ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್

ಟೆಲಿಕಾಂ ಕಂಪನಿಯು ಸುಮಾರು 7000 ಕೋಟಿ ರೂ. ಸಾಲವನ್ನು ಇಂಡಸ್ ಟವರ್ಸ್  ಗೆ ಮರು ಪಾವತಿ ಮಾಡಬೇಕಿದೆ. ಕಂಪನಿಯು    ಸಾಲವನ್ನು ಶೀಘ್ರವಾಗಿ ಮರುಪಾವತಿಸದಿದ್ದರೆ ನವೆಂಬರ್‌ನೊಳಗೆ ಟವರ್‌ಗಳನ್ನು ಬಳಸಲು ಅನುಮತಿ ನಿರಾಕರಿಸುವುದಾಗಿ, ಇಂಡಸ್ ಟವರ್ಸ್ ಬೆದರಿಕೆ ಹಾಕಿದೆ.

Written by - Ranjitha R K | Last Updated : Sep 30, 2022, 12:42 PM IST
  • ವೊಡಾಫೋನ್-ಐಡಿಯಾ ಗ್ರಾಹಕರಿಗೆ ಆಘಾತ
  • 7000 ಕೋಟಿ ರೂ. ಸಾಲದ ಸುಳಿಯಲ್ಲಿ ವೊಡಾಫೋನ್-ಐಡಿಯಾ
  • ಟವರ್‌ಗಳನ್ನು ಬಳಸಲು ಅನುಮತಿ ನಿರಾಕರಿಸುವ ಬೆದರಿಕೆ
ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್ title=
Vi crisis (file photo)

ಬೆಂಗಳೂರು : ವೊಡಾಫೋನ್-ಐಡಿಯಾ ಗ್ರಾಹಕರಿಗೆ  ಆಘಾತಕಾರಿ ಸುದ್ದಿಯಿದು.  ಟೆಲಿಕಾಂ ಕಂಪನಿಯ ಮೇಲಿರುವ ಭಾರೀ ಸಾಲದ ಪರಿಣಾಮ, 255 ಕೋಟಿ ಗ್ರಾಹಕರು ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಂಪನಿಯು ತನ್ನ ಸಾಲವನ್ನು ಪಾವತಿಸದ ಕಾರಣ ಇದೀಗ ಸಮಸ್ಯೆ ಎದುರಾಗಿದೆ. ಟೆಲಿಕಾಂ ಕಂಪನಿಯು ಸುಮಾರು 7000 ಕೋಟಿ ರೂ. ಸಾಲವನ್ನು ಇಂಡಸ್ ಟವರ್ಸ್  ಗೆ ಮರು ಪಾವತಿ ಮಾಡಬೇಕಿದೆ. ಕಂಪನಿಯು    ಸಾಲವನ್ನು ಶೀಘ್ರವಾಗಿ ಮರುಪಾವತಿಸದಿದ್ದರೆ ನವೆಂಬರ್‌ನೊಳಗೆ ಟವರ್‌ಗಳನ್ನು ಬಳಸಲು ಅನುಮತಿ ನಿರಾಕರಿಸುವುದಾಗಿ, ಇಂಡಸ್ ಟವರ್ಸ್ ಬೆದರಿಕೆ ಹಾಕಿದೆ. ಒಂದು ವೇಳೆ ಹೀಗಾದರೆ, ವೊಡಾಫೋನ್-ಐಡಿಯಾ ಗ್ರಾಹಕರ ಮೊಬೈಲ್ ನೆಟ್‌ವರ್ಕ್ ತಕ್ಷಣವೇ ಸಂಪರ್ಕ  ಕಳೆದುಕೊಳ್ಳುತ್ತದೆ. 
 
ಎಚ್ಚರಿಕೆ ನೀಡಿದ ಇಂಡಸ್ ಟವರ್ಸ್ :
ಮೂಲಗಳ ಪ್ರಕಾರ, ಇಂಡಸ್ ಟವರ್ಸ್‌ ಈಗಾಗಲೇ ವೊಡಾಫೋನ್-ಐಡಿಯಾಗೆ ಈ ಬಗ್ಗೆ ಎಚ್ಚರಿಕೆ ಪತ್ರವನ್ನು ಕಳುಹಿಸಿದೆ.  ಈ ಬಗ್ಗೆ ಸೋಮವಾರ ಇಂಡಸ್ ಟವರ್ಸ್ ನ ಆಡಳಿತ ಮಂಡಳಿ ಸಭೆ  ನಡೆಸಿದೆ. ಈ ಸಭೆಯಲ್ಲಿ ಕಂಪನಿಯ ಆರ್ಥಿಕ ಸ್ಥಿತಿಯ ಕುರಿತು ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ವೊಡಾಫೋನ್ ಐಡಿಯಾ ಇಂಡಸ್ ಟವರ್ಸ್‌ಗೆ ಸುಮಾರು 7,000 ಕೋಟಿ ರಸಾಲ ಮರುಪಾವತಿ ಮಾಡಬೇಕಾಗಿದೆ ಎನ್ನುವ ಅಂಶದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. 

ಇದನ್ನೂ ಓದಿ : ಸ್ಟ್ರಾಂಗ್ ಬ್ಯಾಟರಿ, ಉತ್ತಮ ಕ್ಯಾಮರಾದೊಂದಿಗೆ ಬಿಡುಗಡೆ ಆಗಲಿದೆ ಜಿಯೋದ ಅಗ್ಗದ 5G ಸ್ಮಾರ್ಟ್‌ಫೋನ್

ಇನ್ನೂ ಆಗಿಲ್ಲ Vi 5G ಘೋಷಣೆ :
ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ನಂತರ ವೊಡಾಫೋನ್ ಐಡಿಯಾ ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ.  ಆದರೆ ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಕಂಪನಿಯು ಸಾಲದ ಹೊರೆಯಲ್ಲಿ ಮುಳುಗಿದೆ. ಮೂಲಗಳ ಪ್ರಕಾರ, ಜಿಯೋ ಮತ್ತು ಏರ್‌ಟೆಲ್ ದೀಪಾವಳಿಯ ಆಸುಪಾಸಿನಲ್ಲಿ ತಮ್ಮ 5G ಸೇವೆಯನ್ನು ಪ್ರಾರಂಭಿಸಲಿವೆ.  ಆದರೆ ವಿಐ ಈ ಬಗ್ಗೆ ಯಾವುದೇ ಪ್ರಕಟಣೆಯನ್ನು  ಹೊರಡಿಸಿಲ್ಲ. 

ಈ ದಿನದಂದು ಆರಂಭವಾಗಲಿದೆ 5G ಸೇವೆ : 
 ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ 5G ನೆಟ್‌ವರ್ಕ್ ಮೊದಲು ಆರಂಭವಾಗಲಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಪ್ರಗತಿ ಮೈದಾನದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ಘಾಟಿಸಲಿದ್ದಾರೆ.  ಅದೇ ದಿನ ಭಾರತದಲ್ಲಿ 5G ಸೇವೆ ಆರಮ್ಭಾವಾಗುವ ನಿರೀಕ್ಷೆ ಇದೆ. 

ಇದನ್ನೂ ಓದಿ : 32 ಇಂಚಿನ ಟಿವಿ ದರದಲ್ಲಿ 50 ಇಂಚಿನ ಸ್ಮಾರ್ಟ್ LED ಟಿವಿ ಲಭ್ಯ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News