ಮಡದಿಗೆ ಈ ಗಿಫ್ಟ್ ಕೊಟ್ಟು ನೋಡಿ…ನಿಮ್ಮ ಪ್ರತೀ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಖಂಡಿತ

ಗಂಡಂದಿರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ಮತ್ತು ಪ್ರೀತಿಯನ್ನು ಹೆಚ್ಚಿಸಲು ಈ ದಿನದಂದು ಉಡುಗೊರೆಗಳನ್ನು ನೀಡುತ್ತಾರೆ. ಇನ್ನು ನಿಮ್ಮ ಸಂಗಾತಿಗೆ ಉತ್ತಮ ಉಡುಗೊರೆಗಳನ್ನು ಕೊಡಲು ದಿನಗಳನ್ನು ನೋಡಬೇಡಿ. ಪ್ರೀತಿಯಿಂದ ಎಂದಾದರು ಉಡುಗೊರೆಗಳನ್ನು ಕೊಟ್ಟರೆ ಅವರು ಖುಷಿಯಾಗಿರುತ್ತಾರೆ.  

Written by - Bhavishya Shetty | Last Updated : Oct 11, 2022, 07:50 PM IST
    • ಗಂಡಂದಿರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ಉಡುಗೊರೆಗಳನ್ನು ನೀಡುತ್ತಾರೆ
    • ನಿಮ್ಮ ಸಂಗಾತಿಗೆ ಉತ್ತಮ ಉಡುಗೊರೆಗಳನ್ನು ಕೊಡಲು ದಿನಗಳನ್ನು ನೋಡಬೇಡಿ
    • ಪ್ರೀತಿಯಿಂದ ಎಂದಾದರು ಉಡುಗೊರೆಗಳನ್ನು ಕೊಟ್ಟರೆ ಅವರು ಖುಷಿಯಾಗಿರುತ್ತಾರೆ
ಮಡದಿಗೆ ಈ ಗಿಫ್ಟ್ ಕೊಟ್ಟು ನೋಡಿ…ನಿಮ್ಮ ಪ್ರತೀ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಖಂಡಿತ title=
gift for wife

ಇಂದಿನ ದಿನಗಳಲ್ಲಿ ಹಬ್ಬ ಹರಿದಿನಗಳು ನಡೆಯುತ್ತಿವೆ. ಅಕ್ಟೋಬರ್ 13 ರಂದು, ವಿವಾಹಿತ ಮಹಿಳೆಯರ ಅತಿದೊಡ್ಡ ಹಬ್ಬವಾದ ಕರ್ವಾ ಚೌತ್ ಅನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಈ ಹಬ್ಬವನ್ನು ಬಹಳ ಅದ್ಧೂರಿಯಾಗಿ ನಡೆಸಲಾಗುತ್ತದೆ. ಮತ್ತೊಂದೆಡೆ, ವಿವಾಹಿತ ಮಹಿಳೆಯರು ವರ್ಷವಿಡೀ ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಾರೆ. ಈ ದಿನದಂದು, ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿ, ಪೂಜೆಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ, ಗಂಡಂದಿರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ಮತ್ತು ಪ್ರೀತಿಯನ್ನು ಹೆಚ್ಚಿಸಲು ಈ ದಿನದಂದು ಉಡುಗೊರೆಗಳನ್ನು ನೀಡುತ್ತಾರೆ. ಇನ್ನು ನಿಮ್ಮ ಸಂಗಾತಿಗೆ ಉತ್ತಮ ಉಡುಗೊರೆಗಳನ್ನು ಕೊಡಲು ದಿನಗಳನ್ನು ನೋಡಬೇಡಿ. ಪ್ರೀತಿಯಿಂದ ಎಂದಾದರು ಉಡುಗೊರೆಗಳನ್ನು ಕೊಟ್ಟರೆ ಅವರು ಖುಷಿಯಾಗಿರುತ್ತಾರೆ.  

ಇದನ್ನೂ ಓದಿ: ಬಿಳಿ ಕೂದಲಿಗೆ ಡೈ ಮಾಡುವ ಅಗತ್ಯವಿಲ್ಲ, ಈ ಒಂದು ಎಲೆಯನ್ನು ಬಳಸಿದರೆ ಸಾಕು .!

ನಿಮ್ಮ ಹೆಂಡತಿಗೆ ಈ ಉಡುಗೊರೆಯನ್ನು ನೀಡಿ:

ಫೋಟೋಶೂಟ್: ಬದುಕಿನ ಜಂಜಾಟದಲ್ಲಿ ಒಟ್ಟಿಗೆ ಸಮಯ ಕಳೆಯಲು ಸಮಯ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ಸರಿಯಾದ ಅವಕಾಶ. ನೀವು ನಿಮ್ಮ ಪತ್ನಿಯೊಂದಿಗೆ ರೊಮ್ಯಾಂಟಿಕ್ ಫೋಟೋಶೂಟ್‌ಗೆ ಹೋಗಬಹುದು. ಆದರೆ ನೀವು ವೃತ್ತಿಪರ ಕ್ಯಾಮೆರಾ ಹೊಂದಿದ್ದರೆ, ನೀವು ಕುಟುಂಬದ ಸದಸ್ಯರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು.

ಆಭರಣ: ಎಲ್ಲಾ ಮಹಿಳೆಯರು ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಹೀಗಾಗಿ ನೀವು ಹೆಂಡತಿಗೆ ಚಿನ್ನ, ಬೆಳ್ಳಿ ಅಥವಾ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಬಹುದು.

ರೋಮ್ಯಾಂಟಿಕ್ ಪತ್ರ: ನಮ್ಮಲ್ಲಿ ಅನೇಕರು ನಮ್ಮ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಹೆಂಡತಿಗೆ ಪ್ರಣಯ ಪತ್ರವನ್ನು ಬರೆಯುವುದು ತುಂಬಾ ಸುಂದರವಾಗಿ ಕಾಣುತ್ತದೆ. ಇದರೊಂದಿಗೆ ನೀವು ಅವರಿಗೆ ವಿಶೇಷ ಭಾವನೆ ಮೂಡಿಸಬಹುದು.

ಕ್ಯಾಂಡಲ್ ಲೈಟ್ ಡಿನ್ನರ್: ರಾತ್ರಿ ನಿಮ್ಮ ಹೆಂಡತಿಯನ್ನು ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಅವರ ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು. ಹೀಗೆ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ.

ಇದನ್ನೂ ಓದಿ:Remedies For Beautiful Wife: ಈ ಒಂದು ಪರಿಹಾರ ಮಾಡಿ, ನಿಮ್ಮ ಕನಸಿನ ರಾಣಿ ಮಡದಿಯಾಗುತ್ತಾಳೆ.!

ಮೇಕಪ್ ಉತ್ಪನ್ನಗಳು: ನಿಮ್ಮ ಹೆಂಡತಿಯನ್ನು ಸಂತೋಷಪಡಿಸಲು ನೀವು ಮೇಕಪ್ ಉತ್ಪನ್ನಗಳನ್ನು ಸಹ ನೀಡಬಹುದು. ಮಹಿಳೆಯರು ಮೇಕಪ್ ಉತ್ಪನ್ನಗಳನ್ನು ತುಂಬಾ ಇಷ್ಟಪಡುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News