/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Nayanthara - Vignesh : ಸ್ಟಾರ್ ಕಪಲ್ ನಯನತಾರಾ ಹಾಗೂ ವಿಗ್ನೇಶ್ ಶಿವನ್ ದಂಪತಿ ಕುರಿತು ಸನ್ಸೇಷನಲ್ ಸುದ್ದಿಯೊಂದು ಹೊರಬಿದ್ದಿದೆ. ಈಗಾಗಲೇ ನಿಮಗೆ ಗೊತ್ತಿರುವಂತೆ ಬಾಡಿಗೆ ತಾಯಿ ವಿಚಾರದಲ್ಲಿ ಈ ದಂಪತಿ ಕಾನೂನಿನ ನಿಯಮ ಮೀರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ದಂಪತಿ ಬಾಡಿಗೆ ತಾಯಿಯ ಕಾನೂನಿನ ನಿಯಮ ಮುರಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಕೂಡ ಹೇಳಿದ್ರು. ಈ ನಡುವೆ ಈ ದಂಪತಿ ಇದೀಗ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಾಗಿದ್ರೆ ಆ ಶಾಕಿಂಗ್ ನ್ಯೂಸ್ ಏನು, ಅಷ್ಟಕ್ಕೂ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವ ನಿಯಮಗಳೇನು, ನಯನತಾರಾ ಹಾಗೂ ವಿಗ್ನೇಶ್ ಶಿವನ್ ದಂಪತಿ ಈ ನಿಯಮ ಪಾಲಿಸಿದ್ರಾ, ಇಲ್ವಾ ಅನ್ನೋ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. 

ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯೋದು ಈಗಂತೂ ಕಾಮನ್ ಆಗ್ಬಿಟ್ಟಿದೆ. ಬದಲಾದ ಜೀವನ ಶೈಲಿಯೊಂದಿಗೆ ಮಹಿಳೆಯರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಕಷ್ಟು ಮಹಿಳೆಯರಿಗೆ ಮಕ್ಕಳೇ ಆಗೋದಿಲ್ಲ. ಹಾಗಾದಾಗ ಒಂದು ಕುಟುಂಬ ಸಾಕಷ್ಟು ಕುಗ್ಗಿ ಹೋಗುತ್ತೆ. ಈದರಿಂದ ಪಾರಾಗಲು ಹಾಗೂ ತಮ್ಮದೇ ವಂಶವನ್ನು ಮುಂದುವರೆಸಲು ಕೆಲವರು ಬಾಡಿಗೆ ತಾಯಿಯ ಮೊರೆ ಹೋಗುತ್ತಾರೆ. ಅದಕ್ಕೆ ಬೇಕಾದ ತಂತ್ರಜ್ಞಾನವೂ ನಮ್ಮಲ್ಲಿ ಈಗ ತುಂಬಾ ಮುಂಚೂಣಿಯಲ್ಲಿದೆ. ಯಾರಿಗೆ ಮಕ್ಕಳಾಗುವುದಿಲ್ಲವೋ ಅಂತವರು ಈ ವಿಧಾನದ ಮೊರೆ ಹೋಗ್ತಾರೆ. ಆದ್ರೆ ಬಾಡಿಗೆ ತಾಯಿ ಮೂಲಕ ಮಗು ಪಡೆಯೋದು ಕೂಡ ಅಷ್ಟು ಸುಲಭ ಅಲ್ಲ ಅನ್ನೋದನ್ನು ನಾವು ಮರಿಬಾರ್ದು. ಯಾಕಂದ್ರೆ ಅದಕ್ಕೇ ಅಂತ ನಮ್ಮಲ್ಲಿ ಒಂದು ಕಾನೂನಿದೆ. ಆ ಕಾನೂನಿನ ನಿಯಮಗಳ ಅಡಿಯಲ್ಲೇ ನಾವು ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. 

ಇದನ್ನೂ ಓದಿ : ನೋರಾ ಹಾಟ್‌ ಡಾನ್ಸ್‌ ನೋಡಿ ʼವಿ ವಾಂಟ್‌ ಮೋರ್‌ʼ ಎಂದ ಫ್ಯಾನ್ಸ್‌..!

ಬಾಡಿಗೆ ತಾಯಿ ಮೂಲಕ ಮಗು ಪಡೆಯಬೇಕು ಅಂದ್ರೆ ದಂಪತಿಗೆ ಮದುವೆಯಾಗಿ ಐದು ವರ್ಷ ಆಗಿರಬೇಕು. ಅದರ ಜೊತೆಗೆ ದಂಪತಿಗೆ ಮಕ್ಕಳಾಗುವ ಯಾವುದೇ ಸಾಧ್ಯತೆಗಳು ಇಲ್ಲ ಅಂತ ವೈದರ ಪ್ರಮಾಣಪತ್ರ ಬೇಕಾಗುತ್ತೆ. ಇದೆಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಅಂತಹ ದಂಪತಿ ಈ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಅರ್ಹರಾಗುತ್ತಾರೆ. ಆದ್ರೆ ನಯನತಾರ ಹಾಗೂ ವಿಗ್ನೇಶ್ ದಂಪತಿ ವಿಚಾರಕ್ಕೆ ಬಂದ್ರೆ ಅವರು ಮದುವೆಯಾಗಿ ನಾಲ್ಕೇ ತಿಂಗಳಿಗೆ ತಂದೆ-ತಾಯಿ ಆಗುತ್ತಾರೆ. ಅದೂ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿರೋದು ಗಮನಿಸಬೇಕಾದ ಅಂಶ. ಇಲ್ಲಿ ಕಾನೂನು ಹೇಳುತ್ತೆ, ಮದುವೆಯಾಗಿ ಐದು ವರ್ಷ ಆಗಿರಬೇಕು ಅಂತ. ಹಾಗಿದ್ದ ಮೇಲೆ ಇವರು ಹೇಗೆ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದುಕೊಂಡ್ರು ಅನ್ನೋದೇ ಎದುರಾದ ಯಕ್ಷಪ್ರಶ್ನೆ. ಇದು ಕಾನೂನು ಬಾಹಿರ ಆಗುತ್ತೆ. ಈ ದಂಪತಿ ಇನ್ನೊಂದಿಷ್ಟು ದಿನ ಕಾಯಬಹುದಿತ್ತಲ್ಲಾ ಅನ್ನೋ ಪ್ರಶ್ನೆ ಕೂಡ ಬರುತ್ತೆ. 

