ಬೆಂಗಳೂರು : ಮಕ್ಕಳ ಮನಸ್ಸು ಎಷ್ಟು ಮೃದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪೋಷಕರು ಬೈಯ್ಯುತ್ತಾರೆ ಎಂದು ಹೆದರಿ ಬಾಲಕಿಯೊಬ್ಬಳು ಮನೆ ಬಿಟ್ಟು ಹೋಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿ ಭಾರ್ಗವಿ ಮನೆ ತೊರೆದವಳು. ಮೊನ್ನೆ ಸಂಜೆ ಗೊರಗುಂಟೆಪಾಳ್ಯದ ಮನೆಯಿಂದ ಟ್ಯೂಷನ್ ಗೆ ಅಂತಾ ತೆರಳಿದ್ದಳು. ಮೊದಲೇ ಪ್ಲ್ಯಾನ್ ಮಾಡಿಕೊಂಡ ಹಾಗೇ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ.
ಮೆಜೆಸ್ಟಿಕ್ ನಿಂದ ಬಸ್ ಏರಿರುವ ಬಾಲಕಿ ಮಂಗಳೂರು ಬಸ್ ಹತ್ತಿ ಹೋಗಿರೋದು ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಬಾಲಕಿ ಪತ್ತೆಗೆ ಮಂಗಳೂರಿನಲ್ಲಿ ನಾಲ್ಕು ತಂಡ ತಲಾಶ್ ನಡೆಸಿದೆ.
ಇದನ್ನೂ ಓದಿ : KPTCL ಅಕ್ರಮ ನೇಮಕಾತಿ ಪ್ರಕರಣ: ಮತ್ತೆ ಇಬ್ಬರ ಬಂಧನ
ಇನ್ನು ಬಾಲಕಿ ಪತ್ತೆಯಾದರೆ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ. ಅದನೇ ಇರ್ಲಿ, ಪೋಷಕರು ಓದಿನ ಸಲುವಾಗಿ ಒತ್ತಡ ಹೇರಿದಾಗ ಮಕ್ಕಳ ಮನಸ್ಸಿನಲ್ಲಿ ಸಹಜವಾಗಿಯೇ ಒಂದು ರೀತಿಯ ಭಯ ಆವರಿಸಿ ಬಿಡುತ್ತದೆ. ಆ ಭಯ , ಆತಂಕದ ಜೊತೆಗೆ ಪರೀಕ್ಷೆ ಬರೆಯುತ್ತಾರೆ. ಹೀಗಾದಾಗ ನಿರೀಕ್ಷಿಸಿದ ಅಂಕ ಬರದೇ ಇರಬಹುದು.
ಕಡಿಮೆ ಅಂಕ ಬಂದಾಗ ಪೋಷಕರಿಗೆ ತಿಳಿಸಲು ಕೂಡಾ ಮಕ್ಕಳು ಭಯ ಬೀಳುತ್ತಾರೆ. ಪರಿಣಾಮ, ಬೈಗುಳದಿಂದ ಬಚಾವಾಗಲು ತಮ್ಮದೇ ಆದ ಮಾರ್ಗ ಕಂಡು ಕೊಳ್ಳುತ್ತಾರೆ. ಇದಕ್ಕೂ ಮುಂಚೆಯೂ ಇಂತಹ ಘಟನೆಗಳು ನಡೆದಿರುವ ಬಗ್ಗೆ ಅನೇಕ ಉದಾಹರಣೆಗಳಿವೆ. ಹೀಗಾಗಿ ಪೋಷಕರು ಹೆಚ್ಚು ಅಂಕ ಗಳಿಸು ಮಕ್ಕಳ ಮೇಲೆ ಒತ್ತಡ ಹೇರದಿರುವುದು ಒಳಿತು.
ಇದನ್ನೂ ಓದಿ : ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರು ಈಗ ಗುಂಡಿಗಳೂರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.