NRI News: 100,000 ವಿಸಾ ನೇಮಕಾತಿಗಳಿಗಾಗಿ ಸ್ಲಾಟ್ ಗಳನ್ನು ತೆರೆಯಲು ಮುಂದಾದ ಯುನೈಟೆಡ್ ಸ್ಟೇಟ್ಸ್, ನವೆಂಬರ್ ನಲ್ಲಿ ಸಂದರ್ಶನಗಳ ಪುನಾರಂಭ

NRI News: ಯುನೈಟೆಡ್ ಸ್ಟೇಟ್ಸ್ ಮುಂದಿನ ಕೆಲವು ವಾರಗಳಲ್ಲಿ H ಮತ್ತು L ವರ್ಕರ್ ವೀಸಾಗಳಿಗಾಗಿ ಅದರಲ್ಲಿಯೂ ವಿಶೇಷವಾಗಿ ಡ್ರಾಪ್ ಬಾಕ್ಸ್ ಪ್ರಕರಣಗಳಿಗಾಗಿ 100,000 ಸ್ಲಾಟ್‌ಗಳನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಇದು ವಿಶೇಷವಾಗಿರಲಿದೆ.  

Written by - Nitin Tabib | Last Updated : Oct 1, 2022, 03:04 PM IST
  • ವಿದ್ಯಾರ್ಥಿಗಳಿಗಾಗಿ, ರಾಯಭಾರ ಕಚೇರಿಯು ನವೆಂಬರ್ ಮಧ್ಯಾವಧಿಯಿಂದ ಡಿಸೆಂಬರ್ ಅಂತ್ಯದವರೆಗೆ ಸಂದರ್ಶನಗಳನ್ನು ನಡೆಸಲಿದೆ.
  • ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳ ಮೊದಲಾರ್ಧವು ಅಕ್ಟೋಬರ್ ಮಧ್ಯದಲ್ಲಿ ಮತ್ತು ಉಳಿದವುಗಳು ನವೆಂಬರ್ ಮಧ್ಯದಲ್ಲಿ ತೆರೆದುಕೊಳ್ಳಲಿವೆ.
  • F ವಿಸಾಗಳು, M,J ವಿಸಾ ಅರ್ಜಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
NRI News: 100,000 ವಿಸಾ ನೇಮಕಾತಿಗಳಿಗಾಗಿ ಸ್ಲಾಟ್ ಗಳನ್ನು ತೆರೆಯಲು ಮುಂದಾದ ಯುನೈಟೆಡ್ ಸ್ಟೇಟ್ಸ್, ನವೆಂಬರ್ ನಲ್ಲಿ ಸಂದರ್ಶನಗಳ ಪುನಾರಂಭ title=
NRI News

NRI News: ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‌ಗಳು ನವೆಂಬರ್ ಮಧ್ಯದಿಂದ ವಿದ್ಯಾರ್ಥಿ ವೀಸಾಗಳಿಗಾಗಿ ಸಂದರ್ಶನಗಳನ್ನು ಆರಂಭಿಸಲಿವೆ ಎಂದು ಯುಎಸ್ ರಾಯಭಾರ ಕಚೇರಿ ಕಾನ್ಸುಲರ್ ವ್ಯವಹಾರಗಳ ಸಚಿವ ಡಾನ್ ಹೆಫ್ಲಿನ್ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಮುಂದಿನ ಕೆಲವು ವಾರಗಳಲ್ಲಿ H ಮತ್ತು L ವರ್ಕರ್ ವೀಸಾಗಳಿಗಾಗಿ ಅದರಲ್ಲಿಯೂ ವಿಶೇಷವಾಗಿ ಡ್ರಾಪ್ ಬಾಕ್ಸ್ ಪ್ರಕರಣಗಳಿಗಾಗಿ 100,000 ಸ್ಲಾಟ್‌ಗಳನ್ನು ತೆರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಇದು ವಿಶೇಷವಾಗಿರಲಿದೆ.

