ಎನ್‌ಆರ್‌ಐಗಳಿಗೆ ಸಿಹಿಸುದ್ದಿ: ಇನ್ಮುಂದೆ ಭಾರತದ ಸೇವೆಗಳಿಗೆ ನೇರವಾಗಿ ಹಣ ಪಾವತಿಸಬಹುದು

ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಕ್ರಾಸ್-ಬಾರ್ಡರ್ ಇನ್‌ವರ್ಡ್ ಬಿಲ್ ಪಾವತಿ ಸೌಲಭ್ಯದ ಮೂಲಕ ಮಾಡಬಹುದಾಗಿದೆ. ಭಾರತದಲ್ಲಿ ನಿಯಮಿತವಾಗಿ ಪಾವತಿ ಮಾಡುವ ಎನ್‌ಆರ್‌ಐಗಳಿಗೆ ಈ ಕ್ರಮವು ಅನುಕೂಲಕರವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

Written by - Bhavishya Shetty | Last Updated : Aug 6, 2022, 03:16 PM IST
  • ಅನಿವಾಸಿ ಭಾರತೀಯ ಇನ್ಮುಂದೆ ಭಾರತದ ಸೇವೆಗಳಿಗೆ ನೇರವಾಗಿ ಹಣ ಪಾವತಿಸಬಹುದು
  • ಭಾರತ್ ಬಿಲ್ ಪಾವತಿ ವ್ಯವಸ್ಥೆ ಕ್ರಾಸ್-ಬಾರ್ಡರ್ ಇನ್‌ವರ್ಡ್ ಬಿಲ್ ಪಾವತಿ ಸೌಲಭ್ಯ
  • ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಹಣಕಾಸು ನೀತಿ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ
ಎನ್‌ಆರ್‌ಐಗಳಿಗೆ ಸಿಹಿಸುದ್ದಿ: ಇನ್ಮುಂದೆ ಭಾರತದ ಸೇವೆಗಳಿಗೆ ನೇರವಾಗಿ ಹಣ ಪಾವತಿಸಬಹುದು title=
NRI

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಭಾರತದಲ್ಲಿ ವಾಸಿಸುವ ಅವರ ಕುಟುಂಬದ ಸದಸ್ಯರ ಪರವಾಗಿ ಉಪಯುಕ್ತತೆ, ಶಿಕ್ಷಣ ಮತ್ತು ಇತರ ಬಿಲ್ ಪಾವತಿಗಳನ್ನು ಮಾಡಲು ಅವಕಾಶ ನೀಡುವ ಸಲುವಾಗಿ ಪ್ರಸ್ತಾಪ ಸಲ್ಲಿಸಿದೆ. 

ಇದನ್ನೂ ಓದಿ: Astrology Tips : ಅಂಗೈಯಲ್ಲಿ ನೀಡುವ ಈ ವಸ್ತುಗಳು ನಿಮ್ಮಗೆ ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುತ್ತವೆ!

ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಕ್ರಾಸ್-ಬಾರ್ಡರ್ ಇನ್‌ವರ್ಡ್ ಬಿಲ್ ಪಾವತಿ ಸೌಲಭ್ಯದ ಮೂಲಕ ಮಾಡಬಹುದಾಗಿದೆ. ಭಾರತದಲ್ಲಿ ನಿಯಮಿತವಾಗಿ ಪಾವತಿ ಮಾಡುವ ಎನ್‌ಆರ್‌ಐಗಳಿಗೆ ಈ ಕ್ರಮವು ಅನುಕೂಲಕರವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಕ್ರಮವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಮ್ಮ ಹಣಕಾಸು ನೀತಿ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ. ಇದನ್ನು ಜಾರಿಗೆ ತರಲು ಕೇಂದ್ರ ಬ್ಯಾಂಕ್ ಶೀಘ್ರದಲ್ಲೇ ಸೂಚನೆಗಳನ್ನು ನೀಡಲಿದೆ.

ಫಿನೋ ಪೇಮೆಂಟ್ಸ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಶ್ ಅಹುಜಾ ಪ್ರಕಾರ, ಬಿಬಿಪಿಎಸ್ ಪ್ರಸ್ತುತ ನಿವಾಸಿ ಭಾರತೀಯರು ಮಾತ್ರ ಹಣವನ್ನು ಪಾವತಿ ಮಾಡಲು ಅವಕಾಶ ನೀಡುತ್ತದೆ. ಆದರೆ ಎನ್‌ಆರ್‌ಐಗಳು ಸಾಮಾನ್ಯವಾಗಿ ಹಣವನ್ನು ಭಾರತದಲ್ಲಿನ ಸಂಬಂಧಿಕರ ಖಾತೆಗೆ ವರ್ಗಾಯಿಸುತ್ತಾರೆ. ನಂತರ ಅವರು ಅದನ್ನು ಪಾವತಿ ಮಾಡಬಹುದು.

ಬಿಬಿಪಿಎಸ್‌ ಎನ್ನುವುದು ಆರ್‌ಬಿಐನಿಂದ ಪರಿಕಲ್ಪಿತವಾದ ಪಾವತಿ ವ್ಯವಸ್ಥೆಯಾಗಿದೆ. ಬ್ಯಾಂಕ್ ಶಾಖೆಗಳು ಮತ್ತು ವ್ಯಾಪಾರ ವರದಿಗಾರರ ಮೂಲಕ ಗ್ರಾಹಕರಿಗೆ ಡಿಜಿಟಲ್ ಮತ್ತು ಭೌತಿಕವಾಗಿ ಬಿಲ್ ಪಾವತಿಗಳನ್ನು ಮಾಡಲು ಸಹಾಯ ಮಾಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ನಡೆಸಲ್ಪಡುತ್ತದೆ.

ಇದನ್ನೂ ಓದಿ: ಬ್ಯಾಂಕ್ ಸಾಲ ಮಾಡಿ ಎಸ್ಕೇಪ್ ಆದ ಉದ್ಯಮಿಗಳ ವಿರುದ್ಧ ಗುಡುಗಿದ ನಿವೃತ್ತ ಕಮಿಷನರ್ ಭಾಸ್ಕರ್ ರಾವ್

ಉದಾಹರಣೆಗೆ, ಸೇವಾ ಪೂರೈಕೆದಾರರ ವೆಬ್‌ಸೈಟ್‌ಗೆ ಹೋಗುವ ಮೂಲಕ ನಿಮ್ಮ ಮೊಬೈಲ್ ಫೋನ್ ಬಿಲ್ ಅನ್ನು ನೀವು ಪಾವತಿಸಬಹುದು. ಈ ಸಂದರ್ಭದಲ್ಲಿ, ಪಾವತಿಯನ್ನು ನೇರವಾಗಿ ಸೇವಾ ಪೂರೈಕೆದಾರರಿಗೆ ಮಾಡಲಾಗುತ್ತದೆ. ಇಲ್ಲಿ, ಬಿಬಿಪಿಎಸ್‌ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೆ, ನೀವು ಆನ್‌ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿಯನ್ನು ಮಾಡಬೇಕಾದರೆ, ನಿಮ್ಮ ಪಾವತಿಯನ್ನು ಬಿಬಿಪಿಎಸ್‌ ಮೂಲಕ ರೂಟ್ ಮಾಡಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News