ನವದೆಹಲಿ: ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಈಗ ಟಿ 20 ಕ್ರಿಕೆಟ್ ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದೆ.ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಈ ಜೋಡಿ ಈ ಸಾಧನೆಯನ್ನು ಮಾಡಿದೆ.
That's a fine 50-run partnership between @ImRo45 & @klrahul 👏👏
Live - https://t.co/R73i6RryDA #INDvSA @mastercardindia pic.twitter.com/7hLMbl1zwx
— BCCI (@BCCI) October 2, 2022
ಹೌದು, ಈಗ ಅವರು ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಐವತ್ತಕ್ಕೂ ಅಧಿಕ ಜೊತೆಯಾಟವಾಡಿದ ದಾಖಲೆಯನ್ನು ನಿರ್ಮಿಸಿದ್ದಾರೆ.ಆ ಮೂಲಕ ಈ ಪಾಕಿಸ್ತಾನದ ಆರಂಭಿಕ ಜೋಡಿಯಾದ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರ 14 ಬಾರಿ ಅರ್ಧಶತಕದ ಜೊತೆಯಾಟವನ್ನು ಹಿಂದಿಕ್ಕಿ ಈಗ 15ನೇ ಅರ್ಧಶತಕದ ಜೊತೆಯಾಟವನ್ನು ಆಡಿದ್ದಾರೆ.ಇನ್ನೊಂದೆಡೆಗೆ ಐರಿಶ್ ಜೋಡಿ ಪಾಲ್ ಸ್ಟಿರ್ಲಿಂಗ್-ಕೆವಿನ್ ಒ'ಬ್ರೇನ್ 13 ಅರ್ಧಶತಕಗಳ ಜೊತೆಯಾಟವನ್ನು ಹೊಂದಿದ್ದಾರೆ.
A quick-fire FIFTY for @klrahul 👌👌
This is his 20th in T20Is. Second of the series so far.
Live - https://t.co/R73i6RryDA #INDvSA @mastercardindia pic.twitter.com/Pka5F1icT3
— BCCI (@BCCI) October 2, 2022
ಈ ಬ್ಯಾಟಿಂಗ್ ಜೋಡಿಯು ಸಾಧಿಸಿದ ಮತ್ತೊಂದು ದಾಖಲೆಯೆಂದರೆ ಟಿ20 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಜೊತೆಯಾಟದ ರನ್ ಗಳಿಸಿದ್ದು, ರೋಹಿತ್ ಮತ್ತು ರಾಹುಲ್ ಜೋಡಿಯು ಈಗ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯನ್ನು ಉತ್ತಮಗೊಳಿಸಿತು. ರೋಹಿತ್ ಮತ್ತು ರಾಹುಲ್ ಜೋಡಿಯು 1,744 ರನ್ ಗಳಿಸುವ ಮೂಲಕ ಶಿಖರ್ ಧವನ್-ರೋಹಿತ್ ಶರ್ಮಾ ಸೇರಿ ಗಳಿಸಿದ್ದ 1743 ರನ್ ಗಳ ದಾಖಲೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.