Puneetha Parva: ಅಪ್ಪುವನ್ನು ಮುದ್ದಾಗಿ ಯಾರೂ ಕರೆಯದ ಹೆಸರಿನಿಂದ ಕರಿತಿದ್ರು ಸುಧಾಮೂರ್ತಿ!! ಯಾವ ಹೆಸರು ಗೊತ್ತಾ?

Puneetha Parva: ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಗಣ್ಯರ ಆಗಮನ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರಭಾಷೆಯ ತಾರೆಯರು ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಇನ್​ಫೋಸಿಸ್ ಫೌಂಡೇಷನ್​ ಮುಖ್ಯಸ್ಥೆ ಸುಧಾಮೂರ್ತಿ ಅವರು ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೆ ಯಾರಿಗೂ ತಿಳಿಯದ ಸತ್ಯ ಸಂಗತಿಯೊಂದನ್ನು ಹೇಳಿದರು.

Written by - Bhavishya Shetty | Last Updated : Oct 22, 2022, 12:31 AM IST
    • ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸವಿ ನೆನಪಿನಲ್ಲಿ ಕಾರ್ಯಕ್ರಮ
    • ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದ ‘ಪುನೀತ ಪರ್ವ’
    • ಸ್ಯಾಂಡಲ್ ವುಡ್ ‘ಕಂದ’ನನ್ನು ಸ್ಮರಿಸಿದ ಅನೇಕ ಗಣ್ಯರು
Puneetha Parva: ಅಪ್ಪುವನ್ನು ಮುದ್ದಾಗಿ ಯಾರೂ ಕರೆಯದ ಹೆಸರಿನಿಂದ ಕರಿತಿದ್ರು ಸುಧಾಮೂರ್ತಿ!! ಯಾವ ಹೆಸರು ಗೊತ್ತಾ?   title=
Infosys foundation

Puneetha Parva: ಇಂದು  ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸವಿ ನೆನಪಿನಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿ ಸ್ಯಾಂಡಲ್ ವುಡ್ ‘ಕಂದ’ನನ್ನು ಸ್ಮರಿಸಿದರು.

ಇದನ್ನೂ ಓದಿ: ಗಂಧದ ಗುಡಿ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಗಣ್ಯರ ಆಗಮನ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರಭಾಷೆಯ ತಾರೆಯರು ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಇನ್​ಫೋಸಿಸ್ ಫೌಂಡೇಷನ್​ ಮುಖ್ಯಸ್ಥೆ ಸುಧಾಮೂರ್ತಿ ಅವರು ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೆ ಯಾರಿಗೂ ತಿಳಿಯದ ಸತ್ಯ ಸಂಗತಿಯೊಂದನ್ನು ಹೇಳಿದರು.

ಸುಧಾ ಮೂರ್ತಿಯವರು ಪುನೀತ್ ರನ್ನು ಅವರ ಬಾಲ್ಯ ಹೆಸರಿನಿಂದ ಕರೆಯಿತ್ತಿದ್ದರಂತೆ. ಅಭಿಮಾನಿಗಳ ಪಾಲಿನ ಅಪ್ಪು, ಸುಧಾ ಮೂರ್ತಿಯವರಿಗೆ ಮಾತ್ರ ಲೋಹಿತ್ ಆಗಿದ್ದರು. ಲೋಹಿತ್ ಎಂಬ ಹೆಸರು ಪುನೀತ್ ಅವರ ಬಾಲ್ಯದ ಹೆಸರು. ಆದರೆ ಅದನ್ನು ಪುನೀತ್ ಎಂದು ಬದಲಾಯಿಸಲಾಗಿತ್ತು. ಆದರೆ ಸುಧಾಮೂರ್ತಿ ಅವರು ಮಾತ್ರ ಪುನೀತ್ ರನ್ನು ಲೋಹಿತ್ ಎಂದೇ ಕರೆಯುತ್ತಿದ್ದರು.

 

 

ಇನ್ನು ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕರುನಾಡಿಗೆ ಗುಡ್ ನ್ಯೂಸ್: ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ

ಅಷ್ಟೇ ಅಲ್ಲದೆ, ನವೆಂಬರ್ 1 ರಂದು ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯದ ಶ್ರೇಷ್ಠ ಪ್ರಶಸ್ತಿಯಾಗಿರುವ ‘ಕರ್ನಾಟಕ ರತ್ನ ಪ್ರಶಸ್ತಿ’ಯನ್ನು ಸರ್ಕಾರ ನೀಡುತ್ತಿದೆ. ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲಾ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ. ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News