November Horoscope 2022: ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ನವೆಂಬರ್, ನಿಮ್ಮ ರಾಶಿಯೂ ಇದೆಯೇ?

November Horoscope 2022: ನವೆಂಬರ್‌ನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಈ ಸಂದರ್ಭದಲ್ಲಿ ಅವರು ಅಪಾರ ಹಣಕಾಸಿನ ಪ್ರಯೋಜನ ಪಡೆಯುವುದರ ಜೊತೆಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಹೊಂದಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

Written by - Yashaswini V | Last Updated : Oct 27, 2022, 11:57 AM IST
  • ನವೆಂಬರ್ 2022 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮವಾಗಿರುತ್ತದೆ.
  • ಈ ಸಂದರ್ಭದಲ್ಲಿ ಅವರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ.
  • ಆದಾಯವು ಹೆಚ್ಚಾಗಲಿದ್ದು ಹಣದ ಸುರಿಮಳೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ.
November Horoscope 2022: ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ನವೆಂಬರ್, ನಿಮ್ಮ ರಾಶಿಯೂ ಇದೆಯೇ?  title=
November monthly horoscope

November Horoscope 2022: ನವೆಂಬರ್ ತಿಂಗಳು ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿವೆ.   ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವೆಂಬರ್‌ನಲ್ಲಿ ಕೆಲವು ಪ್ರಮುಖ ಗ್ರಹಗಳ ಸಂಚಾರವು ಕೆಲವು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿದೆ. ನವೆಂಬರ್ 2022 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮವಾಗಿರುತ್ತದೆ.  ಈ ಸಂದರ್ಭದಲ್ಲಿ ಅವರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಆದಾಯವು ಹೆಚ್ಚಾಗಲಿದ್ದು ಹಣದ ಸುರಿಮಳೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ.  ನವೆಂಬರ್ ತಿಂಗಳು ಯಾವ ರಾಶಿಯವರಿಗೆ ಶುಭ ಎಂದು ತಿಳಿಯೋಣ...

ನವೆಂಬರ್ ರಾಶಿ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿಯ ಜೊತೆಗೆ ಹಣದ ಸುರಿಮಳೆ: 
ವೃಷಭ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವ ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಸುದ್ದಿ ಸಿಗಬಹುದು. ದೊಡ್ಡ ಕಂಪನಿಯಲ್ಲಿ ಅವಕಾಶ ಸಿಗುವ ಸಾಧ್ಯ್ಯತೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. ಆದಾಯ ಹೆಚ್ಚಲಿದೆ. ತಾಳ್ಮೆ ಮತ್ತು ಸಂಯಮದಿಂದ ಕೆಲಸ ಮಾಡಿದರೆ ಎಲ್ಲಾ ಕೆಲಸಗಳು ಕೈಗೂಡುತ್ತವೆ. ಕೋಪ ಮತ್ತು ವಾದಗಳನ್ನು ತಪ್ಪಿಸಿ. ನೀವು ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯುತ್ತೀರಿ. ಪ್ರವಾಸಕ್ಕೆ ಹೋಗಬಹುದು. ಉದ್ಯಮಿಗಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿದೇಶಿ ಪ್ರವಾಸಕ್ಕೆ ಹೋಗಬಹುದು. 

ಮಿಥುನ ರಾಶಿ:  
ನವೆಂಬರ್ ತಿಂಗಳು ಮಿಥುನ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದ್ದು ಹಲವು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ.  ಕೋಪವನ್ನು ತಪ್ಪಿಸಿ. ವಿದೇಶ ಪ್ರಯಾಣ ಇರಬಹುದು. ವೃತ್ತಿಜೀವನ ಉತ್ತಮವಾಗಿರಲಿದೆ. ವರ್ಗಾವಣೆ ಆಗಬಹುದು. 

ಇದನ್ನೂ ಓದಿ- Chanakya Niti: ಪುರುಷರ ಈ ಗುಣಗಳಿಗೆ ಹೆಣ್ಮಕ್ಳು ಬೇಗ ಮನಸೋಲ್ತಾರೆ!

