ಮಂಗಳನ ಮಹಾ ದಾರಿದ್ರ್ಯ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಉಂಟಾಗಲಿದೆ ಅಲ್ಲೋಲ ಕಲ್ಲೋಲ.!

Mangal Gochar In October 2022:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯಲ್ಲಿ ಮಂಗಳ ಸಂಚಾರದಿಂದ ದಾರಿದ್ರ್ಯ ಯೋಗ ನಿರ್ಮಾಣವಾಗುತ್ತಿದೆ. ಈ ಯೋಗದ ಸಮಯದಲ್ಲಿ, ಕೆಲವು ರಾಶಿಯವರು ವಿಶೇಷವಾಗಿ ಹಣ ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. 

Written by - Ranjitha R K | Last Updated : Oct 11, 2022, 10:23 AM IST
  • ಅಕ್ಟೋಬರ್ 16 ರಂದು ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಲಿದೆ.
  • ಮಂಗಳ ಗ್ರಹದ ಸಂಚಾರ ಎಲ್ಲಾ ರಾಶಿಯವರ ಮೇಲೂ ಶುಭ ಅಶುಭ ಪರಿಣಾಮ ಬೀರುತ್ತದೆ
  • ಮಂಗಳ ಸಂಚಾರದಿಂದ ಮಹಾ ದಾರಿದ್ರ್ಯ ಯೋಗ ನಿರ್ಮಾಣವಾಗುತ್ತಿದೆ.
ಮಂಗಳನ ಮಹಾ ದಾರಿದ್ರ್ಯ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಉಂಟಾಗಲಿದೆ ಅಲ್ಲೋಲ ಕಲ್ಲೋಲ.!  title=
Mars Transit effect (file photo)

Mangal Gochar In October 2022 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಅದರ ನಿಗದಿತ ಸಮಯದಲ್ಲಿ ಸಾಗುತ್ತದೆ. ಎಲ್ಲಾ 12 ರಾಶಿಯವರ ಜೀವನದ ಮೇಲೆ ಗ್ರಹಗಳ ಸಂಕ್ರಮಣದ ಶುಭ ಮತ್ತು ಅಶುಭ ಪರಿಣಾಮಗಳು ಗೋಚರಿಸುತ್ತದೆ. ಅಕ್ಟೋಬರ್ 16 ರಂದು ಮಂಗಳ ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಗ್ರಹದ ಸಂಚಾರದಿಂದಾಗಿ, ಎಲ್ಲಾ ರಾಶಿಯವರ ಮೇಲೂ  ಶುಭ ಮತ್ತು ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕೆಲವು ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯಲ್ಲಿ ಮಂಗಳ ಸಂಚಾರದಿಂದ ದಾರಿದ್ರ್ಯ ಯೋಗ ನಿರ್ಮಾಣವಾಗುತ್ತಿದೆ. ಈ ಯೋಗದ ಸಮಯದಲ್ಲಿ, ಕೆಲವು ರಾಶಿಯವರು ವಿಶೇಷವಾಗಿ ಹಣ ಮತ್ತು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. 

ಇದನ್ನೂ ಓದಿ : ದೀಪಾವಳಿಯವರೆಗೂ ಮೌನವಾಗಿ ಪ್ರತಿದಿನ ತುಳಸಿಯ ಈ ವಿಶೇಷ ಪೂಜೆ ಮಾಡಿ: ಸಂಪತ್ತು ಓಡೋಡಿ ಬರುತ್ತೆ

