Gowli Lyrical Song : 'ಮಗಳೇ ಹೆಗಲೆ ವಿಮಾನ ನಿನಗೆ'.. 'ಗೌಳಿ' ಸಿನಿಮಾದ ಮತ್ತೊಂದು ಸಾಂಗ್‌ ರಿಲೀಸ್‌

Gowli Lyrical Song : ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿರುವ ಶ್ರೀನಗರ ಕಿಟ್ಟಿಗೆ ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಪಾವನಗೌಡ ಕಾಣಿಸಿಕೊಳ್ಳಲಿದ್ದಾರೆ.  

Written by - K Karthik Rao | Edited by - Chetana Devarmani | Last Updated : Oct 2, 2022, 12:02 PM IST
  • ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿರುವ 'ಗೌಳಿ'
  • ಹಲವು ದಿನಗಳ ನಂತರ ಶ್ರೀನಗರ ಕಿಟ್ಟಿ ಕಂಬ್ಯಾಕ್
  • 'ಗೌಳಿ' ಸಿನಿಮಾದ ಮತ್ತೊಂದು ಸಾಂಗ್‌ ರಿಲೀಸ್‌
Gowli Lyrical Song : 'ಮಗಳೇ ಹೆಗಲೆ ವಿಮಾನ ನಿನಗೆ'.. 'ಗೌಳಿ' ಸಿನಿಮಾದ ಮತ್ತೊಂದು ಸಾಂಗ್‌ ರಿಲೀಸ್‌  title=
ಗೌಳಿ

Gowli Lyrical Song : 'ಗೌಳಿ' ಇದೀಗ ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿರುವ ಸಿನಿಮಾ. ಶ್ರೀನಗರ ಕಿಟ್ಟಿ ರವರು ಹಲವು ದಿನಗಳ ನಂತರ ಈ ಸಿನಿಮಾದ ಮೂಲಕ ಕಂಬ್ಯಾಕ್ ಆಗ್ತಾಯಿದ್ದಾರೆ. ಹೌದು ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿರುವ ಶ್ರೀನಗರ ಕಿಟ್ಟಿಗೆ ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಪಾವನಗೌಡ ಕಾಣಿಸಿಕೊಳ್ಳಲಿದ್ದಾರೆ.  ದೊಡ್ಡ ತಾರ ಗಣವೇ ಈ ಸಿನಿಮಾದಲ್ಲಿರೋದು ಮತ್ತೊಂದು ವಿಶೇಷ.

ಇದನ್ನೂ ಓದಿ : Paaru : ನಿಮ್ಮ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ

ಈ ಚಿತ್ರಕ್ಕೆ ರಘು ಸಿಂಗಂ ನಿರ್ಮಾಣ ಹಾಗೂ ಸೂರ ರವರ ನಿರ್ದೇಶನವಿದೆ. ಉದ್ದನೆ ಗಡ್ಡ, ರಗಡ್ ಲುಕ್ ಪೋಸ್ಟರ್ ಹಾಗೂ ಟೀಸರ್ ನಿಂದ ಸದ್ದು ಮಾಡಿದ್ದ ಚಿತ್ರ "ಗೌಳಿ". ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. 'ಮಗಳೇ ಹೆಗಲೆ ವಿಮಾನ ನಿನಗೆ'  ಎಂಬ ಹಾಡನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಮಹಾರಕ್ಕಸ ಎಂಬ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಮತ್ತೊಂದು ಲಿರಿಕಲ್ ಹಾಡಿನೊಂದಿಗೆ ಎಲ್ಲರ ಮನ ಕದ್ದಿದೆ. ಹೌದು ತಂದೆ-ಮಗಳ ಪ್ರೀತಿಯನ್ನ ಹೊತ್ತು ತಂದಿದೆ ಈ 'ಮಗಳೇ ಹೆಗಲೆ ವಿಮಾನ ನಿನಗೆ' ಎಂಬ ಹೊಸ ಹಾಡು. ಶಂಶಾಕ್ ಸಂಗೀತ ನಿರ್ದೇಶನದ ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ವಿಜಯ್ ಪ್ರಕಾಶ್ ಮದುರ ಧ್ವನಿ ಮೂಡಿದೆ.

ಇದನ್ನೂ ಓದಿ : BBK 9 : ಸೇಫ್‌ ಆದ ಮೂವರು.. 9 ಜನರ ತಲೆಮೇಲೆ ಎಲಿಮಿನೇಷನ್‌ ತೂಗುಗತ್ತಿ.! ಯಾರಾಗ್ತಾರೆ ಔಟ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News