ಹಾಗಾಗಿಯೇ ಈ ಕುರಿತಂತೆ ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ತನಿಖೆ ನಡೆಸಿ ಸತ್ಯಾಂಶ ಏನು ಅಂತ ತಿಳಿಯಬೇಕಾಗುತ್ತೆ ಎಂದು ಹೇಳಿದ್ದಾರೆ. ಯಾವಾಗ ತನಿಖೆಯ ವಿಚಾರ ಬಂತೋ, ಇದರಿಂದ ಎಚ್ಚೆತ್ತ ಈ ಸ್ಟಾರ್ ದಂಪತಿ ಸೆನ್ಸೇಷನಲ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಹೌದು, ತಮಗೆ ಮದುವೆಯಾಗಿ ಆರು ವರ್ಷವಾಗಿದೆ ಎಂದು ಈ ದಂಪತಿ ತಮಿಳುನಾಡಿನ ಆರೋಗ್ಯ ಇಲಾಖೆಗೆ ನೀಡಿರೋ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಈ ವಿಚಾದ ಕುರಿತು ಆರೋಗ್ಯ ನಿರ್ದೇಶಕರ ನೇತೃತ್ವದ ತಂಡವೊಂದು ತನಿಖೆ ನಡೆಸುತ್ತಿದೆ. ಅಲ್ಲದೆ ನಯನತಾರ ಹಾಗೂ ವಿಗ್ನೇಶ್ ಶಿವನ್ ದಂಪತಿ ಮಗು ಪಡೆದ ಚೆನ್ನೈನ ಆಸ್ಪತ್ರೆ ಯಾವುದು ಅಂತಲೂ ಗೊತ್ತಾಗಿದೆ. ಅಷ್ಟೇ ಅಲ್ಲ, ದುಬೈನಲ್ಲಿರೋ ಮಲಯಾಳಿ ಮಹಿಳೆಯೊಬ್ಬರು ಈ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಹೆತ್ತು ಕೊಟ್ಟಿದ್ದಾರೆ ಅನ್ನೋ ವಿಚಾರ ಕೂಡ ರಿವೀಲ್ ಆಗಿದೆ. ಆದ್ರೆ ಇಲ್ಲಿ ಈ ಸ್ಟಾರ್ ದಂಪತಿ ಸಲ್ಲಿಸಿರೋ ಪ್ರಮಾಣಪತ್ರಗಳು ಸುಳ್ಳು ಎಂದು ರುಜುವಾದಲ್ಲಿ ಜೈಲುಪಾಲಾಗೋ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ : ರಾಣಾ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಪೋಸ್ಟರ್ : ಕುತೂಹಲ ಹೆಚ್ಚಿಸಿದ ವ್ಯಾಘ್ರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Surrogacy row: Marriage registered 6 years ago, surrogate a relative, says Nayanthara
News Source: 
Home Title: 

ಮತ್ತೆ ಮೆಗಾ ಟ್ವಿಸ್ಟ್ ನೀಡಿದ ನಟಿ ನಯನತಾರಾ-ವಿಗ್ನೇಶ್ ದಂಪತಿ!

Nayanthara - Vignesh : ಮತ್ತೆ ಮೆಗಾ ಟ್ವಿಸ್ಟ್ ನೀಡಿದ ನಟಿ ನಯನತಾರಾ-ವಿಗ್ನೇಶ್ ದಂಪತಿ!
Yes
Is Blog?: 
No
Tags: 
Facebook Instant Article: 
Yes
Highlights: 

ನಯನತಾರಾ ಹಾಗೂ ವಿಗ್ನೇಶ್ ಶಿವನ್ ದಂಪತಿ ಕುರಿತು ಸನ್ಸೇಷನಲ್ ಸುದ್ದಿ

ಈ ದಂಪತಿ ಬಾಡಿಗೆ ತಾಯಿಯ ಕಾನೂನಿನ ನಿಯಮ ಮುರಿದ್ದಾರೆಯೇ?

ನಯನತಾರಾ ಹಾಗೂ ವಿಗ್ನೇಶ್ ಶಿವನ್ ದಂಪತಿ ಈ ನಿಯಮ ಪಾಲಿಸಿದ್ರಾ?

Mobile Title: 
ಮತ್ತೆ ಮೆಗಾ ಟ್ವಿಸ್ಟ್ ನೀಡಿದ ನಟಿ ನಯನತಾರಾ-ವಿಗ್ನೇಶ್ ದಂಪತಿ!
Channabasava A Kashinakunti
Publish Later: 
No
Publish At: 
Sunday, October 16, 2022 - 10:03
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
2
Is Breaking News: 
No