Renouncing Indian citizenship: 2022 ರಲ್ಲಿ ಎಷ್ಟು ಜನ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಗೊತ್ತೇ? ಇಲ್ಲಿದೆ ಶಾಕಿಂಗ್ ಉತ್ತರ!

Renouncing Indian citizenship: ಪೌರತ್ವ ತ್ಯಜಿಸಿದ ಭಾರತೀಯರ ವರ್ಷವಾರು ಸಂಖ್ಯೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ. 2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿದ್ದರೆ, 2016 ರಲ್ಲಿ 1,41,603 ಜನರು ಮತ್ತು 2017 ರಲ್ಲಿ 1,33,049 ಜನರು ತ್ಯಜಿಸಿದ್ದಾರೆ ಎಂದು ಜೈಶಂಕರ್ ಹೇಳಿದರು

Written by - Bhavishya Shetty | Last Updated : Feb 10, 2023, 01:44 AM IST
    • 16 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ
    • ಹಿಂದೆ 2020 ರಲ್ಲಿ 85,256 ಮಂದಿ ತ್ಯಜಿಸಿದ್ದರು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ
    • ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ
Renouncing Indian citizenship: 2022 ರಲ್ಲಿ ಎಷ್ಟು ಜನ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಗೊತ್ತೇ? ಇಲ್ಲಿದೆ ಶಾಕಿಂಗ್ ಉತ್ತರ!  title=
Indian Citizenship

Renouncing Indian citizenship: ಕಳೆದ ವರ್ಷ 2,25,620 ಸೇರಿದಂತೆ 2011ರಿಂದ 16 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಇದು ಈ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಾಗಿದ್ದು, ಹಿಂದೆ 2020 ರಲ್ಲಿ 85,256 ಮಂದಿ ತ್ಯಜಿಸಿದ್ದರು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಪೌರತ್ವ ತ್ಯಜಿಸಿದ ಭಾರತೀಯರ ವರ್ಷವಾರು ಸಂಖ್ಯೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ಇದನ್ನೂ ಓದಿ:  NRIಗಳ ಭಾರತದಲ್ಲಿ ಉಳಿಯುವ ದಿನ ವಿಸ್ತರಣೆಗೆ ಅವಕಾಶ ನೀಡಿ: ಕೇಂದ್ರಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಮನವಿ

2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿದ್ದರೆ, 2016 ರಲ್ಲಿ 1,41,603 ಜನರು ಮತ್ತು 2017 ರಲ್ಲಿ 1,33,049 ಜನರು ತ್ಯಜಿಸಿದ್ದಾರೆ ಎಂದು ಜೈಶಂಕರ್ ಹೇಳಿದರು.

2018 ರಲ್ಲಿ ಈ ಸಂಖ್ಯೆ 1,34,561 ಆಗಿದ್ದರೆ, 2019 ರಲ್ಲಿ 1,44,017, 2020 ರಲ್ಲಿ 85,256 2021 ರಲ್ಲಿ 1,63,370 ಜನರು ಮತ್ತು 2022 ರಲ್ಲಿ 2,25,620 ಜನ ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇನ್ನು 2011 ರ ಡೇಟಾದ ಪ್ರಕಾರ 1,22,819 ಆಗಿದ್ದರೆ, 2012 ರಲ್ಲಿ 1,20,923, 2013 ರಲ್ಲಿ 1,31,405 ಮತ್ತು 2014 ರಲ್ಲಿ 1,29,328 ಆಗಿತ್ತು ಎಂದು ಎಸ್ ಜೈಶಂಕರ್ ತಿಳಿಸಿದ್ದಾರೆ.

2011 ರಿಂದ ಭಾರತೀಯ ಪೌರತ್ವವನ್ನು ತ್ಯಜಿಸಿದ ಒಟ್ಟು ಭಾರತೀಯರ ಸಂಖ್ಯೆ 16,63,440 ಎಂದು ತಿಳಿಸಿದ್ದಾರೆ. ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ಮೂರು ವರ್ಷಗಳಲ್ಲಿ ಐದು ಭಾರತೀಯ ಪ್ರಜೆಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪೌರತ್ವವನ್ನು ಪಡೆದಿದ್ದಾರೆ ಎಂದು ಹೇಳಿದರು.

ಜೈಶಂಕರ್ ಅವರು ಭಾರತೀಯರು ಪೌರತ್ವ ಪಡೆದ 135 ದೇಶಗಳ ಪಟ್ಟಿಯನ್ನು ಸಹ ಒದಗಿಸಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಇತ್ತೀಚಿನ ತಿಂಗಳಲ್ಲಿ ಯುಎಸ್ ಕಂಪನಿಗಳು ವೃತ್ತಿಪರರನ್ನು ವಜಾಗೊಳಿಸಿರುವ ವಿಷಯದ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಎಂದು ಹೇಳಿದರು.

ಇದನ್ನೂ ಓದಿ:  Aadhaar for NRI: ಅನಿವಾಸಿ ಭಾರತೀಯರು ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

"ಇವುಗಳಲ್ಲಿ ನಿರ್ದಿಷ್ಟ ಶೇಕಡಾವಾರು ಜನರು H-1B ಮತ್ತು L1 ವೀಸಾಗಳಲ್ಲಿ ಭಾರತೀಯ ಪ್ರಜೆಗಳಾಗಿರಬಹುದು. ಭಾರತ ಸರ್ಕಾರವು ಯುಎಸ್ ಸರ್ಕಾರದೊಂದಿಗೆ ಐಟಿ ವೃತ್ತಿಪರರು ಸೇರಿದಂತೆ ಉನ್ನತ ನುರಿತ ಉದ್ಯೋಗಿಗಳ ಚಲನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸಿದೆ" ಎಂದು ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News