ದೋಹಾದಲ್ಲಿ ಕನ್ನಡತಿ ಸುಮಾ ಮಹೇಶ್ ಗೌಡಗೆ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

ಬೆಂಗಳೂರು ಮೂಲದ ಸುಮಾ ಮಹೇಶ್‌ ಗೌಡರವರು ಖ್ಯಾತ ಒಲಿಂಪಿಯನ್ ಫುಟ್ಬಾಲ್‌ ಆಟಗಾರ ಕೆಂಪಯ್ಯನವರ ಪುತ್ರಿ. ಭಾರತೀಯ ಬೇನೇವೊಲೆಂಟ್ ಫೋರಂ ಕೌನ್ಸೆಲಿಂಗ್ ಹೌಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಮಹಿಳಾ ಸಂಬಂಧಿತ ಕಾರ್ಯಕ್ರಮಗಳನ್ನು ನಿರ್ದೇಶಿಸಿರುಬ ಅವರು, ನಿರೂಪಣೆಯಲ್ಲಿ ಖ್ಯಾತಿ ಗಳಿಸಿದ್ದಾರೆ.  

Written by - Bhavishya Shetty | Last Updated : Jul 9, 2022, 04:40 PM IST
  • ಕನ್ನಡತಿ ಸುಮಾ ಮಹೇಶ್‌ ಗೌಡರಿಗೆ ಗಲ್ಫ್ ಮಾಧ್ಯಮಂ ಶೆ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿ
  • ಬೆಂಗಳೂರು ಮೂಲದ ಸುಮಾ ಮಹೇಶ್‌ ಗೌಡ
  • ಜ್ಯೂರಿ ವಿಶೇಷ ಪ್ರಶಸ್ತಿ - ಸಮಾಜ ಸೇವೆʼ ಪ್ರಶಸ್ತಿಯನ್ನು ನೀಡಿ ಗೌರವ
ದೋಹಾದಲ್ಲಿ ಕನ್ನಡತಿ ಸುಮಾ ಮಹೇಶ್ ಗೌಡಗೆ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ title=
Gulf Madhyamam Se-Q Excellence Award

ನಿರೂಪಕಿಯಾಗಿ ಪ್ರಸಿದ್ಧಿ ಪಡೆದಿರುವ ಕನ್ನಡತಿ ಸುಮಾ ಮಹೇಶ್‌ ಗೌಡರಿಗೆ 2022ನೇ ಸಾಲಿನ ಗಲ್ಫ್ ಮಾಧ್ಯಮಂ ಶೆ-ಕ್ಯೂ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ. ದೋಹಾದಲ್ಲಿ ನಡೆದ ಸಮಾರಂಭದಲ್ಲಿ ʼಜ್ಯೂರಿ ವಿಶೇಷ ಪ್ರಶಸ್ತಿ - ಸಮಾಜ ಸೇವೆʼ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಇಟಲಿಯಲ್ಲಿ ಕೊರೊನಾ ರೋಗಿಗಳ ಸೇವೆಗೈದ ಕನ್ನಡಿಗ: ಮೆಚ್ಚುಗೆ ವ್ಯಕ್ತಪಡಿಸಿದ ಬಿಎಸ್‌ವೈ

ಬೆಂಗಳೂರು ಮೂಲದ ಸುಮಾ ಮಹೇಶ್‌ ಗೌಡರವರು ಖ್ಯಾತ ಒಲಿಂಪಿಯನ್ ಫುಟ್ಬಾಲ್‌ ಆಟಗಾರ ಕೆಂಪಯ್ಯನವರ ಪುತ್ರಿ. ಭಾರತೀಯ ಬೇನೇವೊಲೆಂಟ್ ಫೋರಂ ಕೌನ್ಸೆಲಿಂಗ್ ಹೌಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಮಹಿಳಾ ಸಂಬಂಧಿತ ಕಾರ್ಯಕ್ರಮಗಳನ್ನು ನಿರ್ದೇಶಿಸಿರುಬ ಅವರು, ನಿರೂಪಣೆಯಲ್ಲಿ ಖ್ಯಾತಿ ಗಳಿಸಿದ್ದಾರೆ.  

ಸೈಯದ್‌ ಶೌಕತ್‌ ಅಲಿಗೆ ಸನ್ಮಾನ: 
ಇನ್ನು ಇದೇ ಕಾರ್ಯಕ್ರಮದಲ್ಲಿ ದೋಹಾದ ಐಡಿಯಲ್ ಇಂಡಿಯನ್ ಸ್ಕೂಲ್‌ನ ನಿರ್ಗಮಿತ ಪ್ರಾಂಶುಪಾಲ ಸೈಯದ್‌ ಶೌಕತ್‌ ಅಲಿಗೆ ಕರ್ನಾಟಕ ಸಂಘ ಕತಾರ್ ಸಲುವಾಗಿ ಸನ್ಮಾನ ಮಾಡಲಾಯಿತು. ಭಾರತೀಯ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. 

ಇದನ್ನೂ ಓದಿ: ಒಂದೇ ಪ್ಲಾನ ಅಡಿ ಪ್ರೈಮ್, ಹಾಟ್ ಸ್ಟಾರ್, ಜೀ 5 ಸೇರಿದಂತೆ ಒಟ್ಟು 13 ಓಟಿಟಿ ಉಚಿತ ವೀಕ್ಷಿಸಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸಿದ್ಧ ಗಾಯಕಿ, ನಟಿ ಮಮತಾ ಮೋಹನ್ ದಾಸ್,  ಭಾರತದ ರಾಯಭಾರ ಕಚೇರಿಯ ಮೊದಲನೇ ಕಾರ್ಯದರ್ಶಿ ಶಂಕಪಾಲ್, ಭಾರತೀಯ ಸಂಸ್ಕೃತಿ ಕೇಂದ್ರದ ಅಧ್ಯಕ್ಷ ಪಿ ಎನ್ ಬಾಬುರಾಜನ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸೇರಿ ಅನೇಕರು ಭಾಗವಹಿಸಿದ್ದರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News