Virat Kohli: ಗ್ರೇಟ್ ಕ್ರಿಕೆಟರ್ ಆಗಿದ್ದೇ ತಪ್ಪಾಯ್ತಾ? ವಿರಾಟ್ ಕೊಹ್ಲಿ ಬಂಧನಕ್ಕೆ ಭಾರೀ ಆಗ್ರಹ! ಕಾರಣವೇನು ನೋಡಿ

ಕೊಹ್ಲಿ ಶ್ರೇಷ್ಠ ಕ್ರಿಕೆಟಿಗರಾಗಿದ್ದು ಇದಕ್ಕೆಲ್ಲ ಕಾರಣ. ಹೀಗಾಗಿ ಅವರನ್ನು ಬಂಧಿಸಬೇಕು ಎಂದು ವ್ಯಂಗ್ಯವಾಗಿ ನೆಟ್ಟಿಗರು ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಶುರುಮಾಡಿದ್ದಾರೆ.

Written by - Bhavishya Shetty | Last Updated : Oct 15, 2022, 05:17 PM IST
    • ಕೊಹ್ಲಿ ಅಭಿಮಾನಿಯೋರ್ವ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಲೆ ಮಾಡಿದ್ದಾನೆ
    • ಘಟನೆ ನಡೆದ ಬಳಿಕ ಟ್ವಿಟರ್ ನಲ್ಲಿ #ArrestKohli ಟ್ರೆಂಡಿಂಗ್ ಶುರು
    • ಅಗ್ರ ಕ್ರಮಾಂಕದ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಸಂಕಷ್ಟಕ್ಕೆ ದೂಡುವಂತಾಗಿದೆ
Virat Kohli: ಗ್ರೇಟ್ ಕ್ರಿಕೆಟರ್ ಆಗಿದ್ದೇ ತಪ್ಪಾಯ್ತಾ? ವಿರಾಟ್ ಕೊಹ್ಲಿ ಬಂಧನಕ್ಕೆ ಭಾರೀ ಆಗ್ರಹ! ಕಾರಣವೇನು ನೋಡಿ title=
Kohli

ತಮಿಳುನಾಡಿನಲ್ಲಿ ಕೊಹ್ಲಿ ಅಭಿಮಾನಿಯೋರ್ವ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಈ ಘಟನೆ ನಡೆದ ಬಳಿಕ ಟ್ವಿಟರ್ ನಲ್ಲಿ #ArrestKohli ಟ್ರೆಂಡಿಂಗ್ ಶುರುವಾಗಿದೆ.

ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಸಂಕಷ್ಟಕ್ಕೆ ದೂಡುವಂತಾಗಿದೆ. ತಮಿಳುನಾಡಿನಲ್ಲಿ ನಡೆದ ಘಟನೆಗೂ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಆದರೆ ಅವರ ಅಭಿಮಾನಿ ಮಾಡಿರುವ ಕೆಲಸ ಎಲ್ಲರನ್ನೂ ಭಯಭೀತರನ್ನಾಗಿಸಿದೆ.  

ಇದನ್ನೂ ಓದಿ: Virat-Rohit Fan: ರೋಹಿತ್ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್? ಕಾರಣ ಕೇಳಿದ್ರೆ ದಂಗಾಗ್ತೀರಿ

ಕೊಹ್ಲಿ ಶ್ರೇಷ್ಠ ಕ್ರಿಕೆಟಿಗರಾಗಿದ್ದು ಇದಕ್ಕೆಲ್ಲ ಕಾರಣ. ಹೀಗಾಗಿ ಅವರನ್ನು ಬಂಧಿಸಬೇಕು ಎಂದು ವ್ಯಂಗ್ಯವಾಗಿ ನೆಟ್ಟಿಗರು ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಶುರುಮಾಡಿದ್ದಾರೆ.

ವರದಿಗಳ ಪ್ರಕಾರ, ಕೊಹ್ಲಿ ಮತ್ತು ರೋಹಿತ್ ನಡುವೆ ಉತ್ತಮ ಕ್ರಿಕೆಟಿಗ ಯಾರು ಎಂಬ ಚರ್ಚೆಯ ವೇಳೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಇದೇ ವೇಳೆ ಕೋಪಗೊಂಡ ಕೊಹ್ಲಿ ಅಭಿಮಾನಿ 21 ವರ್ಷದ ವಿಘ್ನೇಶ್ ಎಂಬಾತನನ್ನು ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಎಸ್ ಧರ್ಮರಾಜ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ತಮಿಳುನಾಡಿದ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು.

ಈ ಕುರಿತು ಹೇಳಿಕೆ ನೀಡಿರುವ ಕೀಲಪಾಲೂರು ಪೊಲೀಸರು, ಇಬ್ಬರೂ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವಿಘ್ನೇಶ್ ಮುಂಬೈ ಇಂಡಿಯನ್ಸ್ ಗೆ ಬೆಂಬಲ ನೀಡುತ್ತಿದ್ದರೆ, ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೆಂಬಲಿಗರಾಗಿದ್ದರು. ಇವರಿಬ್ಬರು ಜೊತೆಯಾಗೊದ್ದ ಸಂದರ್ಭದಲ್ಲಿ ಚರ್ಚೆ ನಡೆದಿದ್ದು, ವಿಘ್ನೇಶ್ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದಾನೆ. ಇದರಿಂದ ಕೋಪಗೊಂಡ ಧರ್ಮರಾಜ್ ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ, ಬಳಿಕ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಕೂಡಲೇ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: Women Asia Cup 2022: 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ: ಲಂಕಾ ವಿರುದ್ಧ ಟೀಂ ಇಂಡಿಯಾದ ಅಬ್ಬರ ಹೇಗಿತ್ತು ಗೊತ್ತಾ!

ಮಲ್ಲೂರಿನ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಘಟನೆ ನಡೆದಿದೆ. ವಿಘ್ನೇಶ್ ತನ್ನ ಐಟಿಐ ಕೋರ್ಸ್ ಮುಗಿಸಿ ಸಿಂಗಾಪುರಕ್ಕೆ ಹೋಗಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ. ಆದರೆ ದುರಾದೃಷ್ಟ ಎಂಬಂತೆ ಆತನ ಪ್ರಾಣಪಕ್ಷಿ ಹಾಡಿಹೋಗಿದೆ. ಇನ್ನು ಧರ್ಮರಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News