ನವದೆಹಲಿ: ಕ್ಯಾಡ್ಬರಿ ಭಾನುವಾರದಂದು ಬಹಿಷ್ಕಾರದ ಪ್ರವೃತ್ತಿಗೆ ಗುರಿಯಾಗಿದೆ, ತಮ್ಮ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ ಅನ್ನು ಗೋಮಾಂಸದಿಂದ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ, ಈ ಹಿನ್ನೆಲೆಯಲ್ಲಿ ಇದು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ಬಳಕೆದಾರರು ದೂರಿದ್ದಾರೆ.
ಸಾಮಾನ್ಯವಾಗಿ ನಾವು ಚಲನಚಿತ್ರಗಳು, ಸೆಲೆಬ್ರಿಟಿಗಳು, ಬಟ್ಟೆ ಬ್ರ್ಯಾಂಡ್‌ಗಳು, ಜಾಹೀರಾತುಗಳು ಆಗಾಗ ಭಾವನೆಗಳಿಗೆ ಧಕ್ಕೆಯನ್ನುಂಟು ಮಾದುವುದರಿಂದಾಗಿ ಬಹಿಷ್ಕಾರಕ್ಕೆ ಒಳಪಡುವುದನ್ನು ನಾವು ನೋಡುತ್ತೇವೆ. ಈ ಟ್ರೆಂಡ್ ಈಗ ಆಹಾರ ಮತ್ತು ತಿನಿಸುಗಳಿಗೂ ಕೂಡ ವ್ಯಾಪಿಸಿದೆ.
Please Buy Indian Sweets,
Indian Sweets are made from Desi Cow milk , So when you buy indian sweets , you save our Gaumata, you save our culture।#boycottcadbury pic.twitter.com/yQGtRrQCck— Priya Chauhan (@Chauhan_LPriya) October 30, 2022
ಇದನ್ನೂ ಓದಿ: Virat Kohli Sand Art: ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್! ಏನದು ನೀವೇ ನೋಡಿ
ಕ್ಯಾಡ್ಬರಿಯ ವೆಬ್‌ಪುಟದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಅದು ಅವರ ಉತ್ಪನ್ನಗಳಲ್ಲಿ ಬಳಸಲಾದ ಜೆಲಾಟಿನ್ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ ಎಂದು ಉಲ್ಲೇಖಿಸುತ್ತದೆ ಇದು ವೈರಲ್ ಆದ ನಂತರ ಬಹಿಷ್ಕಾರದ ಕರೆಗಳು ಹೆಚ್ಚಾಗುತ್ತಿವೆ.
Its Trending On Top . #BoycottCadbury pic.twitter.com/IXaBhXVXNO
— Dr. Prachi Sadhvi (@Sadhvi_prachi) October 30, 2022
Aaj boycott gang chocolate ko boycott kar raha hai 😂
Aise hi chalte raha toh kal ko sabun, toilet paper, kache baniyan ka bhi number aa sakta hai
— Dhruv Rathee (@dhruv_rathee) October 30, 2022
ಕಳೆದ ವರ್ಷವೂ ಕೂಡ ವಿವಾದ ಉಂಟಾಗಿತ್ತು ಆ ವೇಳೆ ಭಾರತದಲ್ಲಿ ತಯಾರಾದ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ ಮತ್ತು ಹೊದಿಕೆಯ ಮೇಲಿನ ಹಸಿರು ಚುಕ್ಕೆ" ಅದನ್ನು ಪ್ರಮಾಣೀಕರಿಸುತ್ತದೆ ಎಂದು ಕಂಪನಿಯು ಸ್ಪಷ್ಟಪಡಿಸಿತ್ತು.ಇತ್ತೀಚಿನ ಬಹಿಷ್ಕಾರದ ಪ್ರವೃತ್ತಿಗೆ ಕಂಪನಿಯು ಇನ್ನೂ ಪ್ರತಿಕ್ರಿಯಿಸಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