PM Modi US Visit: ಪ್ರಧಾನಿ ನರೇಂದ್ರ ಮೋದಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಮೂರನೇ ಬಾರಿಗೆ ಅಮೆರಿಕಾಗೆ ಭೇಟಿ ನೀಡಿದ್ದು, ಇದು ಪ್ರಧಾನಿ ಮೋದಿಯವರ ರಾಜ್ಯ ಪ್ರವಾಸವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಅವರು ಅಮೆರಿಕಾಗೆ ಆಗಮಿಸಿದ್ದು, ಅಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನು ಪ್ರಧಾನಿ ಮೋದಿ ಪ್ರವಾಸದ ವೇಳೆ ಎಲ್ಲಿಗೆ ಹೋದರೂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ಅಂತೆಯೇ ಬುಧವಾರ ವಾಷಿಂಗ್ಟನ್ ತಲುಪುತ್ತಿದ್ದಂತೆ, ಅಲ್ಲಿ ಅವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಬರಮಾಡಿಕೊಂಡರು.
ಇದು ಪ್ರಧಾನಿ ಮೋದಿಯವರ ಮೂರನೇ ಅಮೆರಿಕ ಭೇಟಿಯಾಗಿದ್ದು, ಪ್ರತಿ ಬಾರಿಯೂ ವಿವಿಧ ಅಧ್ಯಕ್ಷರು ಅವರನ್ನು ಸ್ವಾಗತಿಸಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಅಮೆರಿಕಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರನ್ನು ಸ್ವಾಗತಿಸಿದರು. ಇದಾದ ನಂತರ ಪ್ರಧಾನಿ ಮೋದಿ 21 ಸೆಪ್ಟೆಂಬರ್ 2019 ರಂದು ಅಮೇರಿಕಾಗೆ ಭೇಟಿ ಕೊಟ್ಟಾಗ ಅಂದು ಅಧಿಕಾರದಲ್ಲಿದ್ದ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದರು.
ಭಾರತದ 75 ವರ್ಷಗಳ ಇತಿಹಾಸದಲ್ಲಿ ಪ್ರಧಾನಿ ಮೋದಿ ಸೇರಿದಂತೆ 9 ಪ್ರಧಾನಿಗಳು 34 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು 1949 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರನ್ನು ಅಂದಿನ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಸ್ವಾಗತಿಸಿದರು.
ಏಳು ವರ್ಷಗಳ ನಂತರ ಮತ್ತೊಮ್ಮೆ ಪಂಡಿತ್ ನೆಹರೂ ಅಮೆರಿಕಾಗೆ ಭೇಟಿಕೊಟ್ಟರು. ಆ ಸಮಯದಲ್ಲಿ ಅಧ್ಯಕ್ಷ ಡಿ.ಐಸೆನ್‌ಹೋವರ್ ಅವರನ್ನು ಸ್ವಾಗತಿಸಿದರು. ಮೂರನೇ ಬಾರಿಗೆ, ಐದು ದಿನಗಳ ಪ್ರವಾಸದಲ್ಲಿ 1961 ರಲ್ಲಿ ಅಮೆರಿಕಗೆ ತೆರಳಿದ ನೆಹರು ಅವರನ್ನು ಆ ಸಮಯದಲ್ಲಿ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಬರಮಾಡಿಕೊಂಡರು. ಇದಾದ ನಂತರ ಉಭಯ ದೇಶಗಳ ನಡುವೆ ಶೃಂಗಸಭೆ ನಡೆಯಿತು.
ಇದನ್ನೂ ಓದಿ: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೆಹ್ವಾಗ್?
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಹ ಮೂವರು ವಿವಿಧ ಅಧ್ಯಕ್ಷರು ಸ್ವಾಗತಿಸಿದರು. 1966ರಲ್ಲಿ ಇಂದಿರಾಗಾಂಧಿ ಅವರು ಅಮೆರಿಕಕ್ಕೆ ಹೋದಾಗ ಅಧ್ಯಕ್ಷರಾಗಿದ್ದವರು ಲಿಂಡನ್ ಬಿ ಜಾನ್ಸನ್. ಇದಾದ ನಂತರ 1971ರಲ್ಲಿ ರಿಚರ್ಡ್ ನಿಕ್ಸನ್ ಅಧ್ಯಕ್ಷರಾಗಿದ್ದಾಗ ಇಂದಿರಾಗಾಂಧಿ ಅಮೆರಿಕ ಭೇಟಿ ಕೊಟ್ಟಿದ್ದರು. 1982ರಲ್ಲಿ ಇಂದಿರಾ ಗಾಂಧಿ ಮೂರನೇ ಬಾರಿಗೆ ಅಮೆರಿಕಕ್ಕೆ ಹೋದಾಗ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಸ್ವಾಗತಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