ಕರುನಾಡ ಆಚೆಗೂ ಹಬ್ಬಿದೆ ಕನ್ನಡದ ಹುಡುಗ ಕಿರಣ್ ರಾಜ್ ಜನಪ್ರಿಯತೆ

ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯದ "ಕನ್ನಡತಿ" ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ.  

Written by - YASHODHA POOJARI | Last Updated : Apr 20, 2022, 05:24 PM IST
  • Colors rishtey uk ವಾಹಿನಿಯಲ್ಲಿ"ಕನ್ನಡತಿ" ಧಾರಾವಾಹಿ
  • "ಅಜ್ನಬಿ ಬನೇ ಹಮ್ ಸಫರ್" ಎಂಬ ಹೆಸರಿನಲ್ಲಿ ಪ್ರಸಾರ
  • ಕರುನಾಡ ಆಚೆಗೂ ಹಬ್ಬಿದ ಕಿರಣ್ ರಾಜ್ ಜನಪ್ರಿಯತೆ
ಕರುನಾಡ ಆಚೆಗೂ ಹಬ್ಬಿದೆ ಕನ್ನಡದ ಹುಡುಗ ಕಿರಣ್ ರಾಜ್ ಜನಪ್ರಿಯತೆ  title=
Kiran Raj

ಒಂದು ಕಾಲದಲ್ಲಿ ಹಿರಿತೆರೆ ಹಾಗೂ ಕಿರುತೆರೆಗೆ ಸಾಕಷ್ಟು ವ್ಯತ್ಯಾಸವಿತ್ತು. ಈಗ ಹಾಗಲ್ಲ. ಕಿರುತೆರೆಯಲ್ಲಿ ಕೂಡ ಸಾಕಷ್ಟು ಕಾರ್ಯಕ್ರಮಗಳು, ಧಾರಾವಾಹಿಗಳು ಅದ್ದೂರಿ ಹಾಗೂ ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಅಷ್ಟೇ ಜನಪ್ರಿಯವೂ ಆಗುತ್ತಿವೆ. ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯದ "ಕನ್ನಡತಿ" ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. "ಅಜ್ನಬಿ ಬನೇ ಹಮ್ ಸಫರ್" ಎಂಬ ಹೆಸರಿನಲ್ಲಿ Colors rishtey uk ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.

ಇದನ್ನು ಓದಿ: ನಟಿ ಕಾಜಲ್‌ ಅಗರ್‌ವಾಲ್‌ ಮಗುವಿನ ಹೆಸರು ಬಹಿರಂಗ!

ಲಾಕ್‌ಡೌನ್ ಸಮಯದಲ್ಲಿ ಅಲ್ಲಿನ ಎಷ್ಟೋ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಇಲ್ಲಿ ಡಬ್ ಆಗಿ ಪ್ರಸಾರವಾಗಲು ಆರಂಭವಾದವು. ಆಗ ನಿಜಕ್ಕೂ ಹೀಗೆ ಆದರೆ ಮುಂದೇನು? ಎಂದು ಕೆಲವರಿಗೆ ಅನಿಸಿದ್ದು ಸಹಜ. ಈಗ ಇಲ್ಲಿನ ಜನಪ್ರಿಯ ಧಾರಾವಾಹಿ "ಕನ್ನಡತಿ" ಆ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಆಗಿದೆ. ಮರಾಠಿಯಲ್ಲೂ ಕೂಡ ಈ ಧಾರಾವಾಹಿ ರಿಮೇಕ್ ಆಗಿದೆ.

ನಟ ಕಿರಣ್ ರಾಜ್‌ಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟ ಧಾರಾವಾಹಿ "ಕನ್ನಡತಿ". ಅದರಲ್ಲೂ‌ ಯುವ ಪೀಳಿಗೆಯವರಿಗಂತೂ ಕಿರಣ್ ರಾಜ್ ಕಂಡರೆ ಅಪಾರ ಅಭಿಮಾನ. ಅಂತಹ ಮನಮೋಹಕ ನಟ ಕಿರಣ್ ರಾಜ್. ಇವರ ನಟನೆಯ ಧಾರಾವಾಹಿಯೊಂದು ಹಿಂದಿಗೆ ಡಬ್ ಆಗುತ್ತಿರುವುದು ಕಿರಣ್ ರಾಜ್ ಅವರಿಗೂ ಖುಷಿ ತಂದಿದೆಯಂತೆ.

ಇದನ್ನು ಓದಿ: 'ಒಂದಂಕೆ ಕಾಡು' ಮೋಷನ್ ಪೋಸ್ಟರ್ ರಿಲೀಸ್! ಕಿರುತೆರೆಯಿಂದ ಬೆಳ್ಳಿತೆರೆಗೆ ನಿರ್ದೇಶಕ ರಾಮಚಂದ್ರ ವೈದ್ಯ

ಹಾಗೆ ನೋಡಿದರೆ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಹಿಂದೆ ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಬ್ಯುಸಿಯಾಗಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ "ಬಡ್ಡೀಸ್" ಚಿತ್ರದ ಟೀಸರ್ ಏಪ್ರಿಲ್ 25ರಂದು ಬಿಡುಗಡೆಯಾಗಲಿದೆ. ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ. "ಬಡ್ಡೀಸ್" ಬಿಡುಗಡೆಗೆ ಕಿರಣ್ ರಾಜ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News