ಅಕ್ಟೋಬರ್ 26 ರಂದು ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದ ನಂತರ ತಮ್ಮ ರಾಶಿಯನ್ನು ಬದಲಾಯಿಸುತ್ತದೆ. ದೀಪಾವಳಿಯ ನಂತರ, ಸಂಭವಿಸುವ ಬುಧ ಸಂಕ್ರಮಣವು ಕೆಲವು ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಅಕ್ಟೋಬರ್ 26 ರಂದು ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಕರ ರಾಶಿ : ಬುಧ ಸಂಕ್ರಮಣವು ಅನೇಕ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿದೆ. ಅವರಲ್ಲಿ ಮಕರ ರಾಶಿಯವರೂ ಸೇರಿದ್ದಾರೆ. ಈ ಸಮಯದಲ್ಲಿ, ಅನೇಕ ಸ್ಥಳಗಳಿಂದ ಧನಾಗಮನದ ಹಾದಿಯು ತೆರೆದುಕೊಳ್ಳುವುದು. ಕಚೇರಿಯ ಕೆಲಸದ ಕಾರಣದಿಂದ ನೀವು ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಭವಿಷ್ಯದಲ್ಲಿ ವಿತ್ತೀಯ ಲಾಭವಾಗುವ ಸಾಧ್ಯತೆ ಇದೆ.
ಧನು ರಾಶಿ : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಲಾ ರಾಶಿಯಲ್ಲಿ ಬುಧನ ಪ್ರವೇಶವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯವಾಗಿ ಸಾಬೀತಾಗಲಿದೆ. ಈ ಸಮಯದಲ್ಲಿ ಆದಾಯ ಹೆಚ್ಚಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಹೂಡಿಕೆಯಿಂದ ಲಾಭವಾಗುವ ಸಾಧ್ಯತೆಗಳು ಹೆಚ್ಚಿವೆ. ಪ್ರೇಮ ಸಂಬಂಧಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ನಿಕಟತೆಯು ಹೆಚ್ಚುತ್ತಿರುವಂತೆ ತೋರುತ್ತದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಜೀವನದಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಈ ಸಮಯದಲ್ಲಿ ನೀಲಮಣಿ ಧರಿಸುವುದು ಅದೃಷ್ಟ.
ಕುಂಭ ರಾಶಿ : ಬುಧ ಗ್ರಹವು ತುಲಾ ರಾಶಿಯಲ್ಲಿ ಸಂಕ್ರಮಿಸಿದ ತಕ್ಷಣ, ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಉತ್ತುಂಗಕ್ಕೆ ಏರಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಹಲವಾರು ಹೊಸ ಜವಾಬ್ದಾರಿಗಳನ್ನು ಕಾಣಬಹುದು.
ಕನ್ಯಾರಾಶಿ : ದೀಪಾವಳಿಯ ನಂತರ ಬುಧ ಸಂಕ್ರಮಣದ ಪರಿಣಾಮವು ಈ ರಾಶಿಯ ಜನರ ಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರಾಶಿಯ ಎರಡನೇ ಮನೆಯಲ್ಲಿ ಬುಧ ಸಂಕ್ರಮಿಸಲಿದ್ದಾನೆ. ಈ ಸಮಯದಲ್ಲಿ, ನಿಮಗೆ ಆಕಸ್ಮಿಕ ಧನಲಾಭವಾಗಬಹುದು. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಿರಲಿದೆ. ಮಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಅತ್ಯುತ್ತಮವಾಗಿದೆ.