NRI Viral Video: ಕೆಂಪು ಲೆಹೆಂಗಾ ತೊಟ್ಟು ಕೆನಡಾದ ಮಂಜಿನಲ್ಲಿ ಸೊಂಟ ಬಳುಕಿಸಿದ ದೇಸಿ ಬ್ಯೂಟಿ: ವಿಡಿಯೋ ನೋಡಿ

Today Viral Video: ದೇಸಿ ಮಹಿಳೆಯೊಬ್ಬರು ಹಿಮದಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಚಮ್ಮಕ್ ಚಲೋ ಹಾಡು ರಾವನ್ ಸಿನಿಮಾದ ಪ್ರಖ್ಯಾತ ಹಾಡಾಗಿದೆ. ಪ್ರತಿಯೊಬ್ಬ ಬಾಲಿವುಡ್ ಅಭಿಮಾನಿಗಳು ತಮ್ಮ ಜೀವನದಲ್ಲಿ ಅದೇ ರೀತಿ ಕ್ಷಣವನ್ನು ಅನುಭವಿಸಬೇಕು ಎಂದು ಭಾವಿಸುತ್ತಾರೆ. ಈಕೆ ಕೂಡ ಬಾಲಿವುಡ್ ಸ್ಟೈಲ್ ನಲ್ಲಿ ತನ್ನ ಲೈಫ್ ಎಂಜಾಯ್ ಮಾಡಿದ್ದಾಳೆ.

Written by - Bhavishya Shetty | Last Updated : Nov 18, 2022, 05:55 PM IST
    • ಜನರು ಚಳಿಗಾಲದಲ್ಲಿ ಸಾಕಷ್ಟು ಮಂಜಿನ ಅನುಭವವನ್ನು ಪಡೆಯುತ್ತಾರೆ
    • ಕೆನಡಾದ ಮಂಜಿನ ಪ್ರದೇಶದಲ್ಲಿ ಭಾರತೀಯ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿದ್ದಾರೆ
    • ಬಾಲಿವುಡ್ ಸ್ಟೈಲ್ ನಲ್ಲಿ ತನ್ನ ಲೈಫ್ ಎಂಜಾಯ್ ಮಾಡಿದ್ದಾಳೆ
NRI Viral Video: ಕೆಂಪು ಲೆಹೆಂಗಾ ತೊಟ್ಟು ಕೆನಡಾದ ಮಂಜಿನಲ್ಲಿ ಸೊಂಟ ಬಳುಕಿಸಿದ ದೇಸಿ ಬ್ಯೂಟಿ: ವಿಡಿಯೋ ನೋಡಿ title=
Viral Video

Today Viral Video: ಭಾರತದಲ್ಲಿ ಮಂಜು ಬೀಳುವ ಪ್ರದೇಶಗಳು ಕಡಿಮೆ. ಆದರೆ ಕಾಶ್ಮೀರ ಅಥವಾ ಇತರ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಸ್ನೋ ಫಾಲ್ ಗಳನ್ನು ಕಾಣಬಹುದು. ಆದರೆ ಕೆನಡದಲ್ಲಿ ಮಾತ್ರ ಸಾಕಷ್ಟು ಹಿಮಮಳೆಯಾಗುತ್ತದೆ. ಅಲ್ಲಿನ ಜನರು ಚಳಿಗಾಲದಲ್ಲಿ ಸಾಕಷ್ಟು ಮಂಜಿನ ಅನುಭವವನ್ನು ಪಡೆಯುತ್ತಾರೆ. ಇದೀಗ ಕೆನಡಾದ ಮಂಜಿನ ಪ್ರದೇಶದಲ್ಲಿ ಭಾರತೀಯ ಮಹಿಳೆಯೊಬ್ಬರು ಲೆಹೆಂಗಾ ತೊಟ್ಟು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ: ಲೆಹಂಗಾ ವಿಚಾರಕ್ಕೆ ಮದುವೆ ದಿನವೇ ಮುರಿದು ಬಿತ್ತು ವಿವಾಹ.!

ದೇಸಿ ಮಹಿಳೆಯೊಬ್ಬರು ಹಿಮದಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಚಮ್ಮಕ್ ಚಲೋ ಹಾಡು ರಾವನ್ ಸಿನಿಮಾದ ಪ್ರಖ್ಯಾತ ಹಾಡಾಗಿದೆ. ಪ್ರತಿಯೊಬ್ಬ ಬಾಲಿವುಡ್ ಅಭಿಮಾನಿಗಳು ತಮ್ಮ ಜೀವನದಲ್ಲಿ ಅದೇ ರೀತಿ ಕ್ಷಣವನ್ನು ಅನುಭವಿಸಬೇಕು ಎಂದು ಭಾವಿಸುತ್ತಾರೆ. ಈಕೆ ಕೂಡ ಬಾಲಿವುಡ್ ಸ್ಟೈಲ್ ನಲ್ಲಿ ತನ್ನ ಲೈಫ್ ಎಂಜಾಯ್ ಮಾಡಿದ್ದಾಳೆ.

ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ  ‘ನಿತು ಜೀವನಾನಿ' ಎಂಬವರು ಹಂಚಿಕೊಂಡಿದ್ದಾರೆ. ಕೆನಡಾದಲ್ಲಿ ಋತುವಿನ ಮೊದಲ ಹಿಮಪಾತದಲ್ಲಿ ಹಿಮದಿಂದ ಆವೃತವಾದ ಮನೆಗಳ ಹೊರಗೆ ನಿತು ನೃತ್ಯ ಮಾಡಿದ್ದಾರೆ. ಚಮ್ಮಕ್ ಚಲೋ ಹಾಡಿನಲ್ಲಿರುವ ಸ್ಟೆಪ್ ಗಳನ್ನೇ ಇವರು ಹಾಕಿದ್ದಾರೆ.

 
 
 
 

 
 
 
 
 
 
 
 
 
 
 

A post shared by Nitu Jiwnani (@nitu_jiwnani)

 

 

ಇದನ್ನೂ ಓದಿ: Sexual Assault in India: ಇಂದೆಥಾ ನೀಚ ಕೃತ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ತಂದೆ, ಚಿಕ್ಕಪ್ಪ, ಅಜ್ಜ!

ಕೆಂಪು ಲೆಹೆಂಗಾದಲ್ಲಿ ಸುಂದರವಾಗಿ ಕಾಣುವ ನಿತು ಡ್ಯಾನ್ಸ್ ರೀಲ್ ಈಗಾಗಲೆ 511k ವೀಕ್ಷಣೆಗಳು ಮತ್ತು 11k ಲೈಕ್ ಗಳನ್ನು ಪಡೆದುಕೊಂಡಿದೆ. ಹಿಮದಲ್ಲಿ ನಿತು ಅವರು ಡ್ಯಾನ್ಸ್ ಮಾಡುವುದನ್ನು ಕಣ್ತುಂಬಿಕೊಂಡ ನೆಟ್ಟಿಗರು ವಿಧ ವಿಧವಾದ ಕಮೆಂಟ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News