ಕರ್ಕಾಟಕ ರಾಶಿ: 
ನವೆಂಬರ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಬಹುದು. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆದಾಯ ಹೆಚ್ಚಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವಿರಿ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ನಿಮ್ಮ ಎಲ್ಲಾ ಕೆಲಸ-ಕಾರ್ಯಗಳಲ್ಲಿ ನಿಮ್ಮ ಸಂಗಾತಿಯು ಬೆಂಬಲವಾಗಿ ನಿಲ್ಲುತ್ತಾರೆ. 

ಕನ್ಯಾ ರಾಶಿ: 
ಈ ಸಮಯದಲ್ಲಿ ನೀವು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ವ್ಯಾಪಾರ-ವ್ಯವಹಾರಗಳು  ವೃದ್ಧಿಯಾಗಲಿದೆ. ಪೂರ್ಣ ಉತ್ಸಾಹದಿಂದ ಕೆಲಸ ಮಾಡಿ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತದೆ. ನಿಮ್ಮ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಸ್ನೇಹಿತರು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಮಾತಿನಲ್ಲಿ ನಮ್ರತೆ ಇರುತ್ತದೆ, ಇದರಿಂದಾಗಿ ಅನೇಕ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಒಳ್ಳೆಯ ಆಹಾರವನ್ನು ಆನಂದಿಸಿ. 

ತುಲಾ ರಾಶಿ: 
ಈ ಸಮಯದಲ್ಲಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಈ ಕಾರಣದಿಂದಾಗಿ, ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ವೃತ್ತಿ ಜೀವನದಲ್ಲಿ ನೀವು ಕಂಡ ಕನಸು ನನಸಾಗಲಿದೆ.  ಆದರೆ, ಕೋಪದ ಕೈಗೆ ಬುದ್ದಿ ಕೊಡದಿರಿ. ನಿಮ್ಮೆಲ್ಲಾ ಕೆಲಸಗಳಿಗೆ ಕುಟುಂಬದ ಬೆಂಬಲ ಸಿಗಲಿದೆ. ಯಾರೊಂದಿಗೂ ವಿವಾದ ಬೇಡ. ಹಣವು ಪ್ರಯೋಜನಕಾರಿಯಾಗಲಿದೆ. 

ಇದನ್ನೂ ಓದಿ- Budh Shukra Yuti in Tula 2022: ಲಕ್ಷ್ಮಿ-ನಾರಾಯಣ ಯೋಗ- ಈ 3 ರಾಶಿಯವರಿಗೆ ಹಣದ ಮಳೆ

ಧನು ರಾಶಿ:
ತಾಳ್ಮೆಯಿಂದ ಕೆಲಸ ಮಾಡಿ, ನೀವು ಕೈ ಹಾಕಿದ ಪ್ರತಿ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಆಡಳಿತದಿಂದ ನೆರವು ನೀಡಲಾಗುವುದು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಕೌಟುಂಬಿಕ ಪ್ರವಾಸಕ್ಕೆ ಹೋಗಬಹುದು. ಹೊಸ ಆದಾಯದ ಆಯ್ಕೆಗಳು ಲಭ್ಯವಾಗಲಿವೆ. ಮಿತ್ರರ ನೆರವಿನಿಂದ ಕೆಲಸ-ಕಾರ್ಯಗಳು ಸುಲಭವಾಗಲಿದೆ. 

ಕುಂಭ ರಾಶಿ:
ನವೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ವ್ಯಾಪ್ತಿ ವಿಸ್ತಾರವಾಗಲಿದೆ. ಆದಾಯ ಹೆಚ್ಚಲಿದೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ಆದರೆ, ಸಂಗಾತಿಯ ಆರೋಗ್ಯ ನಿಮ್ಮನ್ನು ಚಿಂತಿಸುವಂತೆ ಮಾಡಬಹುದು, ಅವರ ಆರೋಗ್ಯದ ಬಗ್ಗೆ ನಿಗಾವಹಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News