ಯುಕೆಯಲ್ಲಿ ಆಧುನಿಕ ಗುಲಾಮಗಿರಿಗೆ ತುತ್ತಾದ 50 ಭಾರತೀಯ ವಿದ್ಯಾರ್ಥಿಗಳು!

ಕಾರ್ಮಿಕ ಶೋಷಣೆ ತಡೆಗಾಗಿ ಸ್ಥಾಪಿತವಾಗಿರುವ ಲಂಡನ್ ನ ಗುಪ್ತಚರ ಮತ್ತು ಕಾರ್ಮಿಕ ಶೋಷಣೆಯ ತನಿಖಾ ಸಂಸ್ಥೆಯಾದ Gangmasters and Labour Abuse Authority (GLAA) ಕಾರ್ಮಿಕ ನಿಂದನೆ ಸಂಬಂಧ ವರದಿ ಪ್ರಕಟಿಸಿ ನ್ಯಾಯಾಲಯದಿಂದ ಆದೇಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.

Written by - Bhavishya Shetty | Last Updated : Feb 11, 2023, 03:44 PM IST
    • ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿ
    • ನಾರ್ತ್ ವೇಲ್ಸ್‌ನ ಕೇರ್ ಹೋಮ್‌ಗಳಲ್ಲಿ ಕೆಲಸ ಮಾಡುವ ಸುಮಾರು 50 ಕ್ಕೂ ಹೆಚ್ಚು ಜನರು
    • ಈ ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಭಾರತೀಯ ಹೈಕಮಿಷನ್
ಯುಕೆಯಲ್ಲಿ ಆಧುನಿಕ ಗುಲಾಮಗಿರಿಗೆ ತುತ್ತಾದ 50 ಭಾರತೀಯ ವಿದ್ಯಾರ್ಥಿಗಳು! title=
Modern Slavery

ಕೇರ್ ಹೋಮ್‌ಗಳಲ್ಲಿ ಕೆಲಸ ಮಾಡುವ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದು, ಭಾರತದಿಂದ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ಸಹಾಯ ಮತ್ತು ಸಮಾಲೋಚನೆಗಾಗಿ ಮಿಷನ್ ಅನ್ನು ಸಂಪರ್ಕಿಸುವಂತೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಸೂಚನೆ ನೀಡಿದೆ.

ನಾರ್ತ್ ವೇಲ್ಸ್‌ನ ಕೇರ್ ಹೋಮ್‌ಗಳಲ್ಲಿ ಕೆಲಸ ಮಾಡುವ ಸುಮಾರು 50 ಕ್ಕೂ ಹೆಚ್ಚು ಜನರು ಆಧುನಿಕ ಗುಲಾಮಗಿರಿಗೆ ಗುರಿಯಾದ ಪ್ರಕರಣ ಬೆಳಕಿಗೆ ಬಂದಿದೆ.  

ಇದನ್ನೂ ಓದಿ: Renouncing Indian citizenship: 2022 ರಲ್ಲಿ ಎಷ್ಟು ಜನ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಗೊತ್ತೇ? ಇಲ್ಲಿದೆ ಶಾಕಿಂಗ್ ಉತ್ತರ!

ಕಾರ್ಮಿಕ ಶೋಷಣೆ ತಡೆಗಾಗಿ ಸ್ಥಾಪಿತವಾಗಿರುವ ಲಂಡನ್ ನ ಗುಪ್ತಚರ ಮತ್ತು ಕಾರ್ಮಿಕ ಶೋಷಣೆಯ ತನಿಖಾ ಸಂಸ್ಥೆಯಾದ Gangmasters and Labour Abuse Authority (GLAA) ಕಾರ್ಮಿಕ ನಿಂದನೆ ಸಂಬಂಧ ವರದಿ ಪ್ರಕಟಿಸಿ ನ್ಯಾಯಾಲಯದಿಂದ ಆದೇಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ "ಕಳೆದ 14 ತಿಂಗಳುಗಳಲ್ಲಿ 50 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿ ಮತ್ತು ಕಾರ್ಮಿಕ ನಿಂದನೆಯ ಸಂಭಾವ್ಯ ಬಲಿಪಶುಗಳಾಗಿದ್ದಾರೆ" ಎಂದು GLAA ಹೇಳಿದೆ.

ಈ ವರದಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಭಾರತೀಯ ಹೈಕಮಿಷನ್, "ಈ ಸುದ್ದಿಯನ್ನು ಗಮನಿಸಿದ ನಮಗೆ ಆತಂಕವಾಗಿದೆ. ಇದನ್ನು ಅನುಭವಿಸಿದ ಭಾರತೀಯ ವಿದ್ಯಾರ್ಥಿಗಳು, ದಯವಿಟ್ಟು ನಮ್ಮನ್ನು pol3.london@mea.gov.in ನಲ್ಲಿ ಸಂಪರ್ಕಿಸಿ. ನಾವು ಸಹಾಯ/ಸಮಾಲೋಚನೆಯನ್ನು ಒದಗಿಸುತ್ತೇವೆ. ಪ್ರತಿಕ್ರಿಯೆಯಲ್ಲಿ ಗೌಪ್ಯತೆಯ ಬಗ್ಗೆ ನಾವು ನಿಮಗೆ ಭರವಸೆ ನೀಡುತ್ತೇವೆ" ಎಂದು ಆಯೋಗ ಟ್ವೀಟ್ ಮಾಡಿದೆ.

ಮ್ಯಾಥ್ಯೂ ಐಸಾಕ್, 32, ಜಿನು ಚೆರಿಯನ್, 30, ಎಲ್ದೋಸ್ ಚೆರಿಯನ್, 25, ಎಲ್ದೋಸ್ ಕುರಿಯಾಚನ್, 25, ಮತ್ತು ಜಾಕೋಬ್ ಲಿಜು, 47 ನಾರ್ತ್ ವೇಲ್ಸ್‌ನಾದ್ಯಂತ ಕೇರ್ ಹೋಮ್‌ಗಳಲ್ಲಿ ಕೆಲಸ ಮಾಡುವ ದುರ್ಬಲ ಭಾರತೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಮತ್ತು ಶೋಷಣೆ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: NRI Investors: ಭಾರತದಲ್ಲಿ ಹೂಡಿಕೆ ಮಾಡಲು ಅನಿವಾಸಿ ಭಾರತೀಯರಿಗೆ 2023 ಉತ್ತಮ ಸಮಯ: ಕಾರಣವೇನು ಗೊತ್ತಾ?

ಎಲ್ಲಾ ಐವರು ಮೂಲತಃ ಕೇರಳದವರು ಎನ್ನಲಾಗಿದೆ. ಡಿಸೆಂಬರ್ 2021 ಮತ್ತು ಮೇ 2022 ರ ನಡುವೆ GLAA ನಿಂದ ಬಂಧಿಸಲ್ಪಟ್ಟಿದ್ದಾರೆ. ಇವರಲ್ಲ ಅಬರ್‌ಗೆಲೆ, ಪ್ವ್ಲ್‌ಹೆಲಿ, ಲಾಂಡುಡ್ನೊ ಮತ್ತು ಕೊಲ್ವಿನ್ ಬೇಯಲ್ಲಿರುವ ಕೇರ್ ಹೋಂಗಳ ಲಿಂಕ್‌ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News