ಅಕ್ಟೋಬರ್ 23 ರಂದು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಶ್ರೇಷ್ಠ ಪಂದ್ಯಕ್ಕೂ ಮುನ್ನ, ಕೆಲವು ಚಿತ್ರಗಳು ಭಾರತೀಯ ಅಭಿಮಾನಿಗಳನ್ನು ಭಯಭೀತಗೊಳಿಸಿವೆ. ವಾಸ್ತವವಾಗಿ, ಭಾರತೀಯ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅವರು ತಮ್ಮ ಮೊಣಕಾಲಿನ ಮೇಲೆ ಐಸ್ ಪ್ಯಾಕ್ ಅನ್ನು ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಸ್ಟೇಡಿಯಂನಿಂದ ಮೈದಾನಕ್ಕೆ ಆಯತಪ್ಪಿ ಬಿದ್ದ ಮಗು: ಭಯಾನಕ ವಿಡಿಯೋ ನೋಡಿ
ರಿಷಬ್ ಪಂತ್ ಗಾಯಾಳು?
ರಿಷಬ್ ಪಂತ್ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಎಲ್ಲರೂ ಅಚ್ಚರಿಗೊಂಡಿದ್ದರು. ವಾಸ್ತವವಾಗಿ, ಸೋಮವಾರ, ಭಾರತೀಯ ಕ್ರಿಕೆಟ್ ತಂಡವು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾಗ, ರಿಷಬ್ ಪಂತ್ ಮೊಣಕಾಲಿನ ಮೇಲೆ ಐಸ್ ಪ್ಯಾಕ್ ಕಟ್ಟಿಕೊಂಡು ಡಗೌಟ್‌ನಲ್ಲಿ ಕುಳಿತಿರುವುದು ಕಂಡುಬಂದಿದೆ.
ರಿಷಬ್ ಪಂತ್ ಅವರ ಈ ಗಾಯದ ಬಗ್ಗೆ ಬಿಸಿಸಿಐನಿಂದ ಯಾವುದೇ ಅಪ್ಡೇಟ್ ಗಳಿಲ್ಲ, ಆದರೆ ಯಾವುದೇ ಫಿಟ್ ಆಟಗಾರರು ಈ ರೀತಿ ಐಸ್ ಪ್ಯಾಕ್‌ನೊಂದಿಗೆ ಕುಳಿತುಕೊಳ್ಳುವುದಿಲ್ಲ ಎಂಬುದು ಖಚಿತ. ಒಂದು ವೇಳೆ ರಿಷಬ್ ಪಂತ್‌ಗೆ ಮೊಣಕಾಲಿನ ಗಂಭೀರ ಗಾಯವಾಗಿದ್ದರೆ, ಅದು ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿರುತ್ತದೆ.
ಇದನ್ನೂ ಓದಿ: 2,2,W,W,W,W… ಕೊನೆ ಓವರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಶಮಿ: ಅದ್ಭುತ ಆಟ ಹೇಗಿತ್ತು ಗೊತ್ತಾ?
ಗಾಯದ ಸಮಸ್ಯೆಯಿಂದ ರಿಷಬ್ ಪಂತ್ T20 ವಿಶ್ವಕಪ್‌ನಿಂದ ಹೊರಗುಳಿಯಬಹುದೇ?
ಸೋಮವಾರ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದಿಂದ ರಿಷಬ್ ಪಂತ್ ಹೊರಗುಳಿದಿದ್ದರು. ಅವರ ಗಾಯವೇ ಇದಕ್ಕೆ ಕಾರಣ ಎಂದು ನಂಬಲಾಗಿದೆ. ಒಂದು ವೇಳೆ ರಿಷಬ್ ಪಂತ್ ಗಾಯಗೊಂಡು ಟಿ20 ವಿಶ್ವಕಪ್ ನಿಂದ ಹೊರಬಿದ್ದಿದ್ದರೆ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.