ವೃಷಭ ರಾಶಿ : ಮಿಥುನ ರಾಶಿಯಲ್ಲಿ ಮಂಗಳ ಸಂಕ್ರಮಿಸಿದ ಕಾರಣ ಮಹಾ ದಾರಿದ್ರ್ಯ ಯೋಗ  ರೂಪುಗೊಳ್ಳುತ್ತದೆ. ಮಹಾ ದಾರಿದ್ರ್ಯ ಯೋಗದ ಪರಿಣಾಮ, ಈ ಸಮಯ ವೃಷಭ ರಾಶಿಯವರಿಗೆ ನೋವಿನಿಂದ ಕೂಡಿರಲಿದೆ. ಈ ರಾಶಿಚಕ್ರದ ಜನರ ಸಂಕ್ರಮಣದ ಜಾತಕದ ಮಧ್ಯದಲ್ಲಿ ಯಾವುದೇ ಶುಭ ಗ್ರಹ ಇಲ್ಲದಿರುವುದರಿಂದ ಹೀಗಾಗುತ್ತದೆ. ವೃಷಭ ರಾಶಿಯ ಅಧಿಪತಿಯಾದ ಶುಕ್ರನು ದುರ್ಬಲಗೊಳ್ಳುತ್ತಾನೆ. ಈ ಕಾರಣದಿಂದಾಗಿ ಈ ಜನರು ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಪ್ರಗತಿ ನಿಧಾನವಾಗಲಿದೆ. ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬೇಡಿ. ಅಲ್ಲದೆ, ಈ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಸಾಲ ನೀಡುವುದಕ್ಕೆ ಹೋಗಬೇಡಿ.  

ಸಿಂಹ  ರಾಶಿ : ಮಹಾ ದಾರಿದ್ರ್ಯ  ಯೋಗವೂ ಈ ರಾಶಿಯವರ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ರಾಶಿಚಕ್ರದ ಅಧಿಪತಿ ಸೂರ್ಯ ದೇವರು. ಸೂರ್ಯ ಅಕ್ಟೋಬರ್ 17 ರಂದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರಾಶಿಚಕ್ರದ ಸಂಕ್ರಮಣ ಜಾತಕದ ಕೇಂದ್ರ ಮನೆಯಲ್ಲಿ ಯಾವುದೇ ಶುಭ ಗ್ರಹವಿರುವುದಿಲ್ಲ.  ಇಂತಹ ಪರಿಸ್ಥಿತಿಯಲ್ಲಿ, ಸಿಂಹ ರಾಶಿಯ ಜನರು ವಿಶೇಷ ಎಚ್ಚರಿಕೆಯಿಂದ ಇರಬೇಕಾಗುತ್ತದೆ.  ಈ ಅವಧಿಯಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. 

ಇದನ್ನೂ ಓದಿ : Pushya Yoga 2022: ದೀಪಾವಳಿ, ಧನತ್ರಯೋದಶಿಗೂ ಮುನ್ನವೇ ಈ ದಿನ ನಿರ್ಮಾಣಗೊಳ್ಳುತ್ತಿದೆ ಅತ್ಯಂತ ಶುಭಯೋಗ, ಇಲ್ಲಿದೆ ಅದರ ಮಹತ್ವ

ವೃಶ್ಚಿಕ ರಾಶಿ : ಮಹಾ ದಾರಿದ್ರ್ಯ  ಯೋಗವು  ವೃಶ್ಚಿಕ ರಾಶಿಯವರಿಗೂ  ಅಶುಭವಾಗಿರಲಿದೆ. ಈ ರಾಶಿಯ ಅಧಿಪತಿ ಮಂಗಳನು ​​ಶತ್ರು ರಾಶಿಯ ಸಾವಿನ ಮನೆಯಲ್ಲಿ ಕುಳಿತಿದ್ದಾನೆ. ಇದರಿಂದ ಪಾಪಕರ್ತರಿ ಯೋಗವು ರೂಪುಗೊಳ್ಳುತ್ತಿದೆ.  ಕೇತುವಿನ ನವಮಿ ದೃಷ್ಟಿಯೂ ಈ ರಾಶಿಗಳ ಜನರ ಮೇಲೆ ಬೀಳುತ್ತಿದೆ. ಮಾತ್ರವಲ್ಲ ತು ಕೇಂದ್ರ ಮನೆಯಲ್ಲಿ ಯಾವುದೇ ಶುಭ ಗ್ರಹವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು. ಯಾವುದೇ ಹೊಸ ಕೆಲಸವನ್ನು ಆರಂಭಿಸಬೇಡಿ. ವ್ಯವಹಾರಗಳಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ವ್ಯಾಪಾರದಲ್ಲಿ ಕಡಿಮೆ ಲಾಭ ಇರುತ್ತದೆ. 

 

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News