರದ ಜೊತೆಗೆ ದೇಶದೆಲ್ಲೆಡೆ ಕಾಂಗ್ರೆಸ್ ಗೆ ಪುನರುಜ್ಜೀವನ ನಿಡುವ ಅವಶ್ಯಕತೆ ಇದೆ.
ಮಾನಸ ಸರೋವರದ ಯಾತ್ರೆಯಿಂದ ಹಿಂದುರಿಗಿದ ನಂತರ ಇದೆ ಮೊದಲ ಬಾರಿಗೆ ರಾಹುಲ್ ಸ್ವಕ್ಷೇತ್ರಕ್ಕೆ ಹಿಂದುರಿಗಿದ ಹಿನ್ನಲೆಯಲ್ಲಿ ಎಲ್ಲರು ಅವರಿಗೆ ಭವ್ಯ ಸ್ವಾಗತ ಕೋರುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಯೋಗೇಂದ್ರ ಮಿಶ್ರಾ ತಿಳಿಸಿದರು.