Shukra Tula Gochar 2022: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ಗ್ರಹದ ರಾಶಿ ಬದಲಾವಣೆಯ ಸಮಯವನ್ನು ಹೇಳಲಾಗಿದೆ. ಗ್ರಹಗಳ ಈ ನಡೆ ಬದಲಾವಣೆ ಮತ್ತು ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜೀವನದ ಮೇಲೆ ದೊಡ್ಡ ಪ್ರಭಾವವನ್ನು ಬೀರಲಿದೆ. ಮುಂಬರುವ ಅಕ್ಟೋಬರ್ 18, 2022 ರಂದು, ಭೋಗ-ವಿಲಾಸ, ಸಂತೋಷ, ಸಂಪತ್ತು ಮತ್ತು ವೈಭವವನ್ನು ನೀಡುವ ಕಾರಕ ಗ್ರಹವಾಗಿರುವ ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಿಸಿ ತುಲಾ ರಾಶಿಯನ್ನು ಪ್ರವೇಶಿಸಲಿದೆ. 2022 ರ ದೀಪಾವಳಿಯ ಮೊದಲು ನಡೆಯುತ್ತಿರುವ ಶುಕ್ರನ ರಾಶಿ ಪರಿವರ್ತನೆ 3 ರಾಶಿಗಳ ಜಾತಕದ ಜನರಿಗೆ ಅಪಾರ ಸಂಪತ್ತು ಮತ್ತು ಸಂತೋಷವನ್ನು ನೀಡಲಿದೆ. ಯಾವ ರಾಶಿಯ ಜನರ ಮೇಲೆ ತಾಯಿ ಲಕ್ಷ್ಮಿ ತನ್ನ ಕ್ರುಪಾವೃಷ್ಟಿ ಬೀರಲಿದ್ದಾಳೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಶುಕ್ರ ಸಂಚಾರವು ಈ ರಾಶಿಗಳ ಜನರಿಗೆ ಭಾರಿ ಪ್ರಯೋಜನಗಳನ್ನು ನೀಡಲಿದೆ
ಕನ್ಯಾರಾಶಿ: ತುಲಾ ರಾಶಿಯಲ್ಲಿ ಶುಕ್ರನ ಸಂಚಾರ, ಕನ್ಯಾ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಲಾಭವನ್ನು ನೀಡಲಿದೆ. ಆದಾಯ ಹೆಚ್ಚಾಗಲಿದೆ. ಭಾರಿ ಧನಲಾಭವಾಗಲಿದೆ. ಅನಿರೀಕ್ಷಿತ ರೀತಿಯಲ್ಲಿ ಬರುವ ಹಣವು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ವಾಣಿಗೆ ಸಂಬಂಧಿಸಿದಂತೆ ನೌಕರಿ ಇರುವವರಿಗೆ ಅಂದರೆ - ಮಾರ್ಕೆಟಿಂಗ್, ಬೋಧನೆ, ಆಂಕರ್ರಿಂಗ್, ರಾಜಕೀಯ ಇತ್ಯಾದಿ ಕ್ಷ್ತ್ರಗಳ ಜನರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಈ ಸಮಯವು ಈ ಜನರಿಗೆ ವಿಶೇಷ ಪ್ರಯೋಜನಗಳನ್ನು ಹೊತ್ತು ತರಲಿದೆ.
ಧನು ರಾಶಿ: ಶುಕ್ರನ ಈ ರಾಶಿ ಬದಲಾವಣೆಯು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ವಿತ್ತೀಯ ಲಾಭದಿಂದಾಗಿ ಆರ್ಥಿಕ ಸ್ಥಿತಿಯು ಬಲಗೊಳ್ಳುಲಿದೆ. ಮಾಧ್ಯಮ, ಗ್ಲಾಮರ್, ಫ್ಯಾಷನ್ ಡಿಸೈನಿಂಗ್‌ಗೆ ಸಂಬಂಧಿಸಿದ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರಿಗೆ ದೊಡ್ಡ ಯಶಸ್ಸು ಸಿಗುವ ಸಾಧ್ಯತೆ ಇದೆ. ಹೂಡಿಕೆ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಇದನ್ನೂ ಓದಿ-Astrology tips : ಈ ಜನರು ನಾಯಿ ಸಾಕುವುದು ಶುಭವಲ್ಲ, ಜೀವನದಲ್ಲಿ ತುಂಬಾ ತೊಂದರೆ ಎದುರಿಸಬೇಕಾಗುತ್ತೆ!
ಮಕರ ರಾಶಿ: ತುಲಾ ರಾಶಿಗೆ ಶುಕ್ರ ಪ್ರವೇಶದಿಂದ ಮಕರ ರಾಶಿಯವರಿಗೆ ಭಾರಿ ಲಾಭವಾಗಲಿದೆ. ಈ ಜನರು ಎಲ್ಲದರಲ್ಲೂ ಯಶಸ್ಸನ್ನು ಪಡೆಯಲಿದ್ದಾರೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಹೊಸ ಉದ್ಯೋಗ ಸಿಗಬಹುದು. ಬಡ್ತಿ-ಸಂಬಳವೃದ್ಧಿ ಸಿಗುವ ಬಲವಾದ ಅವಕಾಶಗಳಿವೆ. ನೀವು ಮನೆ ಕಾರು ಖರೀದಿಸಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದೆ. ಆಸ್ತಿಗೆ ಸಂಬಂಧಿಸಿದ ಕೆಲಸ ಮಾಡುವ ಜನರು ದೊಡ್ಡ ಲಾಭವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ-Sharad Purnima 2022: ನಿರ್ಮಾಣಗೊಂಡಿದೆ ಗಜಕೇಸರಿ ಯೋಗ, 4 ರಾಶಿಗಳ ಜನರ ಭಾಗ್ಯದಲ್ಲಿ ಬಂಬಾಟ್ ಬದಲಾವಣೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