ಈ ಕುರಿತು ಮಾಹಿತಿ ನೀಡಿರುವ ಅವರು, "ಕೋವಿಡ್ ಆರಂಭವಾದಾಗಿನಿಂದ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಮನೆಗೆ ಹಿಂತಿರುಗಲು ಸಾಧ್ಯವಾಗದ H ಅಥವಾ L ವೀಸಾ ಹೊಂದಿರುವ ಅನೇಕ ಜನರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದಾರೆ, ನಾವು ಅವರ ಪರ ಸಹಾನುಭೂತಿ ಹೊಂದಿದ್ದೇವೆ" ಎಂದಿದ್ದಾರೆ.

ಇನ್ನೊಂದೆಡೆ, ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರವಾಸಿಗರು ಮತ್ತು ವ್ಯಾಪಾರಸ್ಥರು ಬಳಸುವ B1/B2 ವಿಸಾಗಳಿಗೆ ಇರುವ ವೈಟಿಂಗ್ ಸಮಯವನ್ನು ಕಡಿತಗೊಳಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ರಾಯಭಾರ ಕಚೇರಿ ಘೋಷಿಸಿದೆ. ಪ್ರಸ್ತುತ ಈ ವಿಸಾಗಳಿಗಾಗಿ 800 ದಿನಗಳ ವೇಟಿಂಗ್ ಅವಧಿ ಗೊತ್ತುಪಡಿಸಲಾಗಿದೆ.

 

ಇದನ್ನೂ ಓದಿ-NRI News: ಈ ಬಾರಿಯ ತನ್ನ ನೀತಿ ಸಮಿತಿ ಸಭೆಯಲ್ಲಿ FCNR ಸ್ವಾಪ್ ವಿಂಡೋ ಪರಿಚಯಿಸುತ್ತಾ RBI?

ವಿದ್ಯಾರ್ಥಿಗಳಿಗಾಗಿ, ರಾಯಭಾರ ಕಚೇರಿಯು ನವೆಂಬರ್ ಮಧ್ಯಾವಧಿಯಿಂದ ಡಿಸೆಂಬರ್ ಅಂತ್ಯದವರೆಗೆ ಸಂದರ್ಶನಗಳನ್ನು ನಡೆಸಲಿದೆ. ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳ ಮೊದಲಾರ್ಧವು ಅಕ್ಟೋಬರ್ ಮಧ್ಯದಲ್ಲಿ ಮತ್ತು ಉಳಿದವುಗಳು ನವೆಂಬರ್ ಮಧ್ಯದಲ್ಲಿ ತೆರೆದುಕೊಳ್ಳಲಿವೆ. F ವಿಸಾಗಳು, M,J ವಿಸಾ ಅರ್ಜಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-NRI News: ಅಮೇರಿಕಾದಲ್ಲಿ ಹೆಚ್-1ಬಿ ವಿಸಾಗಳ ಸ್ಟಾಂಪಿಂಗ್ ಗೆ ಶಿಫಾರಸು ಮಾಡಿದ ಅಧ್ಯಕ್ಷೀಯ ಆಯೋಗ

ಇನ್ನೊಂದೆಡೆ, ರಾಯಭಾರ ಕಛೇರಿಯಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳ ಕುರಿತು ಮಾತನಾಡಿರುವ ಹೆಪ್ಲಿನ್, "ಮುಂದಿನ ವರ್ಷದ ಈ ಅವಧಿಯ ವೇಳೆಗೆ ನಾವು ಶೇ.100 ರಷ್ಟು ಸಿಬ್ಬಂದಿಯನ್ನು ಹೊಂದಲು ಸಾಧ್ಯವಾಗಲಿದೆ ಮತ್ತು ಇದರಿಂದ ರಾಯಭಾರ ಕಛೇರಿಗಳು ಮತ್ತು ದೂತಾವಾಸಗಳು 2023ರ ವೇಳೆಗೆ ಎಂದಿಗಿಂತಲೂ ಹೆಚ್ಚಿನ ವಿಸಾಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗಲಿದೆ" ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News