Snake & Mongoose Fight: ರಸ್ತೆ ಮಧ್ಯೆ ಹಾವು - ಮುಂಗುಸಿ ಕಾದಾಟ, 5 ನಿಮಿಷಗಳ ಹೋರಾಟದಲ್ಲಿ ಗೆದ್ದವರು ಯಾರು?

Snake & Mongoose Fight: ಕೆಲವು ದಾರಿಹೋಕರು ರಸ್ತೆಯಲ್ಲಿ ಹಾದು ಹೋಗುತ್ತಿದ್ದಾಗ ಹಾವು ಮತ್ತು ಮುಂಗುಸಿಯ ಕಾದಾಟ ಕಂಡರು. ಇವರಿಬ್ಬರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Chetana Devarmani | Last Updated : Oct 8, 2022, 04:49 PM IST
  • ಹಾವು ಮತ್ತು ಮುಂಗುಸಿಯ ಮಧ್ಯೆ ನಡೆಯಿತು ಕಾದಾಟ
  • 5 ನಿಮಿಷಗಳ ಹೋರಾಟದಲ್ಲಿ ಗೆದ್ದವರು ಯಾರು?
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Snake & Mongoose Fight: ರಸ್ತೆ ಮಧ್ಯೆ ಹಾವು - ಮುಂಗುಸಿ ಕಾದಾಟ, 5 ನಿಮಿಷಗಳ ಹೋರಾಟದಲ್ಲಿ ಗೆದ್ದವರು ಯಾರು? title=
ಹಾವು ಮತ್ತು ಮುಂಗುಸಿ

Snake & Mongoose Fight: ಹಾವು ಮತ್ತು ಮುಂಗುಸಿಯ ಕಾದಾಟದ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇಂತಹದೊಂದು ಹೋರಾಟ ಕಂಡು ಬಂದಿದೆ. ನಡುರಸ್ತೆಯಲ್ಲಿ ಹಾವು, ಮುಂಗುಸಿ ಹೊಡೆದಾಡಿಕೊಂಡಿವೆ. ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾವು ಮುಂಗುಸಿ ಕಾದಾಡುತ್ತಿರುವುದನ್ನು ಕಂಡು ರಸ್ತೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಇದನ್ನೂ ಓದಿ : Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್‌

ಪಾಲಿಯಾ ಪಟ್ಟಣದಿಂದ ಪತಿಹಾನ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಹಾವು ಮತ್ತು ಮುಂಗುಸಿಗಳ ಕಾದಾಟ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವು ದಾರಿಹೋಕರು ರಸ್ತೆಯಲ್ಲಿ ಹಾವು ಮತ್ತು ಮುಂಗುಸಿಗಳು ಕಾದಾಡುತ್ತಿರುವುದನ್ನು ಕಂಡರು. ಸುಮಾರು 5 ನಿಮಿಷಗಳ ಕಾಲ ಹಾವು ಮತ್ತು ಮುಂಗುಸಿಯ ನಡುವೆ ಜಗಳವಾಯಿತು. ಸುಮಾರು 6 ಅಡಿ ಉದ್ದದ ನಾಗರಹಾವು ಮುಂಗುಸಿಯ ಮೇಲೆ ಹಲವು ಬಾರಿ ದಾಳಿ ಮಾಡಿತು. ಮುಂಗುಸಿಯ ಬಾಯಿಂದ ರಕ್ತವೂ ಬರಲಾರಂಭಿಸಿತು ಮತ್ತು ಈ ಯುದ್ಧದಲ್ಲಿ ಹಾವು ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದರು.

ಹಾವಿನ ದಾಳಿಯಿಂದ ಬೇಸತ್ತ ಮುಂಗುಸಿಯು ಒಮ್ಮೆ ಹಿಂದೆ ಸರಿಯುತ್ತದೆ, ಹಾವು ತಿರುಗುವುದನ್ನು ನೋಡಿ, ಮುಂಗುಸಿ ಅದರ ಹಿಂದಿನಿಂದ ದಾಳಿ ಮಾಡುತ್ತದೆ. ಈ ಬಾರಿ ಮುಂಗುಸಿಯು ಪಣವನ್ನು ಆಡುತ್ತದೆ ಮತ್ತು ತನ್ನ ಬಾಯಲ್ಲಿ ನಾಗರಹಾವಿನ ಹೆಡೆ ಅನ್ನು ಹಿಡಿದು ಹೊಲದ ಕಡೆಗೆ ಹೋಗುತ್ತದೆ.

ಇದನ್ನೂ ಓದಿ : 5 & 8 ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ.! ಸರ್ಕಾರದ ಮಹತ್ವ ನಿರ್ಧಾರ ಏನು?

ಇತ್ತೀಚೆಗೆ ಹಾವು ಮುಂಗುಸಿಗಳ ಕಾದಾಟದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಾವು ಮತ್ತು ಮುಂಗುಸಿಗಳು ನೀರಿನ ಹೊಂಡದಲ್ಲಿ ಕಾದಾಡುತ್ತಿದ್ದವು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News