ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಟಿ-20 ವಿಶ್ವಕಪ್‌ನಲ್ಲಿ ಸೂಪರ್-12 ಸುತ್ತಿನ ಮೇಲೆ ಕಣ್ಣಿಟ್ಟಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಟೂರ್ನಿಯ ಮೊದಲ ಪಂದ್ಯ ಆಡಲಿದೆ. ಈ ನಡುವೆ ರೋಹಿತ್ ಶರ್ಮಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಗೇಲಿ ಮಾಡುತ್ತಿರುವುದು ಕಂಡುಬಂದಿದೆ.
ಸೂರ್ಯನನ್ನು ಅನುಕರಿಸಿ ಗೇಲಿ ಮಾಡಿದ ರೋಹಿತ್
ಮುಂಬೈ ಇಂಡಿಯನ್ಸ್ ತಂಡದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಫೋಟೋಗೆ ಪೋಸು ನೀಡುವ ರೀತಿಯನ್ನು ಅನುಕರಿಸಿ ರೋಹಿತ್ ಗೇಲಿ ಮಾಡಿದ್ದಾರೆ. ‘ನಾನು ಈಗ ಪ್ರತಿ ಏರ್‍ಪೋರ್ಟ್‍ಗೆ ಸೂರ್ಯಕುಮಾರ್ ಯಾದವ್ ಹೋದಾಗ ಯಾವ ರೀತಿ ಫೋಟೋಗೆ ಪೋಸು ನೀಡುತ್ತಾನೆ ಅನ್ನೋದನ್ನು ನಿಮಗೆ ತೋರಿಸುತ್ತೇನೆ’ ಅಂತಾ ರೋಹಿತ್ ಹೇಳುತ್ತಾರೆ. ನಂತರ ಅದೇ ರೀತಿ ಸೂರ್ಯನನ್ನು ಅನುಕರಿಸಿ ಗೇಲಿ ಮಾಡುತ್ತಾರೆ. ಇದನ್ನು ಕಂಡ ಸೂರ್ಯಕುಮಾರ್ ಮತ್ತು ಇನ್ನುಳಿದ ಆಟಗಾರರು ಜೋರಾಗಿ ನಗುತ್ತಾರೆ.
ಇದನ್ನೂ ಓದಿ: BCCI vs PCB : ಜಯ್ ಶಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಪಾಕ್ ಕ್ರಿಕೆಟ್ ಮಂಡಳಿ!
ಟಿ-20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಪ್ರತಿಯೊಂದು ಪಂದ್ಯಕ್ಕೂ ಬೇರೆ ಬೇರೆ ಕಡೆ ಪ್ರಯಾಣಿಸುತ್ತಾರೆ. ಈ ವೇಳೆ ವಿಮಾನ ನಿಲ್ದಾಣಗಳಲ್ಲಿ ನಿಂತುಕೊಂಡು ಫೋಟೋಗಳಿಗೆ ಫೋಸು ನೀಡುತ್ತಾರೆ. ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ.
ಸೂರ್ಯಕುಮಾರ್ ಸಹ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಆಡಲು ಪ್ರಯಾಣಿಸುವಾಗ ವಿವಿಧ ವಿಮಾನ ನಿಲ್ದಾಣಗಳಲ್ಲಿ ಯಾವ ಯಾವ ರೀತಿ ಪೋಸು ನೀಡಬಹುದು ಅನ್ನೋದರ ಬಗ್ಗೆ ರೋಹಿತ್ ಶರ್ಮಾ ತಿಳಿಸಿಕೊಟ್ಟಿದ್ದಾರೆ. ತಮ್ಮನ್ನು ಅನುಕರಿಸಿ ರೋಹಿತ್ ಗೇಲಿ ಮಾಡಿದ್ದಕ್ಕೆ ಸೂರ್ಯಕುಮಾರ್ ಯಾದವ್ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Team India : ಟೀಂಗೆ ಮರಳಲಿದ್ದಾನೆ ಈ ಸ್ಪೋಟಕ ಆಟಗಾರ, ಎದುರಾಳಿಗಳ ಎದೆಯಲ್ಲಿ ಶುರುವಾಗಿದೆ ನಡುಕ!
ಅ.23ರಂದು ಹೈವೋಲ್ಟೇಜ್ ಮ್ಯಾಚ್!
ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಲೀಗ್ ಹಂತದಲ್ಲಿಯೇ ನಿರ್ಗಮಿಸಿದ್ದರೆ, ಪಾಕಿಸ್ತಾನ ತಂಡವು ಸೂಪರ್-4 ಪ್ರವೇಶಿಸಿತ್ತು. ಕಳೆದ ವರ್ಷದ ಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ತಂಡ ಸೋಲಿಸಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕೆರಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